ಇ ಸಮಾಚಾರ ಡಿಜಿಟಲ್  ನ್ಯೂಸ್ (esamachara  digital news) ಗೋಕರ್ಣ(Gokarn) :  ಉತ್ತರಕನ್ನಡ ಜಿಲ್ಲೆಯ ಗೋಕರ್ಣ ಸಮೀಪದ ಹಿತ್ತಲಮಕ್ಕಿ(Gokarn near Hittakamakki) ಬಳಿ ರಾಜ್ಯ ಹೆದ್ದಾರಿಯಲ್ಲಿ ಬೃಹತ್ ಮಾವಿನ ಮರವೊಂದು(Mango Tree) ಧರೆಗುರುಳಿದೆ.

ಪರಿಣಾಮ ಕೆಲಕಾಲ ವಾಹನ ಸಂಚಾರ ಸಂಪೂರ್ಣ ಅಸ್ತವ್ಯಸ್ತಗೊಂಡ ಘಟನೆ ನಡೆದಿದೆ.  ಪ್ರವಾಸಿ ವಾಹನದ ಮೇಲೆಯೇ ಮರ ಮುರಿದು ಬಿದ್ದಿದ್ದು(Fallen Tree), ವಾಹನದಲ್ಲಿದ್ದ ಪ್ರವಾಸಿಗರು(Tourist) ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಘಟನೆಯಿಂದ ವಾಹನಕ್ಕೆ ಹಾನಿಯಾಗಿದ್ದು(Vehicle Damage), ಸ್ಥಳದಲ್ಲಿ ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಗಿತ್ತು.

ಮಾದನಗೇರಿ–ಗೋಕರ್ಣ(Madanageri-Gokarn) ಸಂಪರ್ಕಿಸುವ ಪ್ರಮುಖ ಮಾರ್ಗದಲ್ಲಿ ಮರ ಬಿದ್ದ ಕಾರಣ ಹಲವು ಗಂಟೆಗಳ ಕಾಲ ವಾಹನ ಸಂಚಾರ ಸ್ಥಗಿತಗೊಂಡಿತ್ತು. ಇದರಿಂದ ಸ್ಥಳೀಯರು ಹಾಗೂ ಪ್ರವಾಸಿಗರು(Localities and Tourists) ಪರದಾಡುವಂತಾಯಿತು. ಘಟನೆಯ ಮಾಹಿತಿ ತಿಳಿದ ತಕ್ಷಣ ಸ್ಥಳೀಯರು ಹಾಗೂ ಸಂಬಂಧಿತ ಸಿಬ್ಬಂದಿಗಳು ಸ್ಥಳಕ್ಕೆ ಆಗಮಿಸಿ ಮರ ತೆರವು ಕಾರ್ಯಾಚರಣೆ ನಡೆಸಿದರು. ಸ್ಥಳೀಯರ ಸಹಕಾರದೊಂದಿಗೆ ರಸ್ತೆಗೆ ಅಡ್ಡವಾಗಿ ಬಿದ್ದಿದ್ದ ಬೃಹತ್ ಮರವನ್ನು(Big Tree) ತೆರವುಗೊಳಿಸಿದ ಬಳಿಕ ವಾಹನಗಳ ಸಂಚಾರವನ್ನು ಪುನರಾರಂಭಿಸಲಾಯಿತು.

ಇದನ್ನು ಓದಿ : ಇನ್ಮುಂದೆ ಮದುವೆ ದಿಬ್ಬಣದ ಜೊತೆ ಪೋಟೋ ಮತ್ತು ವಿಡಿಯೋಗ್ರಾಫರ್ಸ್ ಬರಲ್ಲ. ಅಸೋಸಿಯೇಶನ್ ತೀರ್ಮಾನ.