ಇ ಸಮಾಚಾರ ಡಿಜಿಟಲ್ನ್ಯೂಸ್ (esamachara  digital news): ಕಾಶ್ಮೀರ (Kashmir) : ಅಪರಿಚಿತ ವ್ಯಕ್ತಿಗಳು ಗುಂಡಿಗೆ ಪುಲ್ವಾಮಾ ದಾಳಿಯ(Pulvama Attack) ಮಾಸ್ಟರ್ ಮೈಂಡ್ ಉಗ್ರ ಹಮ್ಹಾ ಬುರ್ಹಾನ್‌ನನ್ನು  ಹತನಾಗಿದ್ದಾನೆ.

ಪಾಕ್ ಆಕ್ರಮಿತ ಕಾಶ್ಮೀರದಲ್ಲಿ(Pak Occupied Kashmir) 2019ರ ಪುಲ್ವಾಮಾ ಉಗ್ರರ ದಾಳಿಯ ಮಾಸ್ಟರ್ ಮೈಂಡ್ ಹುಮ್ಹಾ ಬುರ್ಹಾನ್   ಬಲಿಯಾಗಿದ್ದಾನೆ. ತರಬೇತುದಾರನ ರೂಪದಲ್ಲಿ ಅಡಗಿದ್ದ ಹಮ್ಹಾ ಬುರ್ಹಾನ್ ಅಲಿಯಾಸ್ ‘ಡಾಕ್ಟರ್’ ಮೇಲೆ ಅಪರಿಚಿತ ವ್ಯಕ್ತಿಗಳು ಮುಜಾಫರಾಬಾದ್(Mujaparabad) ಕಚೇರಿಯೊಳಗೆ ನುಗ್ಗಿ ಹಲವು ಬಾರಿ ಗುಂಡಿನ ದಾಳಿ ನಡೆಸಿದ್ದಾರೆ. ಗುಂಡೇಟಿನಿಂದ ಗಂಭೀರವಾಗಿ ಗಾಯಗೊಂಡಿದ್ದ ಆತ ಸಾವನ್ನಪ್ಪಿದ್ದಾನೆ  ಎನ್ನಲಾಗಿದೆ.

ಪುಲ್ವಾಮಾ ಮೂಲದ(Pulvama Native) ಹಮ್ಹಾ ಬುರಾನ್‌ನ ನಿಜವಾದ ಹೆಸರು ಅರ್ಜುಮಂಡ್ ಗುಲ್ಬಾರ್ ದಾರ್ . 2022ರಲ್ಲಿ ಭಾರತದ ಗೃಹ ಸಚಿವಾಲಯ(Home Miniatry) ಆತನನ್ನು ಉಗ್ರನೆಂದು ಘೋಷಿಸಿತ್ತು. ಈತ ಪಾಕಿಸ್ತಾನ ಬೆಂಬಲಿತ ‘ಅಲ್‌-ಬದ‌ರ್’ ಭಯೋತ್ಪಾದಕ ಸಂಘಟನೆಯ ಹಿರಿಯ ಕಮಾಂಡರ್ ಆಗಿದ್ದವನು. ಮೂಲತಃ ಜಮ್ಮು ಮತ್ತು ಕಾಶ್ಮೀರದ(Jammu and Kashmir) ಪುಲ್ವಾಮಾ ಜಿಲ್ಲೆಯ ರತ್ನಪೋರಾದ ನಿವಾಸಿಯಾಗಿದ್ದ ಈತ, ವರ್ಷಗಳ ಹಿಂದೆ ಗಡಿ ದಾಟಿ ಪಾಕಿಸ್ತಾನ ಸೇರಿಕೊಂಡಿದ್ದ ಎಂದು ಗೊತ್ತಾಗಿದೆ.

2019ರ ಪುಲ್ವಾಮಾ ಉಗ್ರರ ದಾಳಿಯಲ್ಲಿ(Terror Attack) ಈತ ಓವರ್‌ ಗೌಂಡ್ ವರ್ಕರ್ ಆಗಿ ಪ್ರಮುಖ ಸಂಚು ರೂಪಿಸಿದ್ದ. ದಕ್ಷಿಣ ಕಾಶ್ಮೀರದಲ್ಲಿ ಯುವಕರನ್ನು ಉಗ್ರ ಸಂಘಟನೆಗೆ ಸೇರಿಸುವ ಮತ್ತು ಭಯೋತ್ಪಾದಕರಿಗೆ ಧನಸಹಾಯ ಮಾಡುವ ಕೆಲಸ ಮಾಡುತ್ತಿದ್ದನು.

2019ರ ಫೆಬ್ರವರಿ 14,  ಜಮ್ಮು-ಶ್ರೀನಗರ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಾಗುತ್ತಿದ್ದ ಸಿಆರ್‌ಪಿಎಫ್ ವಾಹನಗಳ(CRPF Vehicle) ಮೇಲೆ ಆತ್ಮಾಹುತಿ ದಾಳಿ ನಡೆದಿತ್ತು. ಸ್ಫೋಟಕಗಳಿಂದ ತುಂಬಿದ್ದ ವಾಹನವನ್ನು ಭದ್ರತಾ ಪಡೆಗಳ ಬಸ್‌ಗೆ ಡಿಕ್ಕಿ ಹೊಡೆಸಲಾಗಿತ್ತು. ಈ ದಾಳಿಗೆ ದೇಶಾದ್ಯಂತ ಭಾರೀ ಆಕ್ರೋಶ ವ್ಯಕ್ತವಾಗಿತ್ತು.

ಇದನ್ನು ಓದಿ : ಭಟ್ಕಳದಲ್ಲಿ ಕಾರುಗಳ ನಡುವೆ ಮುಖಾಮುಖಿ‌ ಢಿಕ್ಕಿ. ಜೀವ ಉಳಿಸಿದ ಸೀಟ್ ಬೆಲ್ಟ್.