ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news): ಭಟ್ಕಳ(Bhatkal) : ರಾಷ್ಟ್ರೀಯ ಹೆದ್ದಾರಿ ಕಾಮಗಾರಿ(National Highway Work) ಹಿನ್ನೆಲೆಯಲ್ಲಿ ಭಟ್ಕಳ ನಗರದಲ್ಲಿ(Bhatkal Town) ಸಂಚಾರ ಮಾರ್ಗ ಬದಲಾವಣೆ ಮಾಡಲಾಗಿದೆ ಎಂದು ಪೊಲೀಸ್ ಪ್ರಕಟಣೆಯಲ್ಲಿ(Police Notice) ತಿಳಿಸಲಾಗಿದೆ.
ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಪ್ರಗತಿಯಲ್ಲಿರುವ ಕಾರಣ ಭಟ್ಕಳ ನಗರ ವ್ಯಾಪ್ತಿಯಲ್ಲಿ ಸುಗಮ ಸಂಚಾರಕ್ಕಾಗಿ ಈ ಕೆಳಗಿನ ಮಾರ್ಗ ಬದಲಾವಣೆ ಮಾಡಲಾಗಿದ್ದು ಸಾರ್ವಜನಿಕರು ಸಹಕರಿಸುವಂತೆ ಕೋರಲಾಗಿದೆ.
1. *ಸಂಶುದ್ದೀನ್ ಸರ್ಕಲ್ ಮತ್ತು ಬಂದರ್ ರೋಡ್(Samshuddin Circle and Bunder Road) ಕಡೆಯಿಂದ ಕೆಳಗಿನ ಮಾರ್ಕೆಟ್(Down Market) ಕಡೆಗೆ ಹೋಗುವ ವಾಹನಗಳು→ ಬಂದರ್ ರೋಡ್ → ಈದ್ಗಾ ಮೈದಾನ(Idga Ground) → ಸೋನಾರ್ ಕೆರೆ ಕ್ರಾಸ್(Sonarkere Cross) → ಪೊಲೀಸ್ ಠಾಣೆ ಮುಂಭಾಗದ(Police Station Front) ರಸ್ತೆಯ ಮೂಲಕ ಸಂಚರಿಸತಕ್ಕದ್ದು.
2. ಮಾರಿಕಟ್ಟಾ(Marikatta), ಹಳೆ ಬಸ್ ನಿಲ್ದಾಣ(Old Busstand) ಕಡೆಯಿಂದ ಸಂಶುದ್ದೀನ್ ಸರ್ಕಲ್ ಕಡೆಗೆ ಹೋಗುವ ವಾಹನಗಳು → ಪೊಲೀಸ್ ಠಾಣೆ ಮುಂಭಾಗದ ರಸ್ತೆ → ಸೋನಾರಕೆರೆ ಕ್ರಾಸ್ → ಈದ್ಗಾ ಮೈದಾನ → ಬಂದರ್ ರೋಡ್ ಮಾರ್ಗವಾಗಿ ಸಂಚರಿಸತಕ್ಕದ್ದು.
3. *ಜಾಲಿ(Jali), ಜಾಲಿ ಕೋಡಿ(Jalikodi) ಮತ್ತು ಜಾಲಿ ಬೀಚ್(Jali Beach) ಕಡೆಗೆ ಹೋಗುವ ವಾಹನಗಳು→ ಬಂದರ್ ರೋಡ್(Bunder Road) 2ನೇ ಕ್ರಾಸ್ ರಸ್ತೆಯ ಮೂಲಕ ಸಂಚರಿಸತಕ್ಕದ್ದು.
ವಿಶೇಷ ಸೂಚನೆ: ಭಟ್ಕಳ ನಗರ ವ್ಯಾಪ್ತಿಯಲ್ಲಿ ಸಂಚರಿಸುವ ಎಲ್ಲಾ ಸಾರ್ವಜನಿಕರು(Publics ) ಮತ್ತು ವಾಹನ ಸವಾರರು(Vehicles) ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಪೂರ್ಣಗೊಳ್ಳುವವರೆಗೆ “ತುರ್ತು/ಅನಿವಾರ್ಯ ಸಂದರ್ಭ ಹೊರತುಪಡಿಸಿ” ರಾಷ್ಟ್ರೀಯ ಹೆದ್ದಾರಿ-66 (NH-66) ಅನ್ನು ಬಳಸದಂತೆ ಹಾಗೂ ಪರ್ಯಾಯ ಮಾರ್ಗಗಳನ್ನು ಬಳಸುವಂತೆ ಕೋರಲಾಗಿದೆ. ಸುಗಮ ಸಂಚಾರ ಮತ್ತು ಸಾರ್ವಜನಿಕ ಸುರಕ್ಷತೆಗಾಗಿ ಪೊಲೀಸ್ ಇಲಾಖೆಯೊಂದಿಗೆ ಸಹಕರಿಸುವಂತೆ ಭಟ್ಕಳ ನಗರ ಠಾಣೆ(Bhatkal Town Station) ಅಧಿಕಾರಿಗಳು ತಿಳಿಸಿದ್ದಾರೆ.
ಇದನ್ನು ಓದಿ : ಸಿಡಿಲು ಬಡಿದು ಮೀನುಗಾರ ಸಾವು. ಪ್ರವಾಸಿಗರಿಗೆ ಗಾಯ.
