ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news) ಕಾರವಾರ(Karwar) : ತಾಲೂಕಿನ ವಿವಿಧ ಕಡೆಗಳಲ್ಲಿಕಳೆದ ಕೆಲ ದಿನಗಳಿಂದ ದೇವಾಲಯಗಳ ಸರಣಿ ಕಳ್ಳತನ(Serial Theft) ನಡೆಯುತ್ತಿದೆ.
ಕಾರವಾರ ನಗರ(Karwar Town) ಹಾಗೂ ಗ್ರಾಮೀಣ ಪೊಲೀಸ್ ಠಾಣೆ(Rural Police Station), ಚಿತ್ತಾಕುಲ ಪೊಲೀಸ್ ಠಾಣಾ(Chittakul Police Station) ವ್ಯಾಪ್ತಿಯಲ್ಲೂ ದೇವಸ್ಥಾನಗಳಲ್ಲಿ ಕಳ್ಳರು ಕೈಚಳಕ ಪ್ರದರ್ಶಿಸುತ್ತಿದ್ದಾರೆ. ಲಕ್ಷಾಂತರ ರೂಪಾಯಿ ಮೌಲ್ಯದ ಹಿತ್ತಾಳೆಯ ಗಂಟೆಗಳು, ದೀಪಗಳು ಹಾಗೂ ತಾಮ್ರದ ವಸ್ತುಗಳನ್ನು ಕಳ್ಳತನ ಮಾಡಿದ ಪ್ರಕರಣ ವರದಿಯಾಗಿವೆ.
ಮೇ 20ರಂದು ಕಾರವಾರ ನಗರದ ಹಬ್ಬುವಾಡ ರಸ್ತೆಯಲ್ಲಿರುವ(Habbuwada Road) ದಾಸಮಾರುತಿ ದೇವಸ್ಥಾನದಲ್ಲಿ ಹಾಡಹಗಲೇ ಕಳ್ಳತನ ನಡೆದಿದೆ. ದೇವಸ್ಥಾನದಲ್ಲಿನ ಅಂದಾಜು 30ಸಾ. ರೂ. ಮೌಲ್ಯದ ಸುಮಾರು 50 ಕೆ.ಜಿ ತೂಕದ ಹಿತ್ತಾಳೆ ಮತ್ತು ತಾಮ್ರದ ವಸ್ತುಗಳನ್ನ ಕಳ್ಳರು ದೋಚಿದ್ದಾರೆ. ಈ ಬಗ್ಗೆ ಕಾರವಾರ ಶಹರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಮೇ 31ರಂದು ಕಾರವಾರ ಗ್ರಾಮೀಣ ಪೊಲೀಸ್ ಠಾಣೆ ವ್ಯಾಪ್ತಿಯ ಚೆಂಡಿಯಾ ಗ್ರಾಮದಲ್ಲಿರುವ(Chendia Village) ಶ್ರೀ ಜಯ ಮಾರುತಿ ದೇವಸ್ಥಾನದಲ್ಲಿ ಕಳ್ಳತನ ನಡೆಸಿದ ಕಳ್ಳರು, ಸುಮಾರು 21ಸಾ. ರೂ. ಮೌಲ್ಯದ ಎರಡು ಬೆಲೆಬಾಳುವ ಹಿತ್ತಾಳೆಯ ಗಂಟೆಗಳನ್ನು ಕದ್ದೊಯ್ದಿದ್ದಾರೆ. ಈ ಬಗ್ಗೆ ದೂರು ದಾಖಲಾಗಿದೆ.
ಜೂನ್ 4 ರಂದು ಮಖೇರಿ, ಸಾಸನವಾಡದಲ್ಲಿರುವ(Makheri, Sasanawada) ಶ್ರೀ ರಾಮಸತಿ ದೇವಿ ದೇವಸ್ಥಾನದಲ್ಲಿ ಕಳ್ಳತನ ನಡೆಸಿದ ಕಳ್ಳರು ಒಟ್ಟು 24ಸಾ ರೂ. ಮೌಲ್ಯದ ವಸ್ತುಗಳನ್ನು ದೋಚಿದ್ದಾರೆ. 15ಸಾ. ರೂ. ಮೌಲ್ಯದ ದೊಡ್ಡ ಹಿತ್ತಾಳೆ ದೀಪ, 5ಸಾ. ರೂ. ಮೌಲ್ಯದ ಸಣ್ಣ ಸಮಯ್ ಹಾಗೂ 4ಸಾ. ರೂ. ಮೌಲ್ಯದ ಹಿತ್ತಾಳೆಯ ಗಂಟೆ ಕಳ್ಳತನವಾಗಿದೆ.
ಅದೇ ರೀತಿ ಚಿತ್ತಾಕುಲ ವ್ಯಾಪ್ತಿ(Chittakul Limits) ಸೇರಿ ವಿವಿಧ ಕಡೆಗಳಲ್ಲಿ ಕಳ್ಳತನ ನಡೆದಿದೆ ಎನ್ನಲಾಗಿದೆ. ಕಾರವಾರ ತಾಲೂಕಿನ ವಿವಿಧ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡು, ಕಳ್ಳರ ಪತ್ತೆಗಾಗಿ ತನಿಖೆ ಚುರುಕುಗೊಳಿಸಿದ್ದಾರೆ. ಆರೋಪಿ ಪೊಲೀಸರ ಕೈಗೆ ಸಿಕ್ಕಿದ್ದಾನೆ ಎನ್ನಲಾಗಿದೆ.
ಇದನ್ನು ಓದಿ : ರಸ್ತೆಗೆ ಅಡ್ಡವಾಗಿ ಉರುಳಿದ ಬೃಹತ್ ಮಾವಿನಮರ. ಪ್ರವಾಸಿಗರು ಪ್ರಾಣಾಪಾಯದಿಂದ ಪಾರು
