ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news) ಭಟ್ಕಳ(Bhatkal) : ಅಂತೂ ಇಂತೂ ಭಟ್ಕಳದ ಮುರಿನಕಟ್ಟೆ(Bhatkal Murinakatte) ವಿವಾದ ಬಗೆಹರಿಸಲು ಜಿಲ್ಲಾಡಳಿತ(District Administration) , ಜಿಲ್ಲಾ ಪೊಲೀಸ್ ಇಲಾಖೆ(District Police Department) ಮತ್ತು ಜನಪ್ರತಿನಿಧಿಗಳು ಯಶಸ್ವಿಯಾಹಿದ್ದಾರೆ.
ನಗರದ ಮೂಲಕ ಹಾದು ಹೋಗುವ ರಾಷ್ಟ್ರೀಯ ಹೆದ್ದಾರಿ 66 ರ(national Highway 66) ಅಗಲೀಕರಣ ಹಾಗೂ ಅಭಿವೃದ್ಧಿ ಕಾಮಗಾರಿ ಕೈಗೊಳ್ಳುವ ಸಮಯದಲ್ಲಿ ವಾಹನ ಸಂಚಾರಕ್ಕೆ /ಸಾರ್ವಜನಿಕರ ಓಡಾಟಕ್ಕೆ ತೊಂದರೆಯಾಗದ ಹಾಗೆ ಅಮ್ಮನವರ ಹೊರೆಯನ್ನಿಡುವ (ಮುರಿನಕಟ್ಟೆ) ಸ್ಥಳಕ್ಕಾಗಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದಿಂದ(NHAI) ಸೂಕ್ತ ಪರ್ಯಾಯ ಸ್ಥಳವನ್ನು ಗುರುತಿಸುವುದು ಅಗತ್ಯವೆಂದು ಕಂಡುಬಂದಿದೆ.
ನಗರದ ಎಲ್ಲಾ ಸಮುದಾಯದ ಹಿರಿಯ ನಾಗರಿಕರು, ಅಧಿಕಾರಿಗಳು, ಜನಪ್ರತಿನಿಧಿಗಳು ಹಾಗೂ ಒಮ್ಮತದ ಅಭಿಪ್ರಾಯದೊಂದಿಗೆ ಪರ್ಯಾಯ ಸೂಕ್ತ ಸ್ಥಳವನ್ನು ಗುರುತಿಸಲಾಗಿದೆ.
ಎಲ್ಲರ ಒಪ್ಪಿಗೆಯಂತೆ ಹಾಲಿ ಅಮ್ಮನವರ ಹೊರೆಯನ್ನು ಇಡಲಾಗಿರುವ ಅದೇ ರಸ್ತೆಯ ಮಿಡಿಯನ್ ಗಾಗಿ ಲಭ್ಯ ಇರುವ ಸ್ಥಳವನ್ನು ಪರ್ಯಾಯ ಸ್ಥಳವೆಂದು ಗುರುತಿಸಲಾಗಿದೆ. NHAI ರವರಿಂದ ಹಾಗೂ ಸ್ಥಳೀಯ ತಾಲ್ಲೂಕು ಆಡಳಿತದ ಸಹಯೋಗದೊಂದಿಗೆ ಸ್ಥಳದಲ್ಲಿ ಮಿಡಿಯನ್ ಹಾಗೂ ರಸ್ತೆ ಕಾಮಗಾರಿ(Road Work) ಮುಖಂಡರೊಂದಿಗೆ ಜಿಲ್ಲಾಡಳಿತದಿಂದ ಜರುಗಿಸಿ ಸಮಾಲೋಚನೆ ಪ್ರಾರಂಭಿಸಲಾಗಿದೆ ಎಂದು ಜಿಲ್ಲಾಧಿಕಾರಿ ಕೆ. ಲಕ್ಷ್ಮಿಪ್ರಿಯಾ(DC K Lakshmipriya) ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಇದನ್ನು ಓದಿ : ಬಿಜೆಪಿಗೆ ಅಣ್ಣಾ ಮಲೈ ಗುಡ್ ಬೈ. ಹೊಸ ಪಕ್ಷ ಕಟ್ಟಲು ಚಿಂತನೆ.
