ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news) ಬೆಂಗಳೂರು(Bangalore) : ಈ ವರ್ಷದ ಎಸ್ಎಸ್ಎಲ್ಸಿ ಪರೀಕ್ಷೆಯ ಫಲಿತಾಂಶ(SSLC Result) ಪ್ರಕಟವಾಗಿದ್ದು, ಈ ಬಾರೀ 94.1 ಮಕ್ಕಳು ತೇರ್ಗಡೆಯಾಗಿದ್ದಾರೆ.
ದಕ್ಷಿಣ ಕನ್ನಡ(Dakshunakannada) ಜಿಲ್ಲೆ ಪ್ರಥಮ, ಉಡುಪಿ(Udupi) ದ್ವಿತೀಯ ಹಾಗೂ ಉತ್ತರಕನ್ನಡ (Uttarakannada) ತೃತೀಯ ಸ್ಥಾನದಲ್ಲಿದ್ದರೆ, ಕಲಬುರಗಿ(Kalaburgi) ಜಿಲ್ಲೆ ಕೊನೆಯ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದೆ . ಪರೀಕ್ಷೆ ಮತ್ತು ಮೌಲ್ಯಮಾಪನ ಮಂಡಳಿ (KSEAB) ಇಂದು (ಏಪ್ರಿಲ್ 23) ಎಸ್ಎಸ್ಎಲ್ಸಿ ಪರೀಕ್ಷೆ-1ರ ಫಲಿತಾಂಶವನ್ನು ಅಧಿಕೃತವಾಗಿ ಪ್ರಕಟಿಸಿದೆ.
ಒಟ್ಟು ಏಳು ವಿದ್ಯಾರ್ಥಿಗಳು 625ಕ್ಕೆ 625 ಅಂಕ ಗಳಿಸುವ ಮೂಲಕ ಸಾಧನೆ ಮಾಡಿದ್ದಾರೆ. ಚಿಕ್ಕೋಡಿ(Chikkodi) ಅಥಣಿಯ ಸರ್ಕಾರಿ ಹೈಸ್ಕೂಲ್ ಕತ್ತಗೆರಿಯ ಪ್ರಾರ್ಥನಾ ನಾಗಪ್ಪ, ದಾವಣಗೆರೆ(Favanagere) ಚೆನ್ನಗಿರಿಯ ಶ್ರೀ ವಿದ್ಯಾಲಕ್ಷ್ಮೀ ಆಂಗ್ಲ ಮಾಧ್ಯಮ ಕಬ್ಬಾಳ ಶಾಲೆಯ ಭರತ್, ಚಿಕ್ಕಮಗಳೂರು(Chikkamanglore) ಸೆಂ.ಮೇರಿಸ್ ಹೈಸ್ಕೂಲ್ ನ ಬೃಂದಾ, ಬೆಂಗಳೂರು ಉತ್ತರ(Bangalore North) ಜಿಲ್ಲೆಯ ಪೂರ್ಣ ಪ್ರಜ್ಣಾ ಎಜುಕೇಷನ್ ಸೆಂಟರ್, ಸದಾಶಿವನಗರದ ಧನುಷ್ ಸುಧೀರ್ ಮೈಸೂರು, ಕುಂದಾಪುರ(Kundapur) ತಾಲೂಕಿನ ಶಂಕರ್ನಾರಾಯಣ ಮದರ್ ಥೆರೆಸಾ ಮೆಮೋ ಸ್ಕೂಲ್ ಪ್ರೀತಮ್ ಪೂಜಾರಿ, ವಿಜಯಪುರ(Vijayapur) ಜಿಲ್ಲೆಯ ಮುದ್ದೆಬಿಹಾಳ ಆಕ್ಸಫರ್ಡ್ ಇಂಗ್ಲಿಷ್ ಮೀಡಿಯಂ ಶಾಲೆಯ ಸೌಜನ್ಯ ಹಾಗೂ ರಾಯಚೂರು(Rauashuru) ಜಿಲ್ಲೆಯ ಮಾನ್ವಿಯ ಬಿ.ವಿ.ಆರ್. ಆಂಗ್ಲ ಮಾಧ್ಯಮ ಶಾಲೆಯ ಸುಖ್ದೇವ್ ಪ್ರಥಮ ಸ್ಥಾನ ಗಳಿಸಿದ್ದಾರೆ.
ಬೆಂಗಳೂರಿನ ಮಲ್ಲೇಶ್ವರಂ ಕಚೇರಿಯಲ್ಲಿ ಇಂದು ಮಧ್ಯಾಹ್ನ 12ಕ್ಕೆ ಮಂಡಳಿಯ ಅಧಿಕಾರಿಗಳ ಜತೆ ನಡೆಸಿದ ಸುದ್ದಿಗೋಷ್ಠಿಯಲ್ಲಿ ಶಿಕ್ಷಣ ಸಚಿವ ಮಧು ಬಂಗಾರಪ್ಪ(Madhu Bangarappa) ಅವರು ಫಲಿತಾಂಶವನ್ನು ಪ್ರಕಟಿಸಿದರು. ಮಂಡಳಿಯ ವೆಬ್ಸೈಟ್ http://karresults.nic.in ವೀಕ್ಷಿಸಬಹುದಾಗಿದೆ. ಅಲ್ಲದೆ, ಕರ್ನಾಟಕ ಒನ್ ಮೊಬೈಲ್ ಆ್ಯಪ್ ಮೂಲಕವೂ ಪಡೆಯಬಹುದು. ವಿದ್ಯಾರ್ಥಿಗಳ ನೋಂದಾಯಿತ ಮೊಬೈಲ್ ಸಂಖ್ಯೆಗೆ ವಾಟ್ಸಾಪ್/ಎಸ್ಎಂಎಸ್ ಮೂಲಕವೂ ಫಲಿತಾಂಶದ ಮಾಹಿತಿಯನ್ನು ಮಂಡಳಿಯಿಂದ ರವಾನಿಸಲಾಗಿದೆ.
ವಿದ್ಯಾರ್ಥಿಗಳ ಫಲಿತಾಂಶದ ಬಗ್ಗೆ ಮೊದಲ ಬಾರಿಗೆ ಅಂಕಪಟ್ಟಿ ಡಿಜಿಲಾಕರ್ನಲ್ಲಿಯೂ ಲಭ್ಯವಿದೆ. https://www.digilocker.gov.in ಲಿಂಕ್ ಬಳಸಬಹುದು. ಕಳೆದ ಮಾರ್ಚ್ 18ರಿಂದ ಏಪ್ರಿಲ್ 2ರವರೆಗೆ ಎಸ್ಎಸ್ಎಲ್ಸಿ ಪರೀಕ್ಷೆ ನಡೆದಿತ್ತು. ಒಟ್ಟು 7,70,209 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದರು. ಇದರಲ್ಲಿ 7,24,794 ವಿದ್ಯಾರ್ಥಿಗಳು ಪಾಸ್ ಆಗಿದ್ದು, 94.1 ರಷ್ಟು ಫಲಿತಾಂಶ ದಾಖಲಾಗಿದೆ.
ಇದನ್ನು ಓದಿ : ಒಂಟೆ ಎತ್ತುಗಳ ಅಕ್ರಮ ಸಾಗಾಟ. ಪತ್ತೆ ಮಾಡಿ ರಕ್ಷಿಸಿದ ಭಟ್ಕಳ ಪೊಲೀಸರು.
ನಾಡದೋಣಿ ಮೀನುಗಾರರ ಸೀಮೆ ಎಣ್ಣೆ ದರ ಏರಿಕೆ. ಕಡಲ ಮಕ್ಕಳ ಆಕ್ರೋಶ, ಧರಣಿ ಎಚ್ಚರಿಕೆ.
ಸ್ಟಾರ್ ಚಾಯ್ಸ್ ನೃತ್ಯ ಕಲಾ ಕೇಂದ್ರದಿಂದ ಅದ್ದೂರಿಯ ಸಾಂಸ್ಕೃತಿಕ ವೈಭವ.
