ಇ ಸಮಾಚಾರ ಡಿಜಿಟಲ್  ನ್ಯೂಸ್ (esamachara  digital news) ಅಂಕೋಲಾ(Ankola) : ಮೀನು ಹಿಡಿಯಲು(Fish Catch)  ತೆರಳಿದ್ದ ಮೀನುಗಾರನೋರ್ವ  ದೋಣಿ ಮಗುಚಿ ಮುಳುಗಿದ ಪರಿಣಾಮ ಮೃತಪಟ್ಟಿರುವ ದುರ್ಘಟನೆ ಉತ್ತರಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ಹಾರವಾಡ ಗ್ರಾಮದಲ್ಲಿ(Ankola Taluku Harwad Village) ಸಂಭವಿಸಿದೆ.

ಹಾರವಾಡ ಗ್ರಾಮದ ಸಹದೇವ ಶಿವರಾಮ್ ಮೆಹತಾ(50) ಮೃತ ದುರ್ದೈವಿ.  ಸಣ್ಣ ದೋಣಿಯಲ್ಲಿ ಕಡಲ ತೀರದ ಸಮೀಪ ಮೀನುಗಾರಿಕೆಗೆ(Fishing) ತೆರಳಿದ್ದ ವೇಳೆ ಅಲೆಗೆ ದೋಣಿ ಮಗುಚಿ ಬಿದ್ದ   ಪರಿಣಾಮವಾಗಿ  ನೀರಿನಲ್ಲಿ ಮುಳುಗಿದ್ದಾರೆ ಎನ್ನಲಾಗಿದೆ.

ಘಟನೆ  ತಿಳಿಯುತ್ತಿದ್ದಂತೆಯೇ ಸ್ಥಳೀಯ ಮೀನುಗಾರರು(Fishermans) ಹಾಗೂ ಸಾರ್ವಜನಿಕರು ರಕ್ಷಣಾ ಕಾರ್ಯಾಚರಣೆ(Rescue Operations) ನಡೆಸಿ ಮೃತದೇಹವನ್ನು ದಡಕ್ಕೆ ತಂದಿದ್ದಾರೆ.  ಅಷ್ಟರಲ್ಲೆ ಸಹದೇವ ಮೃತಪಟ್ಟಿದ್ದಾರೆ.

ದುರಂತದಿಂದಾಗಿ ಹಾರವಾಡ ಗ್ರಾಮದಲ್ಲಿ ಶೋಕದ ವಾತಾವರಣ ನಿರ್ಮಾಣವಾಗಿದ್ದು, ಮೃತರ ಕುಟುಂಬದವರ ಆಕ್ರಂದನ ಮುಗಿಲು ಮುಟ್ಟಿದೆ. ಅಂಕೋಲಾ ಪೊಲೀಸ್ ಠಾಣಾ(Ankola Police Station) ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು ಈ ಸಂಬಂಧ  ತನಿಖೆ ನಡೆದಿದೆ.

ಇದನ್ನು ಓದಿ : ಕೊಲ್ಲೂರಿಗೆ ತಮಿಳುನಾಡು ಮುಖ್ಯಮಂತ್ರಿ ವಿಜಯ್. ಎಂಜಿಆರ್, ಜಯಲಲಿತಾ ಹಾದಿಯಲ್ಲಿ ಮತ್ತೋರ್ವ ಸಿಎಂ.