ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news) ಮಧ್ಯಪ್ರದೇಶ(Madhyapradesh) : ಪ್ರಯಾಗರಾಜ್ ನಲ್ಲಿ ಕಳೆದ ವರ್ಷ ನಡೆದ ಕುಂಭಮೇಳದಲ್ಲಿ(Kumbhamela) ಬಾರೀ ಫೇಮಸ್ ಆಗಿದ್ದ ನೀಲಿ ಕಣ್ಣಿನ ಹುಡುಗಿ ಮೊನಾಲಿಸಾ ವಿವಾಹದ(Monalisa Marriage) ವಿಷಯದಲ್ಲಿ ಬಾರೀ ಸುದ್ದಿಯಲ್ಲಿದ್ದಾಳೆ.
ಕಳೆದ ತಿಂಗಳು ಅನ್ಯಧರ್ಮದ ಯುವಕನನ್ನು ಮದುವೆಯಾಗಿರುವ ಮೊನಾಲಿಸಾ ಈಗ ಸಂಕಷ್ಟಕ್ಕೆ ಸಿಲುಕಿದ್ದಾಳೆ. ಮೊನಾಲಿಸಾಳನ್ನ ವಿವಾಹವಾದ ಫರ್ಮಾನ್ ಖಾನ್ ಮೇಲೆ ಇದೀಗ ಪೋಕ್ಸೋ ಕೇಸ್(Pocso Case) ದಾಖಲಾಗಿದೆ.
ಮೊನಾಲಿಸಾ ಜತೆ ಮದುವೆಯಾಗುವ ಸಂದರ್ಭದಲ್ಲಿ ಆಕೆಗೆ ಬರೀ 16 ವರ್ಷ ವಯಸ್ಸಾಗಿತ್ತು ಎಂದು ತಿಳಿದುಬಂದಿದೆ. ಈ ಸಂಬಂಧ ಮಧ್ಯಪ್ರದೇಶದ(Madhyapradesha) ಖಾರ್ಗೋನ್ ಜಿಲ್ಲೆಯ ಮಹೇಶ್ವರ ಪೊಲೀಸ್ ಠಾಣೆಯಲ್ಲಿ(Maheshwara Police Station) ಪತಿ ಫರ್ಮಾನ್ ಖಾನ್ ವಿರುದ್ಧ ಪೋಕ್ಸೋ ಪ್ರಕರಣ(Posco Case) ದಾಖಲಾಗಿದೆ.
2026ರ ಮಾರ್ಚ್ 11ರಂದು ಮೋನಾಲಿಸಾ(Monalisa) ಅವರು ಫರ್ಮಾನ್ ಖಾನ್ ಜೊತೆ ಕೇರಳದಲ್ಲಿ(Keral) ಮದುವೆಯಾಗಿದ್ದಳು. ಲವ್ ಜಿಹಾದ್(Lovejeehad), ವಯಸ್ಸು ಹೀಗೆ ಅವರ ಮದುವೆ ಬಗ್ಗೆ ಸಾಕಷ್ಟು ರೆಕ್ಕೆಪುಕ್ಕ ಹುಟ್ಟಿಕೊಂಡಿದ್ದವು. ಆಕೆ 2009ರ ಡಿಸೆಂಬರ್ 30ರಂದು ಜನಿಸಿದ್ದು, ಆ ಸಂದರ್ಭದಲ್ಲಿ ಮೊನಾಲಿಸಾಗೆ ಕೇವಲ 16 ವರ್ಷ ವಯಸ್ಸಾಗಿತ್ತು ಎಂದು ಗೊತ್ತಾಗಿದೆ.
ಮದುವೆ ವಿಷಯಗಳ ಬಗ್ಗೆ ರಾಷ್ಟ್ರೀಯ ಪರಿಶಿಷ್ಟ ಪಂಗಡಗಳ ಆಯೋಗ(National Schedule Tribes Commission) ಕೇರಳ ಮತ್ತು ಮಧ್ಯಪ್ರದೇಶದಲ್ಲಿ(Keral and Madhyapradesha) ವಿಸ್ತಾರವಾದ ತನಿಖೆ ಆರಂಭಿಸಿತ್ತು. ರಾಷ್ಟ್ರೀಯ ಪರಿಶಿಷ್ಟ ಪಂಗಡಗಳ ಆಯೋಗದ ಅಧ್ಯಕ್ಷ ಅಂತರ್ ಸಿಂಗ್ ಆರ್ಯ ಅವರು ನಡೆಸಿದ ವಿಚಾರಣೆಯ ಸಂದರ್ಭದಲ್ಲಿ ಈ ವಿಷಯ ಬಯಲಾಗಿದೆ. ಮೊನಾಲಿಸಾ(Monalisa) ಪಾರ್ಧಿ ಬುಡಕಟ್ಟು ಜನಾಂಗಕ್ಕೆ ಸೇರಿದ್ದು ಮದುವೆ ಸಂದರ್ಭದಲ್ಲಿ ಅವರಿಗೆ 18 ವರ್ಷ ತುಂಬಿರಲಿಲ್ಲ. ಅಪ್ತಾಪ್ರೆಯಾಗಿದ್ದರು ಎಂದು ತಿಳಿದುಬಂದಿದೆ.
ಇನ್ನೂ ಮಹೇಶ್ವರದಲ್ಲಿನ ಆಸ್ಪತ್ರೆ(Maheshwar Hospital) ದಾಖಲೆಗಳ ಪ್ರಕಾರ, ನಕಲಿ ಜನನ ಪ್ರಮಾಣಪತ್ರ ಮಾಡಿಸಿಕೊಂಡು ವಿವಾಹಗಿದ್ದಾರೆ. ಮದುವೆ ವೇಳೆ ಯಾರ್ಯಾರು ಸಹಾಯ ಮಾಡಿದ್ದಾರೆ ಎನ್ನುವ ಬಗ್ಗೆ ವಿಚಾರಣೆ ನಡೆಯುತ್ತಿದೆ.
ಇದನ್ನು ಓದಿ : ಕೊಲೆ ಪ್ರಕರಣದಲ್ಲಿ ಮೂವರಿಗೆ ಜೀವಾವಧಿ ಶಿಕ್ಷೆ.
ಪಿಯುಸಿಯಲ್ಲಿ ರಾಜ್ಯಕ್ಕೆ ದಿಶಾ ಫಸ್ಟ್. ಅಭಿನಂದನೆಗಳ ಸುರಿಮಳೆ.
ಮತ್ತೆಮತ್ತೆ ಕ್ರಿಮಿನಲ್ ಚಟುವಟಿಕೆಯಲ್ಲಿ ತೊಡಗಿದ್ದ ಮುರ್ಡೇಶ್ವರದ ಐವರು ರೌಡಿಗಳ ಗಡಿಪಾರು.
