ಇ ಸಮಾಚಾರ ಡಿಜಿಟಲ್‌ ನ್ಯೂಸ್‌ (esamachara digital news) ಕಾರವಾರ(Karwar ) : ನಗರದ ಬಸ್ ನಿಲ್ದಾಣದ ಬ್ರಾಹ್ಮಣಗಲ್ಲಿ (Brahmanagalli) ರಸ್ತೆ ಬದಿಯಲ್ಲಿ ಹ್ಯಾಂಡಲ್ ಲಾಕ್ ಹಾಕಿ ನಿಲ್ಲಿಸಿದ್ದ ಹೀರೊ ಪ್ಯಾಶನ್ ಪ್ರೊ(Hero Passion Pro) ಬೈಕ್‌ ನಾಪತ್ತೆಯಾದ ಘಟನೆ ನಡೆದಿದೆ.

ಕುಮಟಾ(Kumta) ತಾಲೂಕಿನ ನೆಲ್ಲಿಕೇರಿ ನಿವಾಸಿ ಹಾಗೂ ಸರ್ಕಾರಿ ನೌಕರ ವಿನಾಯಕ ಮಹಾದೇವ ನಾಯ್ಕ (38) ಅವರು ಬೈಕ್ ಕಳುವಾಗಿದೆ.ಆಗಸ್ಟ್ 19ರಂದು ಸಂಜೆ ತಮ್ಮ ಬೈಕ್‌ನಲ್ಲಿ ಕಾರವಾರಕ್ಕೆ ಆಗಮಿಸಿದ್ದರು. ರಾತ್ರಿ ಸುಮಾರು 7.10ರ ವೇಳೆಗೆ ಕಾರವಾರ ಬಸ್ ನಿಲ್ದಾಣದ(Karwar Busstand) ಸಮೀಪದ ಬ್ರಾಹ್ಮಣಗಲ್ಲಿಗೆ ತೆರಳುವ ರಸ್ತೆಯ ಬದಿಯಲ್ಲಿ ಬೈಕ್‌ನ್ನು ನಿಲ್ಲಿಸಿ, ಹ್ಯಾಂಡಲ್ ಲಾಕ್ ಹಾಕಿದ್ದರು. ಬಳಿಕ ಬಸ್ ಮೂಲಕ ತಮ್ಮ ಊರಾದ ಕುಮಟಾಕ್ಕೆ(Kumta) ತೆರಳಿದ್ದರು.

ಮರುದಿನ ಬೆಳಗ್ಗೆ ಸುಮಾರು 9.20ರ ವೇಳೆಗೆ ಬಸ್ ಮೂಲಕ ಮತ್ತೆ ಕಾರವಾರಕ್ಕೆ ಬಂದ ಅವರು, ತಾವು ಬೈಕ್ ನಿಲ್ಲಿಸಿದ್ದ ಸ್ಥಳಕ್ಕೆ ತೆರಳಿ ನೋಡಿದಾಗ ಬೈಕ್ ಕಾಣೆಯಾಗಿರುವುದು ಗಮನಕ್ಕೆ ಬಂದಿದೆ. ಸುತ್ತಮುತ್ತಲ ಪ್ರದೇಶದಲ್ಲಿ ಹುಡುಕಾಟ ನಡೆಸಿದರೂ ಬೈಕ್ ಪತ್ತೆಯಾಗಿಲ್ಲ.

ಯಾರಾದರೂ ತಮ್ಮ ಬೈಕ್‌ನ್ನು ತಪ್ಪಾಗಿ ತೆಗೆದುಕೊಂಡು ಹೋಗಿರಬಹುದು ಎಂಬ ಅನುಮಾನದಿಂದ ಕೆಲಕಾಲ ಹುಡುಕಾಟ ನಡೆಸಿದರೂ ಯಾವುದೇ ಸುಳಿವು ಸಿಗದ ಹಿನ್ನೆಲೆಯಲ್ಲಿ ಆ.21ರಂದು ಕಾರವಾರ ಶಹರ ಪೊಲೀಸ್ ಠಾಣೆಗೆ(Karwar Town Police Station ) ಬಂದು ದೂರು ನೀಡಿದ್ದಾರೆ.

ಕಳವಾಗಿರುವ ಬೈಕ್ KA-31/Y-4644 ನೋಂದಣಿ ಸಂಖ್ಯೆಯ ಹೀರೊ ಪ್ಯಾಶನ್ ಪ್ರೊ ಆಗಿದ್ದು, ಇದರ ಎಂಜಿನ್ ಸಂಖ್ಯೆ HA10EVGHM08279 ಹಾಗೂ ಚಾಸಿಸ್ ಸಂಖ್ಯೆ MBLHA108SGHM09199 ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಬೈಕ್‌ನ ಅಂದಾಜು ಮೌಲ್ಯ ₹15 ಸಾವಿರ ಎಂದು ತಿಳಿಸಲಾಗಿದೆ.

ಘಟನೆ ಕುರಿತು ಕಾರವಾರ(Karwar ) ಶಹರ ಪೊಲೀಸರು ಪ್ರಕರಣ ದಾಖಲಾಗಿದ್ದು ಕಳ್ಳತನವಾದ ಬೈಕ್ ಪತ್ತೆ ಹಾಗೂ ಕಳ್ಳರಿಗಾಗಿ ಪೊಲೀಸರು ತನಿಖೆ ಮುಂದುವರಿಸಿದ್ದಾರೆ