ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news) ಅಂಕೋಲಾ(Ankola) : ತಾಲೂಕಿನ ಕನಕನಹಳ್ಳಿ ಸಮೀಪದ ಅನ್ನಪೂರ್ಣ ಮಾರ್ಟ್‌ನಲ್ಲಿ(Annapoorna Mart) ನಡೆದ ಕಳ್ಳತನ ಪ್ರಕರಣ ಕಿಲಾಡಿ ಕಳ್ಳನೋರ್ವ(Theft) ಆತಂಕಕಾರಿ ಘಟನೆ ನಡೆಸಿರುವುದು ಸ್ಥಳೀಯರ ಆತಂಕಕ್ಕೆ ಕಾರಣವಾಗಿದೆ..
ನರಸಿಂಹ ಭಾಗವತ ಅವರ ಮಾಲೀಕತ್ವದ ಅಂಗಡಿಗೆ ನುಗ್ಗಿ ಕಳ್ಳತನ ನಡೆಸಿದ ಬಳಿಕ, ಅಂಗಡಿ ಮಾಲೀಕರಿಗೆ ಅಪಾಯ ಉಂಟಾಗುವ ರೀತಿಯಲ್ಲಿ ಬಾಗಿಲಿಗೆ ವಿದ್ಯುತ್ ಸಂಪರ್ಕವನ್ನು ಹಾಕಿದ್ದಾನೆ. ಇದು ಅಂಗಡಿಯಲ್ಲಿ ಅಳವಡಿಸಿದ್ದ ಸಿಸಿಟಿವಿ ಕ್ಯಾಮೆರಾದಲ್ಲಿ(CCTV Camera) ಸೆರೆಯಾಗಿದೆ. ಈ ಹಿಂದೆ ಸಹ ಹಲವು ಬಾರಿ ಇಲ್ಲಿ ಕಳ್ಳತನ ನಡೆದಿದೆ. ಪ್ರತಿಯೊಂದು ಪ್ರಕರಣದಲ್ಲಿ ನಾರಾಯಣ ಸಿದ್ದಿ ಎಂಬಾತನ ಹೆಸರು ಕೇಳಿಬರುತ್ತಿದೆ. ಅಲ್ಲದೆ ಹೆಗ್ಗಾರ, ಕಲ್ಲೇಶ್ವರ ಸೇರಿದಂತೆ ಸುತ್ತಮುತ್ತಲಿನ ಕೆಲವು ಸಹಕಾರಿ ಸಂಘಗಳಲ್ಲಿ(cooperative Sangha) ನಡೆದ ಕಳ್ಳತನ ಪ್ರಕರಣಗಳಲ್ಲಿಯೂ ಆತನ ಹೆಸರು ಕೇಳಿ ಬರುತ್ತಲೆ ಇದೆ ಎನ್ನಲಾಗಿದೆ.
ನಾರಾಯಣ ಸಿದ್ದಿಯ ಸಹಚರರೆಂದು ಶಂಕಿಸಲಾದ ಕೆಲವರನ್ನು ಈ ಹಿಂದೆ ಪೊಲೀಸರು ಬಂಧಿಸಿದ್ದರೂ, ಪ್ರಮುಖ ಆರೋಪಿ ಇನ್ನೂ ಬಂಧಿಸಿಲ್ಲ ಎಂದು ಸ್ಥಳೀಯರು ಆರೋಪಿಸುತ್ತಿದ್ದಾರೆ. ಈಗ ನಡರದಿರುವ ಕಳ್ಳತನ ಪ್ರಕರಣದಲ್ಲಿ(Theft Case) ಕೇವಲ ಕಳ್ಳತನ ಮಾತ್ರವಲ್ಲದೆ ಅಂಗಡಿ ಮಾಲೀಕರ ಜೀವಕ್ಕೂ ಅಪಾಯ ಉಂಟುಮಾಡುವ ಪ್ರಯತ್ನ ನಡೆಸಲಾಗಿದೆ. ಪ್ರಕರಣವನ್ನ ಗಂಭೀರವಾಗಿ ಪರಿಗಣಿಸಿ ಕೂಡಲೇ ಬಂಧಿಸಿ ಕಾನೂನು ಕ್ರಮ ಜರುಗಿಸಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.
