ಇ ಸಮಾಚಾರ ಡಿಜಿಟಲ್‌ ನ್ಯೂಸ್‌ (esamachara digital news) ಕಾರವಾರ(Karwar ) : ಮೀನುಗಾರಿಕೆಗೆ(Fishing) ತೆರಳುತ್ತೇನೆ ಎಂದು ಹೋಗಿದ್ದ ವ್ಯಕ್ತಿಯೊರ್ವ ವಾಪಾಸ್ ಮನೆಗೆ ಬಾರದೇ ಕಾಣೆಯಾದ ಘಟನೆ ನಡೆದಿದೆ.

ತಾಲೂಕಿನ ಬಿಣಗಾ(Binaga) ಒಕ್ಕಲಕೇರಿ ನಿವಾಸಿ ತಿಲಕ ದೇವಾ ಗೌಡ (46) ನಾಪತ್ತೆಯಾದವರು. ಆಗಸ್ಟ್ 10ರಂದು ಬೆಳಗ್ಗೆ 11 ಗಂಟೆ ಸುಮಾರಿಗೆ ಮೀನು ಹಿಡಿಯಲು ಬೈತಕೋಲ್(Baitkol ) ಕಡೆಗೆ ಹೋಗಿ ಗಾಳ ಹಾಕಿ ಮೀನು ಹಿಡಿದು ಬರುತ್ತೇನೆ ಎಂದು ಹೇಳಿ ಮನೆಯಿಂದ ಹೋಗಿದ್ದರು. ಆದರೆ ಇದುವರೆಗೆ ಮನೆಗೆ ಮರಳಿ ಬಂದಿಲ್ಲ. ಮನೆಯವರು ಸಾಕಷ್ಟು ಕಡೆಗಳಲ್ಲಿ, ಸಂಬಂಧಿಕರ ಮನೆಗಳಲ್ಲೂ ಹುಡುಕಿದರೂ ಪತ್ತೆಯಾಗಿಲ್ಲ.

ತಿಲಕ ದೇವಾ ಗೌಡ ಅವರು ಗೋಧಿ ವರ್ಣ, ಸಾಧಾರಣ ಮೈಕಟ್ಟು, ಕೋಲು ಮುಖ ಹೊಂದಿದ್ದು, ಸುಮಾರು 5.9 ಅಡಿ ಎತ್ತರ ಇದ್ದಾರೆ. ಅವರು ಕನ್ನಡ(Kannada), ಹಿಂದಿ(Hindi), ಕೊಂಕಣಿ(Konkani) ಹಾಗೂ ಮರಾಠಿ ಭಾಷೆ(Marathi Language) ಮಾತನಾಡುತ್ತಾರೆ.

ಕಾಣೆಯಾಗುವ ಸಂದರ್ಭದಲ್ಲಿ ತಿಳಿ ಹಸಿರು ಬಣ್ಣದ ಟೀಶರ್ಟ್ ಹಾಗೂ ಕಪ್ಪು ಬಣ್ಣದ ಹಾಫ್ ಪ್ಯಾಂಟ್ ಧರಿಸಿದ್ದರು. ಈ ವ್ಯಕ್ತಿಯ ಕುರಿತು ಯಾವುದೇ ಮಾಹಿತಿ ಸಾರ್ವಜನಿಕರಿಗೆ ದೊರೆತಲ್ಲಿ ಕೂಡಲೇ ಕಾರವಾರ ಶಹರ ಪೊಲೀಸ್ ಠಾಣೆ 08382 – 222336 ಸಂಖ್ಯೆಗೆ ಸಂಪರ್ಕಿಸುವಂತೆ ಕಾರವಾರ ಪೊಲೀಸ್ ಠಾಣೆಯ(Karwar Police Station) ಠಾಣಾಧಿಕಾರಿಗಳು ಪ್ರಕಟಣೆಯಲ್ಲಿ ಮನವಿ ಮಾಡಿದ್ದಾರೆ.