ಇ ಸಮಾಚಾರ ಡಿಜಿಟಲ್  ನ್ಯೂಸ್ (esamachara  digital news) ಶಿವಮೊಗ್ಗ(Shivamogga) : ಗಾಂಜಾ ಚಟದ ವಿಚಾರವಾಗಿ ದೂರು ನೀಡಲು ಹೊರಟಿದ್ದ ವೃದ್ಧೆಯೊಬ್ಬರನ್ನು ಮೊಮ್ಮಗನೇ ಕೊಲೆ ಮಾಡಿದ ಘಟನೆ ಶಿವಮೊಗ್ಗ(Shivamogga) ನಗರದ ಮಿಳಘಟ್ಟ ವಾರ್ಡಿನ ಆನಂದರಾವ್ ಬಡಾವಣೆಯಲ್ಲಿ ನಡೆದಿದೆ.

ಮೃತರನ್ನು ಸುಶೀಲಮ್ಮ (65) ಎಂದು ಗುರುತಿಸಲಾಗಿದೆ. ನಡೆದುಕೊಂಡು ಹೋಗುತ್ತಿದ್ದ ವೇಳೆ ಅವರನ್ನು ತಳ್ಳಿ, ತಲೆಯ ಮೇಲೆ ಸೈಜುಕಲ್ಲು ಎತ್ತಿಹಾಕಿ ಭೀಕರವಾಗಿ ಕೊಲೆ ಮಾಡಲಾಗಿದೆ ಎಂದು ತಿಳಿದುಬಂದಿದೆ.

ಕೊಲೆ ಆರೋಪಿಯನ್ನು ಸುಶೀಲಮ್ಮ ಅವರ ಮೊಮ್ಮಗ ಕಿಶೋರ್ ಎಂದು ಗುರುತಿಸಲಾಗಿದೆ. ಆರೋಪಿಯ ವಿರುದ್ಧ ಈ ಹಿಂದೆ ಬೆಟ್ಟಿಂಗ್(Betting) ಹಾಗೂ ಗಾಂಜಾ(Marijuana) ಪ್ರಕರಣಗಳೂ ದಾಖಲಾಗಿವೆ.

ಗಾಂಜಾ ಚಟದ ಬಗ್ಗೆ ದೂರು ನೀಡಲು ಹೊರಟಿದ್ದ ಅಜ್ಜಿಯನ್ನೇ ಮೊಮ್ಮಗ ಹತ್ಯೆ ಮಾಡಿರುವುದು ಸ್ಥಳೀಯರಲ್ಲಿ ಆತಂಕ ಮೂಡಿಸಿದೆ. ಘಟನಾ ಸ್ಥಳಕ್ಕೆ ಶಿವಮೊಗ್ಗ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ(Shivamogga SP) ನಿಖಿಲ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಘಟನೆ ಸಂಬಂಧ ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ(Doddapete Police Station) ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.