ಇ ಸಮಾಚಾರ ಡಿಜಿಟಲ್  ನ್ಯೂಸ್ (esamachara  digital news) ಬೆಂಗಳೂರು(Bangalore) : ಹಲ್ಲೆ ಪ್ರಕರಣದಲ್ಲಿ ತನ್ನ ಪುತ್ರನ ಹೆಸರು  ಕೈ ಬಿಡುವಂತೆ ಮಾಜಿ ಸಚಿವ ಅನಂತಕುಮಾರ ಹೆಗಡೆ(Anantkumar Hegade) ಅವರು ತಮ್ಮ ವಕೀಲರ ಮೂಲಕ‌   ನ್ಯಾಯಾಲಯವನ್ನ ಕೋರಿಕೊಂಡಿದ್ದಾರೆ.

ಬೆಂಗಳೂರು ಬಳಿಯ ದಾಬಸಪೇಟೆ‌(Bangalore Dabasapete) ಬಳಿ ವಾಹನವೊಂದು ಓವರ್ ಟೇಕ್ ಮಾಡಿದ ಕಾರಣಕ್ಕೆ ಜಗಳವಾಗಿತ್ತು. ದಾಬಸಪೇಟೆ  ಪೋಲಿಸ್ ಠಾಣೆಯಲ್ಲಿ‌(Dabaspete Police Station) ಪ್ರಕರಣ ದಾಖಲಾಗಿತ್ತು. ದಾಖಲಾಗಿರುವ ಹಲ್ಲೆ ಪ್ರಕರಣದಲ್ಲಿ ತನ್ನ ಪುತ್ರ ಅಶುತೋಷ್ ನ‌ ಕೈ ಬಿಡುವಂತೆ  ಅನಂತಕುಮಾರ ಹೆಗಡೆ ಪರ ವಕೀಲ ಪವನಚಂದ್ರ ಶೆಟ್ಟಿ ನ್ಯಾಯಾಲಯಕ್ಕೆ ಕೋರಿದ್ದಾರೆ.

ಅನಂತಕುಮಾರ  ಪುತ್ರ ಅಶುತೋಷ್‌ ವಿದೇಶದಲ್ಲಿ ವ್ಯಾಸಂಗ(Foreign Study) ಮಾಡುತ್ತಿದ್ದು, ಹಾಲಿ ಪ್ರಕರಣವು ಅವರ ಪಾಸ್‌ಪೋರ್ಟ್‌(Passport) ಪಡೆಯುವುದಕ್ಕೆ ಅಡ್ಡಿಯಾಗಿದೆ. ಹೀಗಾಗಿ, ಅವರ ವಿರುದ್ಧದ ಪ್ರಕರಣ ರದ್ದುಪಡಿಸಬೇಕು ಎಂದು ಹೆಗಡೆ ಪರ ವಕೀಲರು ನ್ಯಾಯಾಲಯಕ್ಕೆ ಮನವಿ ಮಾಡಿದ್ದಾರೆ.

ಅಶುತೋಷ್‌ ಹೆಗಡೆ  ವಿದೇಶದಲ್ಲಿ ವ್ಯಾಸಂಗ ಮಾಡುತ್ತಿದ್ದು, ಗಲಾಟೆ ಪ್ರಕರಣದಿಂದಾಗಿ ಅವರು ಪಾಸ್‌ಪೋರ್ಟ್‌(Passport) ಪಡೆಯಲು ಸಮಸ್ಯೆಯಾಗಿದೆ. ವಿದೇಶದಿಂದ ಬಂದಿದ್ದ ಪುತ್ರ ಅಶುತೋಷ್‌ ಹೆಗಡೆ ಅವರು ತನ್ನ ಅಜ್ಜಿ ಅವರನ್ನು ನೋಡಲು ಅನಂತಕುಮಾರ್‌ (Anantkumar) ಜೊತೆ ಯಲ್ಲಾಪುರಕ್ಕೆ(Yallapur) ತೆರಳುತ್ತಿದ್ದರು. ಈ ಸಂದರ್ಭದಲ್ಲಿ ಚತ್ತೀಸಗಢ ರಾಜ್ಯದಲ್ಲಿ ನೋಂದಣಿಯಾಗಿರುವ ಇನ್ನೋವಾ ಕ್ರಿಸ್ಟಾ ಕಾರು(Innova Crysta Car) ತಮ್ಮ ಕಾರನ್ನು ಹಿಂದಿಕ್ಕಲು ಪ್ರಯತ್ನಿಸಿತ್ತು. ಒಮ್ಮೆ ಅನಂತಕುಮಾರ್‌ ಕಾರಿಗೂ ಡಿಕ್ಕಿ ಹೊಡೆಯಿತು. ಈ ಹಿನ್ನೆಲೆಯಲ್ಲಿ ಮಾಜಿ ಸಂಸದರ ಅಂಗ ರಕ್ಷಕ ಮತ್ತು ಚಾಲಕ ದೂರುದಾರರ ಜೊತೆ ವಾಗ್ವಾದ ನಡೆಸಿದ್ದರು. ಇದರಲ್ಲಿ ಅನಂತಕುಮಾರ್‌ ಪಾತ್ರವಾಗಲಿ, ಅವರ ಪುತ್ರ ಅಶುತೋಷ್‌ ಪಾತ್ರವಾಗಲಿ ಇಲ್ಲ.  ಕಾರ್‌ನ ಹಿಂದಿನ ಸೀಟಿನಲ್ಲಿ ಅಶುತೋಷ್‌ ಕುಳಿತಿದ್ದರು. ಘಟನಾ ಸ್ಥಳಕ್ಕೆ ಅವರು ಬಂದೇ ಇರಲಿಲ್ಲ. ಮಧ್ಯದ ಸೀಟುಗಳನ್ನು ತೆಗೆದರೆ ಮಾತ್ರ ಅದರಿಂದ ಹಿಂದಿನ ಸೀಟಿನಲ್ಲಿರುವವರು ಇಳಿಯಲು ಸಾಧ್ಯ. ಹೀಗಿದ್ದರೂ ತನಿಖೆಯ ಸಂದರ್ಭದಲ್ಲಿ ತನಿಖಾಧಿಕಾರಿಯು ಅಶುತೋಷ್‌ ಅವರನ್ನು ಪ್ರಕರಣದಲ್ಲಿ ಸಿಲುಕಿಸಿದ್ದಾರೆ ಎಂದು ವಕೀಲ‌ ಪವನಚಂದ್ರ ಶೆಟ್ಟಿ ಆಕ್ಷೇಪಿಸಿದರು.

ದೂರುದಾರ ಸೈಫ್‌ ಖಾನ್‌ ಪರ ವಕೀಲೆ ನವ್ಯಾಶ್ರೀ ಅವರು ವಿಚಾರಣೆಯಲ್ಲಿ ಭಾಗಿಯಾಗಿದ್ದರು.  ವಾದ ಆಲಿಸಿದ ನ್ಯಾಯಾಲಯವು ಏಪ್ರಿಲ್‌ 16 ರ ವಿಚಾರಣೆ ಸಂದರ್ಭದಲ್ಲಿ  ಮನವಿ ಪರಿಗಣಿಸುವುದಾಗಿ ಹೇಳಿ, ವಿಚಾರಣೆ ಮುಂದೂಡಿದೆ.

ಇದನ್ನು ಓದಿ : ಮಾಳ್ಕೋಡ ಶಾಲೆಯ ಶತಮಾನೋತ್ತರ ಸಂಭ್ರಮಾಚರಣೆ. ಹಳೆ ವಿದ್ಯಾರ್ಥಿಗಳ ಸಂಪರ್ಕ ಅಭಿಯಾನ. ಮೂಲ ಸೌಕರ್ಯ ಅಭಿವೃದ್ಧಿಗೆ ಚಿಂತನೆ

ಕುಂಭಮೇಳದ ಹುಡುಗಿ ಮದುವೆಯಾದ ಅನ್ಯಕೋಮಿನ ಯುವಕನಿಗೆ ಸಂಕಷ್ಟ.

ಕೊಲೆ ಪ್ರಕರಣದಲ್ಲಿ ಮೂವರಿಗೆ ಜೀವಾವಧಿ ಶಿಕ್ಷೆ.