ಇ ಸಮಾಚಾರ ಡಿಜಿಟಲ್  ನ್ಯೂಸ್ (esamachara  digital news) ಕಾರವಾರ(Karwar) : ನಗರದಹೃದಯಭಾಗದಲ್ಲಿರುವ ಜಿಲ್ಲಾ ಮತ್ತು ಸತ್ರ ನ್ಯಾಯಾಲಯಕ್ಕೆ (District Court) ಅನಾಮಧೇಯ ವ್ಯಕ್ತಿಗಳು ಇ-ಮೇಲ್(E Mail) ಮೂಲಕ  ಬಾಂಬ್ ಬೆದರಿಕೆ ಸಂದೇಶ ಕಳಿಸಿದ್ದಾರೆ. ಹೀಗಾಗಿ ಕೋರ್ಟ್ ಆವರಣದಲ್ಲಿ  ಆತಂಕದ ವಾತಾವರಣ ನಿರ್ಮಾಣವಾಗಿದೆ.

ಸಂದೇಶ ನೋಡಿದ ನ್ಯಾಯಾಲಯ ಸಿಬ್ಬಂದಿಗಳು ಪೊಲೀಸರಿಗೆ ಮಾಹಿತಿ ತಿಳಿಸಿದ ಹಿನ್ನಲೆಯಲ್ಲಿ  ಬಾಂಬ್ ನಿಷ್ಕ್ರಿಯ ದಳ(Bomb Squad) ಹಾಗೂ ಶ್ವಾನ ದಳದ(Dog Squad) ಸಿಬ್ಬಂದಿಗಳು  ಸ್ಥಳಕ್ಕೆ ಆಗಮಿಸಿ  ಪರಿಶೀಲನೆ ನಡೆಸಿದ್ದಾರೆ.

ಬುಧವಾರ ಬೆಳಿಗ್ಗೆ 1-44ರ ಸುಮಾರಿಗೆ  [email protected] ವಿಳಾಸದಿಂದ ಬೆದರಿಕೆ ಸಂದೇಶ ಬಂದಿದೆ. ಕಳಿಸಿರುವ ಸಂದೇಶದಲ್ಲಿ ಕೆಲ ಆರೋಪಗಳ ಉಲ್ಲೇಖ ಮಾಡಿ, ಈ ವಿಚಾರಕ್ಕೆ ಸಂಬಂಧಿಸಿದಂತೆ ನ್ಯಾಯಾಲಯದಲ್ಲಿ ಮಿನಿ‌ ಗ್ಯಾಸ್ ಸಿಲಿಂಡರ್ ಬಾಂಬ್ ಸ್ಫೋಟಿಸುವುದಾಗಿ ಬೆದರಿಕೆ ಹಾಕಲಾಗಿದೆ.

ಇ-ಮೇಲ್‌ನಲ್ಲಿ ತಮಿಳುನಾಡಿನ ರಾಜಕೀಯ ಮುಖಂಡ ಉದಯನಿಧಿ ಸ್ಟಾಲಿನ್(Udayanidhi Stalin) ಅವರನ್ನು ಬೆಂಬಲಿಸುವ ಚೆನ್ನೈ ಪತ್ರಕರ್ತರ(Chennai Journalist) ಕುರಿತು ಉಲ್ಲೇಖಿಸಲಾಗಿದೆ. ಉದಯನಿಧಿ ಸ್ಟಾಲಿನ್ ಅವರನ್ನ ಬೆಂಬಲಿಸುವವರ ಮೇಲೆ  ಎಫ್‌ಐಆರ್ ದಾಖಲಾಗಿಲ್ಲ ಎಂದು ಸಂದೇಶದಲ್ಲಿ ಉಲ್ಲೇಖಿಸಲಾಗಿದೆ.

ಬೆದರಿಕೆ ಸಂದೇಶದ ಸುದ್ದಿ  ತಿಳಿಯುತ್ತಿದ್ದಂತೆ ಕಾರವಾರ ಪೊಲೀಸರು ಜಿಲ್ಲಾ ನ್ಯಾಯಾಲಯಕ್ಕೆ ದೌಡಾಯಿಸಿ ಮಾಹಿತಿ ಕಲೆ ಹಾಕಿ  ಪರಿಶೀಲನೆ ನಡೆಸಿದರು.  ಇ-ಮೇಲ್ ಬೆದರಿಕೆಯ ಕುರಿತು ಪೊಲೀಸರು ತನಿಖೆ(Police Investigation) ಆರಂಭಿಸಿದ್ದಾರೆ. ರಾಜ್ಯದ ವಿವಿಧ ನ್ಯಾಯಾಲಯಗಳಿಗೂ ಈಗಾಗಲೇ ಬೆದರಿಕೆ ಸಂದೇಶ ಬರುತ್ತಿದ್ದು ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

ಇದನ್ನು ಓದಿ : ತಂದೆಯ ಜೊತೆ ಮಲಗಿದ್ದ ಮಕ್ಕಳಿಗೆ ಕಡಿದ ಹಾವು. ಮಗ ಸಾವು, ಮಗಳು ಗಂಭೀರ.