ಇ ಸಮಾಚಾರ ಡಿಜಿಟಲ್  ನ್ಯೂಸ್ (esamachara  digital news): ತೆಲಂಗಾಣ(Telangana) : ಪ್ರೇಮ ವಿವಾಹವೊಂದು(Love Marriage) ಗಂಭೀರವಾಗಿ ಕೌಟುಂಬಿಕ ಕಲಹವಾಗಿ ಮಾರ್ಪಟ್ಟು ಮಕ್ಕಳನ್ನು ಅನಾಥವಾಗಿ ಬಿಟ್ಟು ಹೋದ ಘಟನೆ ಕರೀಮ್ ನಗರದಲ್ಲಿ(Karim Nagar) ನಡೆದಿದೆ.

ಅಂಗಡಿ ಮಾಲೀಕನಾಗಿರೋ(Shop Owner) ರವಿಕುಮಾರ್ ಮತ್ತು ನರ್ಸಿಂಗ್ ಓದುತ್ತಿರುವ(Nursing Students) ಲಲಿತಾ ಎಂಬುವವರು ಕೆಲ ವರ್ಷಗಳ ಹಿಂದೆ ಪ್ರೀತಿಸಿ ವಿವಾಹವಾಗಿದ್ದರು. ಗಂಡ ಹೆಂಡತಿಯರ(Husband Wife) ಜಗಳ ಉಂಟಾಗಿ  ದಂಪತಿಗಳು(Couple) ತಮ್ಮ ಸಂಬಂಧದ ಸಮಸ್ಯೆ ಪರಿಹರಿಸಲು ಲೋವರ್ ಮನೇರ್ ಡ್ಯಾಮ್ ಪೊಲೀಸ್‌ ಠಾಣೆಗೆ(Lower Maner  Dam Police Station) ಬಂದಿದ್ದರು. ಆದರೆ ಕೌನ್ಸೆಲಿಂಗ್(Counseling) ವೇಳೆ ಚರ್ಚೆ ತೀವ್ರಗೊಂಡಾಗ ಲಲಿತಾ ತಮ್ಮ ಮಂಗಳಸೂತ್ರ(Mangalasutra) ಹಾಗೂ ಕಾಲುಂಗುರವನ್ನು(Legring) ತೆಗೆದು “ಈ ಸಂಸಾರವೂ ಬೇಡ, ಮಕ್ಕಳೂ ಬೇಡ” ಎಂದು ಹೇಳಿ ಠಾಣೆಯಿಂದ ಹೊರನಡೆದು ಬಿಟ್ಟಳು. ತಕ್ಷಣವೇ ಪತಿ ರವಿಕುಮಾರ್ ಕೂಡ ಇಬ್ಬರು ಹೆಣ್ಣುಮಕ್ಕಳನ್ನು ಅಲ್ಲೇ ಬಿಟ್ಟು ಹೊರಟುಹೋದ.

ಪೋಷಕರು ಹೊರಹೋಗುತ್ತಿದ್ದಂತೆ ಮಕ್ಕಳು ಅಳಲು ಶುರುಮಾಡಿದರು.   ಠಾಣಾ ಸಿಬ್ಬಂದಿಗಳು(Station Staff)  ಮಕ್ಕಳಿಗೆ ಊಟೋಪಚಾರ ನೀಡಿ ಸಮಾಧಾನಪಡಿಸಿದರು. ಠಾಣಾ ಸಬ್ ಇನ್ಸಪೆಕ್ಟರ್ ಅನ್ವ‌ರ್ ಸೇರಿದಂತೆ ಪೊಲೀಸರ ತಂಡ ಪೋಷಕರನ್ನು ಸಂಪರ್ಕಿಸಲು ಯತ್ನಿಸಿದರೂ ಯಾವುದೇ ರೆಸ್ಪಾನ್ಸ್ ಸಿಗಲಿಲ್ಲ.

ಪರಿಸ್ಥಿತಿ ಗಂಭೀರವಾಗುತ್ತಿದ್ದಂತೆ ಪೊಲೀಸರು ಅಜ್ಜಿಯನ್ನು(Grandmother) ಸಂಪರ್ಕಿಸಿ ಠಾಣೆಗೆ ಕರೆಸಿದರು. ಅಜ್ಜಿ ತಮ್ಮ ಮೊಮ್ಮಕ್ಕಳಿಬ್ಬರನ್ನು ತಮ್ಮೊಂದಿಗೆ ಕರೆದುಕೊಂಡು ಹೋಗಿದ್ದಾರೆ. 

ಇದನ್ನು ಓದಿ : ಬಡ ಗ್ರಾಹಕ ಹಣ ಪಡೆಯಲು ಅಸ್ಥಿಪಂಜರ ಹೊತ್ತು‌ ತಂದ. ಬ್ಯಾಂಕ್ ವಿರುದ್ದ ಗ್ರಾಹಕರ ಆಕ್ರೋಶ.