ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news) ಶಿರಸಿ(Sirsi) : ಇಂದು ಪ್ರಕಟವಾದ ಎಸ್‌ಎಸ್‌ಎಲ್‌ಸಿ ಪರೀಕ್ಷಾ ಫಲಿತಾಂಶದಲ್ಲಿ(SSLC Results) ಗಂಭೀರ ಎಡವಟ್ಟು(Mistakes) ಬೆಳಕಿಗೆ ಬಂದಿದೆ. ಎಲ್ಲಾ ವಿಷಯಗಳ ಪರೀಕ್ಷೆಗೆ ಹಾಜರಾಗಿದ್ದರೂ, ಸೋಷಿಯಲ್ ಸೈನ್ಸ್(Social Science) ವಿಷಯದಲ್ಲಿ “ಅಬ್ಸೆಂಟ್” ಎಂದು ನಮೂದಿಸಿ ಪ್ರತಿಭಾವಂತ ಅಂಧ ವಿದ್ಯಾರ್ಥಿನಿ(Talent Blind Student) ಫೇಲ್ ಮಾಡಿರುವ ಘಟನೆ ನಡೆದಿದೆ.
ಶಿರಸಿಯ ಇಂದಿರಾ ನಗರದ(Sirsi Indiranagar) ಯುನಿಯನ್ ಉರ್ದು ಫ್ರೌಢಶಾಲೆಯ(Union Urdu School) ವಿದ್ಯಾರ್ಥಿನಿ ಲೀಸಾ ಖಾನಮ್ ಈ ಅನ್ಯಾಯಕ್ಕೆ ಒಳಗಾಗಿದ್ದಾಳೆ. ಲೀಸಾ ಖಾನಮ್ ಕನ್ನಡದಲ್ಲಿ 100, ಇಂಗ್ಲಿಷ್‌ನಲ್ಲಿ 92, ಎಕನಾಮಿಕ್ಸ್‌ನಲ್ಲಿ 98, ಪೊಲಿಟಿಕಲ್ ಸೈನ್ಸ್‌ನಲ್ಲಿ 92 ಅಂಕಗಳನ್ನು ಪಡೆದು ಒಟ್ಟು 526 ಅಂಕಗಳೊಂದಿಗೆ 84.16 ಶೇಕಡಾ ಫಲಿತಾಂಶ ಸಾಧಿಸಿದ್ದಾಳೆ. ಆದಾಗ್ಯೂ, ಸೋಷಿಯಲ್ ಸೈನ್ಸ್ ವಿಷಯದಲ್ಲಿ “ಅಬ್ಸೆಂಟ್” ಎಂದು ದಾಖಲಿಸಿರುವುದರಿಂದ ಪರೀಕ್ಷಾ ಪ್ರಾಧಿಕಾರ ಆಕೆಯನ್ನು ಫೇಲ್ ಎಂದು ಘೋಷಿಸಿದೆ.
ಇಂದು ಪರೀಕ್ಷೆಯ ಫಲಿತಾಂಶವನ್ನ ನೋಡಿದ ಕುಟುಂಬಸ್ಥರಿಗೆ ಶಾಕ್ ಆಗಿದೆ. ತಮ್ಮ ಮಗಳನ್ನ ಸಮಾಧಾನಿಸೋದು ಕಷ್ಟವಾಗಿದೆ ಎಂದು ತಂದೆ ಹೇಳಿದ್ದಾರೆ. ಇತರ ಸ್ನೇಹಿತೆಯರು ಪಾಸಾದ ಖುಷಿಯಲ್ಲಿದ್ದು ತನ್ನ ರಿಸಲ್ಟ್ ತಪ್ಪಾಗಿ ಬಂದಿರೋದು ಕಂಗೆಡಿಸಿದೆ. ಪರೀಕ್ಷೆಗೆ ಹಾಜರಾಗಿದ್ದರೂ ತಪ್ಪಾಗಿ ಅಬ್ಸೆಂಟ್ ಎಂದು ನಮೂದಿಸಿರುವ ಈ ಎಡವಟ್ಟು ಕುಟುಂಬವನ್ನು ಕಂಗಾಲು ಮಾಡಿದೆ. ಪ್ರತಿಭಾವಂತ ವಿದ್ಯಾರ್ಥಿನಿಯ ಭವಿಷ್ಯಕ್ಕೆ ಧಕ್ಕೆಯಾಗಿರುವ ಹಿನ್ನೆಲೆಯಲ್ಲಿ, ಸಂಬಂಧಿಸಿದ ಅಧಿಕಾರಿಗಳು ತಕ್ಷಣ ಪರಿಶೀಲನೆ ನಡೆಸಿ ನ್ಯಾಯ ಒದಗಿಸಬೇಕೆಂದು ಕುಟುಂಬಸ್ಥರು ಆಗ್ರಹಿಸಿದ್ದಾರೆ.
ಈ ಘಟನೆ ಪರೀಕ್ಷಾ ವ್ಯವಸ್ಥೆಯ ದೋಷಗಳನ್ನು ಬಯಲಿಗೆಳೆಯುತ್ತಿದ್ದು, ಇಂತಹ ಎಡವಟ್ಟುಗಳು ಮರುಕಳಿಸದಂತೆ ಕ್ರಮ ಕೈಗೊಳ್ಳಬೇಕೆಂಬ ಒತ್ತಾಯ ಸಾರ್ವಜನಿಕರಿಂದ ಕೇಳಿಬರುತ್ತಿದೆ.
ಇದನ್ನು ಓದಿ : ಎಸ್‌ಎಸ್‌ಎಲ್‌ಸಿ ಫಲಿತಾಂಶ ಪ್ರಕಟ. ಏಳು ವಿದ್ಯಾರ್ಥಿಗಳು ರಾಜ್ಯಕ್ಕೆ ಫಸ್ಟ್.
