ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news) ದಾಂಡೇಲಿ(Dandeli) : ಐಪಿಎಲ್ ಕ್ರಿಕೆಟ್ ನಲ್ಲಿ ಬೆಟ್ಟಿಂಗ್ ನಲ್ಲಿ (IPL Cricket Betting) ತೊಡಗಿದ ಹಲವರನ್ನು ಪೊಲೀಸರು ಬಂಧಿಸಿದ ಘಟನೆ ನಗರದ ವಿವಿಧ ಕಡೆಗಳಲ್ಲಿ ನಡೆದಿದೆ.
ದಾಂಡೇಲಿ ನಗರದ(Dandeli Town) ಅಂಬೇವಾಡಿಯ(Ambewadi) ಸರ್ಕಾರಿ ಪ್ರಾಥಮಿಕ ಶಾಲೆಯ ಹತ್ತಿರ ದಾಳಿ ನಡೆಸಿದ ನಗರ ಠಾಣೆಯ ಪಿಎಸ್‌ಐ ಅಮೀನ್ ಅತ್ತಾರ ಮೂವರನ್ನು ಬಂಧಿಸಿದ್ದಾರೆ. ನಿರ್ಮಲ ನಗರದ ಅನಿಲ್ ಲಕ್ಷ್ಮಣ್ ಬಳ್ಳಾರಿ, ಟಿ ಆರ್ ಟಿ ಕ್ರಾಸ್ ಹತ್ತಿರದ ಬಾಲರಾಜ ನಾಗೇಶ ಗಿರಿಯಾಲ ಮತ್ತು ಶ್ರವಣ್ ಬಂಧಿತರಾಗಿದ್ದಾರೆ.
ಐಪಿಎಲ್ ಕ್ರಿಕೆಟ್(IPL Cricket) ಪಂದ್ಯಾವಳಿಯ ಸೋಲು ಗೆಲುವಿಗಾಗಿ ಹಣವನ್ನ ತೊಡಗಿಸಿ ಜೂಜಾಟ ನಡೆಸುತ್ತಿರುವ ವೇಳೆ ಪೊಲೀಸರು ದಾಳಿ(Police Raid) ನಡೆಸಿದ್ದರು. ಈ ಸಂದರ್ಭದಲ್ಲಿ 25 ಸಾ. ರೂ. ನಗದು ಹಣ ಹಾಗೂ ಮೂರು ಮೊಬೈಲ್ ಮತ್ತು ಇನ್ನಿತರೆ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.
ಇನ್ನೂ ಅಂಬೇವಾಡಿಯ ಜಿ ಪ್ಲಸ್ ಟು ನಿವೇಶನದ ಹತ್ತಿರ ಇಬ್ಬರನ್ನು ಬಂಧಿಸಲಾಗಿದೆ. ಬಾಂಬೆಚಾಳ್ ನಿವಾಸಿ ಇಮ್ಯಾನವೆಲ್ ಬೈಲಾ ಹಾಗೂ ಸುಭಾಸ ನಗರದ ಬಸವರಾಜ್ ಅಲಿಯಾಸ್ ಭರತ್ ನಾಗೇಶ್ ಗಿರಿಯಾಲ ಬಂಧಿತರೆಂದು ಗುರುತಿಸಲಾಗಿದೆ.
ಇಬ್ಬರು ಐಪಿಎಲ್ ಕ್ರಿಕೆಟ್(IPL Cricket) ಪಂದ್ಯಾವಳಿಗೆ ಪಂಥ ಕಟ್ಟಿದ್ದರು ಎನ್ನಾಗಿದೆ. ಶ್ರವಣ ಎಂಬಾತನೊಂದಿಗೆ ಮೊಬೈಲ್ ಮೂಲಕ ಹಣ ತೊಡಗಿಸಿ ಬೆಟ್ಟಿಂಗ್ ಕಟ್ಟಿದ್ದಾರೆ ಎನ್ನಲಾಗಿದೆ. ಈ ಮೂವರನ್ನೂ ವಶಪಡಿಸಿಕೊಂಡಿರುವ ಪೊಲೀಸರು ಮೂರು ಸಾ. ರೂ. ನಗದು ಹಾಗೂ ಬೆಲೆಬಾಳುವ ಮೊಬೈಲಗಳನ್ನು ವಶಪಡಿಸಿಕೊಂಡಿದ್ದಾರೆ. ದಾಂಡೇಲಿ ನಗರ ಠಾಣೆಯ(Dandeli Town Station) ಅಪರಾಧ ವಿಭಾಗದ ಪಿಎಸ್‌ಐ ಕಿರಣ್ ಪಾಟೀಲ್ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
ಕಳೆದ ಕೆಲ ದಿನಗಳಿಂದ ಐಪಿಎಲ್ ಕ್ರಿಕೆಟ್(IPL Cricket) ಸಂಬಂಧ ಅಲ್ಲಲ್ಲಿ ಬೆಟ್ಟಿಂಗ್ ದಂಧೆ ಜೋರಾಗಿದ್ದು ಪೊಲೀಸರು ಅಲರ್ಟ್ ಆಗಿದ್ದಾರೆ.
ಇದನ್ನು ಓದಿ : ಅಸ್ನೋಟಿಕರ ಹೇಳಿದ್ದು ಸುಳ್ಳು. ಮುಂದಿನ ಚುನಾವಣೆಯಲ್ಲಿ ಕಾರವಾರಕ್ಕೆ ಬಿಜೆಪಿ ಟಿಕೇಟ್: ರೂಪಾಲಿ
ವಿದೇಶದಲ್ಲಿ ವ್ಯಾಸಂಗ ಮಾಡುತ್ತಿರುವ ಪುತ್ರನ ಹೆಸರು ಕೈಬಿಡುವಂತೆ ನ್ಯಾಯಾಲಯಕ್ಕೆ ಅನಂತಕುಮಾರ್ ಹೆಗಡೆ ಮನವಿ.
