ಇ ಸಮಾಚಾರ ಡಿಜಿಟಲ್ ನ್ಯೂಸ್(esamachara  digital news) ಅಂಕೋಲಾ(Ankola) : ವಿಭೂತಿ ಫಾಲ್ಸ್ (Vibhuti Falls)  ಪ್ರವಾಸಕ್ಕೆ ಬಂದಿದ್ದ ಯುವಕನೊಬ್ಬ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ  ಘಟನೆ  ನಡೆದಿದೆ.

ತೆಲಂಗಾಣ ಮೂಲದ(Telangan Native)  ಅಜಯ್ ಶೀಲಾಮ್ (24) ಮೃತ ದುರ್ದೈವಿ ಎಂದು ಗುರುತಿಸಲಾಗಿದೆ. ತೆಲಂಗಾಣದಿಂದ ಒಟ್ಟು ಆರು  ಸ್ನೇಹಿತರು ಅಂಕೋಲಾ(Ankola) ತಾಲೂಕಿನ ಅಚವೆ ಗ್ರಾಮ(Achave Village) ಪಂಚಾಯತ್ ವ್ಯಾಪ್ತಿಯಲ್ಲಿರುವ ವಿಭೂತಿ ಫಾಲ್ಸ್(Vibhuti Falls) ಪ್ರವಾಸಕ್ಕೆ ಬಂದಿದ್ದರು. ಈ ವೇಳೆ ನೀರಿಗೆ  ಇಳಿದಾಗ ಅಕಸ್ಮಾತ್ ಆಳಕ್ಕೆ ಜಾರಿದ ಪರಿಣಾಮ ಅಜಯ್ ಎಂಬಾತ ಮುಳುಗಿದ್ದಾನೆಂದು  ತಿಳಿದುಬಂದಿದೆ.

ಈ ವೇಳೆ  ಸ್ಥಳದಲ್ಲಿದ್ದ ಪ್ರವಾಸಿಗರು  ರಕ್ಷಣೆಗೆ ಪ್ರಯತ್ನಿಸಿದರೂ ಪ್ರಯೋಜನವಾಗಲಿಲ್ಲ. ಘಟನೆಯ ಮಾಹಿತಿ ತಿಳಿದ ಕೂಡಲೇ ಅಂಕೋಲಾ ಅಗ್ನಿಶಾಮಕ ದಳದ(Ankola Fire brigade) ಸಿಬ್ಬಂದಿಗಳು ಸ್ಥಳಕ್ಕೆ ದೌಡಾಯಿಸಿ, ಸ್ಥಳೀಯರ ಸಹಕಾರದೊಂದಿಗೆ ಶೋಧ ಕಾರ್ಯಾಚರಣೆ ನಡೆಸಿದ್ದರು. ಕೆಲ ಹೊತ್ತಿನ ನಂತರ   ಯುವಕನ ಮೃತದೇಹವನ್ನು ನೀರಿನಿಂದ ಮೇಲಕ್ಕೆತ್ತಲಾಯಿತು.

ಘಟನೆಯಿಂದಾಗಿ  ಸ್ಥಳದಲ್ಲಿ ಶೋಕ ವಾತಾವರಣ ನಿರ್ಮಾಣವಾಯಿತು.  ಪ್ರಕರಣ ಸಂಬಂಧ ಅಂಕೋಲಾ ಪೊಲೀಸ್ ಠಾಣೆಯಲ್ಲಿ(Ankola Police Station) ದಾಖಲಾಗಿದ್ದು, ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.

ಇದನ್ನು ಓದಿ : ರಾಷ್ಟ್ರೀಯ ಹೆದ್ದಾರಿಯಲ್ಲಿ ಭೀಕರ ಅಪಘಾತ. ಓರ್ವ ದುರ್ಮರಣ. ಇನ್ನೋರ್ವ ‌ಗಂಭೀರ.

ಭಟ್ಕಳದಲ್ಲಿ ಮುಂದುವರಿದಿದೆ ಗೋಗಳ್ಳರ ಕೃತ್ಯ. ಡಬಲ್ ನಂಬರ್ ಪ್ಲೇಟ್ ಅಳವಡಿಸಿ ಅಮಾಯಕರ ಹೆಸರು ಕೆಡಿಸೋ ಪ್ರಯತ್ನ.