ಹೊನ್ನಾವರ :  ಮಂಕಿಯ ಗುಳದಕೇರಿಯಲ್ಲಿರುವ ಚಿನ್ನದ ಅಂಗಡಿಗೆ ಕನ್ನ ಹಾಕಿದ ಚಾಲಾಕಿ ಕಳ್ಳರನ್ನ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಮಂಕಿಯ  ಭವಾನಿ ಕಾಂಪ್ಲೆಕ್ಸನಲ್ಲಿರುವ ಅಣ್ಣಪ್ಪ ಪ್ರಭಾಕರ ಶೇಟ್ ಮಾಲೀಕತ್ವದ ಶ್ರೀ ಕಾಮಾಕ್ಷಿ ಜ್ಯೂವೆಲ್ಲರ್ಸ್ ಅಂಗಡಿಯಲ್ಲಿ ಏಪ್ರಿಲ್ 30ರಂದು ಕಳ್ಳತನ ಮಾಡಲಾಗಿತ್ತು. ಈ ಬಗ್ಗೆ ಮಂಕಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ತನಿಖೆ ನಡೆಸಿದ ಪೊಲೀಸರು ಏಳು ಜನ ಕಳ್ಳರನ್ನು ಬಂಧಿಸಿದ್ದಾರೆ. ಬಂಧಿತರಿಂದ ಒಟ್ಟು 13,30,050 ರೂ. ಮೌಲ್ಯದ   230 ಗ್ರಾಂ ತೂಕದ ಗಟ್ಟಿ ಬಂಗಾರ ಹಾಗೂ ಬಂಗಾರದ ಆಭರಣಗಳು 05 ಕೆ,ಜಿ ಬೆಳ್ಳಿಯ ಆಭರಣಗಳನ್ನು ಮತ್ತು ಕೃತ್ಯಕ್ಕೆ ಬಳಸಿದ ಒಂದು ಸ್ಕೂಟರ್ ಮತ್ತು ಕೃತ್ಯಕ್ಕೆ ಬಳಸಿದ ವಸ್ತುಗಳನ್ನ ವಶಪಡಿಸಿಕೊಂಡಿದ್ದಾರೆ.

ಹಿರಿಯ ಅಧಿಕಾರಿಗಳ ಮಾರ್ಗದರ್ಶನದಲ್ಲಿ ಭಟ್ಕಳ ಗ್ರಾಮಾಂತರ ವೃತ್ತ ಸಿಪಿಐ ಮತ್ತು ಮಂಕಿ ಪೊಲೀಸ್ ಠಾಣಾ ಅಧಿಕಾರಿ ಮತ್ತು ಸಿಬ್ಬಂದಿಗಳ ತಂಡವು ಯಶಸ್ವಿಯಾಗಿ ಪ್ರಕರಣ ಭೇದಿಸಿದೆ.