ಇ ಸಮಾಚಾರ ಡಿಜಿಟಲ್  ನ್ಯೂಸ್ (esamachara  digital news) ಹೊನ್ನಾವರ(Honnavar) : ಬಾರೀ ಮಳೆಯಿಂದ ಭಾಸ್ಕೇರಿ ಹೊಳೆ(Bhaskeri River) ಉಕ್ಕಿ ಹರಿಯುತ್ತಿರುವ ಹಿನ್ನೆಲೆ, ರಸ್ತೆ ಸಂಪರ್ಕವಿಲ್ಲದ ಗ್ರಾಮದಿಂದ ಮೃತದೇಹವನ್ನು ಹೊತ್ತು ಗ್ರಾಮಸ್ಥರು ನೀರಿನಲ್ಲೇ ಸಾಗಿದ ಘಟನೆ ಹೊನ್ನಾವರ ತಾಲೂಕಿನ ದೊಡ್ಡಹಿತ್ತಲಕೇರಿ ಗ್ರಾಮದಲ್ಲಿ ನಡೆದಿದೆ.

ಗ್ರಾಮದ ನಿವಾಸಿ ಕ್ರಿಸ್ಟಿನ್ ರೊಡ್ರಿಗ್ರೀಸ್ (30) ಅನಾರೋಗ್ಯದಿಂದ ಮೃತಪಟ್ಟಿದ್ದರು. ಶವಸಂಸ್ಕಾರಕ್ಕಾಗಿ ಮೃತದೇಹವನ್ನು ಗ್ರಾಮದಿಂದ ಹೊರಗೆ ಕೊಂಡೊಯ್ಯಬೇಕಾದ ಪರಿಸ್ಥಿತಿ ಎದುರಾದಾಗ, ಉಕ್ಕಿ ಹರಿಯುತ್ತಿದ್ದ ಭಾಸ್ಕೇರಿ ಹೊಳೆಯನ್ನು(Bhaskeri River) ದಾಟಿಯೇ ಗ್ರಾಮಸ್ಥರು(Villegers) ಶವವನ್ನು ಹೊತ್ತು ಸಾಗಿದರು.

ಸುಮಾರು 50ಕ್ಕೂ ಹೆಚ್ಚು ಮನೆಗಳಿರುವ ದೊಡ್ಡಹಿತ್ತಲ ಕೇರಿ, ಗಜ್ನಿಕೇರಿ ಗ್ರಾಮಕ್ಕೆ ಇಂದಿಗೂ ಸರಿಯಾದ ರಸ್ತೆ ಹಾಗೂ ಸೇತುವೆ ಸಂಪರ್ಕ(Road and Bridge Connect) ಇಲ್ಲ. ಮಳೆಗಾಲದಲ್ಲಿ ಹೊಳೆ ಉಕ್ಕಿ ಹರಿದಾಗ ಗ್ರಾಮಸ್ಥರು ಜೀವದ ಹಂಗು ತೊರೆದು ನೀರು ದಾಟಿ ಸಂಚರಿಸಬೇಕಾದ ಅನಿವಾರ್ಯತೆ ಎದುರಾಗುತ್ತಿದೆ.

ಗ್ರಾಮಕ್ಕೆ ರಸ್ತೆ ಹಾಗೂ ಸೇತುವೆ ನಿರ್ಮಿಸುವಂತೆ ಗ್ರಾಮಸ್ಥರು ಹಲವು ಬಾರಿ ಅಧಿಕಾರಿಗಳಿಗೆ ಸಂಬಂಧಪಟ್ಟ ಶಾಸಕರಿಗೆ ಮನವಿ ಸಲ್ಲಿಸಿದ್ದರೂ ಯಾವುದೇ ಶಾಶ್ವತ ಪರಿಹಾರ ದೊರೆತಿಲ್ಲ ಎಂದು ಸ್ಥಳೀಯರು ಆರೋಪಿಸಿದ್ದಾರೆ.

ಈ ಘಟನೆ ಬಳಿಕ ಗ್ರಾಮಕ್ಕೆ ಅಗತ್ಯ ಮೂಲಭೂತ ಸೌಕರ್ಯಗಳನ್ನು(Basic Infrastructure) ತುರ್ತಾಗಿ ಕಲ್ಪಿಸಬೇಕು ಎಂದು ಗ್ರಾಮಸ್ಥರು ಸರ್ಕಾರ(Government) ಮತ್ತು ಜಿಲ್ಲಾಡಳಿತವನ್ನು(District Administration) ಒತ್ತಾಯಿಸಿದ್ದಾರೆ.