ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news) ಭಟ್ಕಳ(Bhatkal) : ಕಾಲೇಜಿನ ಶುಲ್ಕ(College Fees) ಪಾವತಿಸಲು ಅಗತ್ಯವಿದ್ದ ಹಣ ಸಮಯಕ್ಕೆ ವಾಪಸ್ ಸಿಗದ ಹಿನ್ನೆಲೆಯಲ್ಲಿ ಮನನೊಂದ ವಿದ್ಯಾರ್ಥಿನಿಯೊಬ್ಬಳು(Student) ಬಾವಿಗೆ ಜಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಭಟ್ಕಳ ತಾಲೂಕಿನ ಬೆಳಕೆ ಗ್ರಾಮದಲ್ಲಿ(Bhatkal Taluku Belle Village) ನಡೆದಿದೆ.
ಬೆಳಕೆ ಗ್ರಾಮದ ಕಂಚಿಕೇರಿ(Belake Village Kanchikeri) ನಿವಾಸಿ ನಾಗರಾಜ ಲಚ್ಮಯ್ಯ ನಾಯ್ಕ ಅವರ ಪುತ್ರಿ ಗಾಯತ್ರಿ ಮೃತ ದುರ್ದೈವಿಯಾಗಿದ್ದಾಳೆ.
ಕಾಲೇಜಿನ ಶುಲ್ಕ(College Fees) ಪಾವತಿಗಾಗಿ ಸಂಗ್ರಹಿಸಿದ್ದ ಹಣವನ್ನು(Money) ಪರಿಚಯಸ್ಥರಾಗಿರುವ ಜಾಲಿಯ(Jali) ಸಂತೋಷ ಮಾದೇವ ನಾಯ್ಕ ಅವರಿಗೆ ವಾಪಸ್ ನೀಡುವ ಭರವಸೆಯೊಂದಿಗೆ ನೀಡಿದ್ದಳು ಎನ್ನಲಾಗಿದೆ. ಆದರೆ ಹಲವು ಬಾರಿ ಹಣವನ್ನು ವಾಪಸ್ ಕೇಳಿದರೂ ನೀಡದೆ ವಿಳಂಬ ಮಾಡಲಾಗಿದೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.
ಹಣ ಸಿಗದ ಪರಿಣಾಮ ಕಾಲೇಜಿನ ಶುಲ್ಕ(College Fees) ಪಾವತಿಸಲಾಗದೆ ಗಾಯತ್ರಿಗೆ ಹಾಲ್ ಟಿಕೆಟ್(Hall Ticket) ದೊರೆಯಲಿಲ್ಲ. ಆಕೆ ತೀವ್ರ ಮಾನಸಿಕವಾಗಿ ನೊಂದಿದ್ದಳು ಎಂದು ಕುಟುಂಬದವರು ನೀಡಿದ ದೂರಿನಲ್ಲಿ ತಿಳಿಸಿದ್ದಾರೆ. ಗಾಯತ್ರಿ ಮನೆಯಿಂದ ನಾಪತ್ತೆಯಾಗಿದ್ದ ಹಿನ್ನೆಲೆಯಲ್ಲಿ ಕುಟುಂಬಸ್ಥರು ಹಾಗೂ ಸ್ಥಳೀಯರು ವಿವಿಧೆಡೆ ಹುಡುಕಾಟ ನಡೆಸಿದರು. ಬಳಿಕ ಮನೆಯ ಸಮೀಪದ ಖಾಸಗಿ ಬಾವಿಯಲ್ಲಿ ಆಕೆಯ ಮೃತದೇಹ ಪತ್ತೆಯಾಗಿದೆ.
ಮಾಹಿತಿ ತಿಳಿಯುತ್ತಿದ್ದಂತೆ ಭಟ್ಕಳ ಗ್ರಾಮೀಣ ಪೊಲೀಸ್(Bhatkal Rural Station) ಠಾಣೆಯ ಇನ್ಸ್ಪೆಕ್ಟರ್ ವೆಂಕಟೇಶ ಮುರನಾಳ ಹಾಗೂ ಪಿಎಸ್ಐ ಮಲ್ಲಿಕಾರ್ಜುನ ಕೊರಾಣಿ ಸ್ಥಳಕ್ಕೆ ಭೇಟಿ ನೀಡಿ, ಸ್ಥಳೀಯರ ಸಹಾಯದಿಂದ ಮೃತದೇಹವನ್ನು ಮೇಲಕ್ಕೆತ್ತಿಸಿದರು. ನಂತರ ಸರ್ಕಾರಿ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿ ಮೃತದೇಹವನ್ನು ಕುಟುಂಬಸ್ಥರಿಗೆ ಹಸ್ತಾಂತರಿಸಲಾಯಿತು. ಈ ಬಗ್ಗೆ ಈ ಭಟ್ಕಳ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸಿದ್ದಾರೆ .
ಇದನ್ನು ಓದಿ : ಮೀನುಗಾರಿಕೆಗೆ ತೆರಳಿದ್ದ ವೇಳೆ ದೋಣಿ ಮಗುಚಿ ಮೀನುಗಾರ ಸಾವು.
