ಇ ಸಮಾಚಾರ ಡಿಜಿಟಲ್  ನ್ಯೂಸ್ (esamachara  digital news) ಹಳಿಯಾಳ(Haliyal) : ಕುಡಿದಮತ್ತಿನಲ್ಲಿದ್ದ ವ್ಯಕ್ತಿಯೋರ್ವ ರಂಪಾಟ ನಡೆಸಿ ಪೊಲೀಸರ ಮೇಲೆ ಹಲ್ಲೆಗೆ ಮುಂದಾದ ಘಟನೆ ಹಳಿಯಾಳದ ಮೌರ್ಯ ಹೋಟೆಲ್(Haliyal Mourya Hotel) ಬಳಿ ವರದಿಯಾಗಿದೆ.

ಈ ಹಿಂದೆ ರೌಡಿ ಎಂದು ಹೇಳಲಾಗುತ್ತಿರುವ ಮಂಜುನಾಥ ಭೆಕನಿ ಎಂಬಾತ ಎಸ್ಸೈ ಬಸವರಾಜ ಅವರ ಎದುರೇ ಪೊಲೀಸ್ ಜೀಪ್(Police Jeep) ತಡೆದು ಅವಾಚ್ಯವಾಗಿ ಬೈದು ನಿಂದಿಸಿದ್ದಾನೆ. ಈ ವೇಳೆ ಪೊಲೀಸ್ ಸಿಬ್ಬಂದಿಯ ಮೇಲೆಯೂ ಹಲ್ಲೆ ನಡೆಸಿದ್ದಾನೆ ಎನ್ನಲಾಗಿದೆ.

ರೌಡಿಯ ಆರ್ಭಟಕ್ಕೆ ಕೆಲಕಾಲ ಪೊಲೀಸರು ಅಸಹಾಯಕರಾಗಿ(Police Helpless) ನಿಂತು ನೋಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿತ್ತು. ಘಟನೆಯಿಂದ ಸ್ಥಳೀಯ ನಾಗರಿಕರು ಭಯಭೀತರಾಗಿದ್ದಾರೆ. ದೂರಿನ ಮೇರೆಗೆ ಹಳಿಯಾಳ ಪೊಲೀಸರು ಸ್ಥಳಕ್ಕೆ ಧಾವಿಸಿದ್ದರು. ಪೊಲೀಸರ  ಮೇಲೆಯೇ ನಡೆದ ಈ ಘಟನೆ ಹಳಿಯಾಳದಲ್ಲಿ ಚರ್ಚೆಗೆ ಗ್ರಾಸವಾಗಿದ್ದು, ಆರೋಪಿ ವಿರುದ್ಧ ಪೊಲೀಸರು ಯಾವ ಕ್ರಮ ಕೈಗೊಳ್ಳುತ್ತಾರೆ ಎಂಬುದು ಕುತೂಹಲ ಮೂಡಿಸಿದೆ.

ಇದನ್ನು ಓದಿ : ರೀಲ್ಸ್ ಹುಚ್ಚಿಗೆ  ಸಮುದ್ರದಲ್ಲಿ ಕೊಚ್ಚಿ ಹೋದ ಪ್ರವಾಸಿಗ ಯುವಕ