ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news) ಬೆಂಗಳೂರು(Bangalore) : ರಾಜ್ಯ ವಿಧಾನಸಭೆಯ ಉಪಸಭಾಧ್ಯಕ್ಷರಾಗಿ(Deputy Speaker) ಭಟ್ಕಳ ಶಾಸಕ, ಮಾಜಿ ಸಚಿವ ಮಂಕಾಳ ಸುಬ್ಬಾ ವೈದ್ಯ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಮಂಕಾಳ ವೈದ್ಯ ಪರವಾಗಿ ಸಿಎಂ ಡಿ ಕೆ ಶಿವಕುಮಾರ(CM D K Shivakumar) ಮಂಡಿಸಿದ ಪ್ರಸ್ತಾಪಕ್ಕೆ ಇಡೀ ಸದನ ಧ್ವನಿಮತದ ಮೂಲಕ ಒಪ್ಪಿಗೆ ನೀಡಿತು. ಸಭಾಧ್ಯಕ್ಷ ಜಿ ಎಸ್ ಪಾಟೀಲ್(G S Patil) ಅಧಿಕೃತವಾಗಿ ಮಂಕಾಳ ಸುಬ್ಬಾ ವೈದ್ಯ(Mankal Vaidya) ಅವರು ಅವಿರೋಧವಾಗಿ ಉಪಸಭಾಧ್ಯಕ್ಷರಾಗಿ ನೇಮಕಗೊಂಡಿದ್ದಾರೆ ಎಂದು ಘೋಷಿಸಿದರು.
ನೂತನ ಉಪಸಭಾಧ್ಯಕ್ಷ ವೈದ್ಯ ಕುರಿತು ಸಿಎಂ ಡಿಕೆಶಿ, ಉಪಮುಖ್ಯಮಂತ್ರಿ ಡಾ. ಜಿ ಪರಮೇಶ್ವರ್(DCM Dr. G Parameshwar) ಅಭಿನಂದನೆ ಸಲ್ಲಿಸಿದರು.
ಸದನದಲ್ಲಿ ಬಿಜೆಪಿ ಶಾಸಕರಾದ ದಿನಕರ್ ಶೆಟ್ಟಿ(BJP MLA Dinakar Shetty), ಹರೀಶ್ ಪೂಂಜಾ(Harish Punja), ಯಶಪಾಲ ಸುವರ್ಣ(Yashpal Suvarn), ಆರ್ ವಿ ದೇಶಪಾಂಡೆ(R V Deshapande), ಎಚ್ ಡಿ ತಮ್ಮಯ್ಯ(H D Tammaiha), ಅರವಿಂದ ಬೆಲ್ಲದ್(Aravinda Bellada) ಅವರು ವೈದ್ಯ ಅವರ ರಾಜಕೀಯ ಹಾದಿಯ ಕುರಿತು ಸದನಕ್ಕೆ ವಿವರಿಸಿದರು.
ನಂತರ ಮಾತನಾಡಿದ ನೂತನ ಉಪಸಭಾಧ್ಯಕ್ಷ ಮಂಕಾಳ ವೈದ್ಯ(Mankal Vaidya), ಹೊಸ ಜವಾಬ್ದಾರಿ ನೀಡಿದಕ್ಕೆ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದರು. ನಾನು ಹುಟ್ಟಿದಾಗ ನಮ್ಮ ಮನೆಯಲ್ಲಿ ಕರೆಂಟ್ ಕೂಡ ಇರಲಿಲ್ಲ. ನಾನು ಬೆಂಗಳೂರಿಗೆ ಬಂದು ಅನೇಕ ಕೆಲಸ ಮಾಡಿದ್ದೇನೆ. ಹೋಟೆಲ್ ನಲ್ಲಿ ಕೆಲಸ ಮಾಡಿದ್ದೇನೆ, ನಂತರ ಊರಿಗೆ ಹೋಗಿ ಜಿಲ್ಲಾ ಪಂಚಾಯತಿ ಚುನಾವಣೆ ಮೂಲಕ ರಾಜಕೀಯ ಪ್ರವೇಶ ಮಾಡಿದೆ ಎಂದರು.
ನಾನು ಜಿಲ್ಲಾ ಪಂಚಾಯತ್(Zilla Panchayat) ಚುನಾವಣೆಗೆ ಪಕ್ಷೇತರವಾಗಿ ನಾಮಪತ್ರ ಸಲ್ಲಿಸಿದ್ದೆ. ಆಗ ಎಲ್ಲರೂ ನಾಮಪತ್ರ ವಾಪಸ್ ತಗೊಳಿ ಅಂತ ಒತ್ತಡ ಹಾಕಿದ್ರು. ನಾನು ಇಡಗುಂಜಿ ಗಣೇಶನನ್ನ(Idagunji Ganesh) ನಂಬಿದವನು. ಅವನನ್ನು ನಂಬಿ ಕೆಲಸ ಮಾಡುವವನು. ಅಲ್ಲಿ ಭೇಟಿ ಕೊಟ್ಟು ನಾಮಿನೇಷನ್ ಹಾಕಿದೆ. 180 ವೋಟಿನಿಂದ ನಾನು ಗೆದ್ದೆ. ಸೋತೆ ಅಂತ ಹಲವರು ಹೇಳಿದರು. ನಾನು ಮನೆಗೆ ಹೊರಟಿದ್ದೆ, ಆಗ ನನಗೆ 180 ವೋಟಿನಿಂದ ಗೆದ್ದಿದ್ದು ಹೇಳಿದರು. ಮತ್ತೆ ಹೋಗಿ ಪ್ರಮಾಣ ಪತ್ರ ತಗೊಂಡೆ. ಆರ್.ವಿ ದೇಶಪಾಂಡೆ(R V Deshapande) ಅವರ ಪಕ್ಷಕ್ಕೆ ಸೇರಿಸಿಕೊಂಡೆ. ನನ್ನ ಜಿಲ್ಲಾ ಪಂಚಾಯತಿ ಉಪಾಧ್ಯಕ್ಷ ಮಾಡಿದ್ರು. ನಾನು ಬಡವರಿಗೆ ಸಹಾಯ ಮಾಡುವುದು ನನ್ನ ಕೆಲಸ. ಶಾಲೆ ಕಟ್ಟಿದ್ದೇನೆ, ಬಡವರಿಗೆ ಸಹಾಯ ಮಾಡಿದ್ದೇನೆ ಎಂದು ಹೇಳಿದರು.
ನನಗೆ ಯಾವುದೇ ಕ್ಷೇತ್ರದಲ್ಲಿ ಸ್ಪರ್ಧೆ ಮಾಡದ ಹಾಗೆ ಮೀಸಲಾತಿ ಬಂತು. ಇದ್ದ ಒಂದು ಜಿಲ್ಲಾಪಂಚಾಯತ್ ಜಾಲಿ ಜಿ.ಪಂ ಕ್ಷೇತ್ರದಲ್ಲಿ ಟಿಕೆಟ್ ಕೇಳಿದ್ರೂ ಕೊಡಲಿಲ್ಲ. ಅದಕ್ಕೆ ಎರಡನೆಯ ಬಾರಿ ಪಕ್ಷೇತರವಾಗಿ ಸ್ಪರ್ಧೆ ಮಾಡಿದೆ. ಬಿಜೆಪಿ ಕಾಂಗ್ರೆಸ್ ಸೋಲಿಸಿ ಮತ್ತೇ ಸದಸ್ಯ ಆದೆ. ದೇಶಪಾಂಡೆ ಅವರಲ್ಲಿ ಟಿಕೆಟ್ ಕೇಳಿಕೊಂಡೆ. ಜಾಲಿ ಕ್ಷೇತ್ರ ಜನರಲ್ ಇದೆ ಆಗಲ್ಲ ಅಂದ್ರು. ಆದರೂ ಪಕ್ಷೇತರನಾಗಿ 1800 ಮತಗಳಿಂದ ಮತ್ತೆ ಜಿಲ್ಲಾ ಪಂಚಾಯತ್ ಸ್ಥಾನದಲ್ಲಿ ಗೆದ್ದೆ ಎಂದರು.
2013 ರಲ್ಲಿ ವಿಧಾನಸಭೆ ಚುನಾವಣೆಯಲ್ಲೂ ಟಿಕೆಟ್ ಕೊಡಲಿಲ್ಲ. ಆಗ ಟಿಕೆಟ್ ಕೇಳಿದೆ ಸಿಗಲಿಲ್ಲ. ಆಗಲೂ ಬೇರೆ ಪಕ್ಷಕ್ಕೆ ಹೋಗದೇ ಪಕ್ಷೇತರ ಆಗಿ ನಿಂತೆ ಗೆದ್ದೆ. 2018 ರಲ್ಲಿ ಕಾಂಗ್ರೆಸ್ ಪಕ್ಷದಿಂದ ನಿಂತು 5000 ಮತಗಳ ಅಂತರದಿಂದ ಸೋತೆ. ಆಗ ಡಿ ಕೆ ಶಿವಕುಮಾರ್(D K Shivakumar) ಅವರು, ನೀನು ಕ್ಷೇತ್ರದಲ್ಲಿ ಕೆಲಸ ಮಾಡು, ಬಿ ಫಾರಂ ಚಿಂತೆ ಬೇಡ ಅಂತ ಹೇಳಿ ಧೈರ್ಯ ಹೇಳಿದ್ರು. 2023 ರಲ್ಲಿ ಬಿ ಫಾರಂ ಮನೆಗೆ ಕಳುಹಿಸಿದ್ರು, ಬೇರೆ ರೀತಿಯ ಸಹಾಯ ಸಹ ಮಾಡಿದ್ರು. ಚುನಾವಣೆಯಲ್ಲಿ ಬಾರೀ ಅಂತರದಿಂದ ಗೆದ್ದೆ, ಮೂರು ವರ್ಷ ಮಂತ್ರಿ ಆಗಿದ್ದೆ. ಆದರೆ ನನ್ನ ಅವಧಿಯಲ್ಲಿ ಪೂರ್ಣ ಪ್ರಮಾಣದಲ್ಲಿ ಕೆಲಸ ಮಾಡಲು ಆಗಿಲ್ಲ. ಅದಕ್ಕೆಬೇರೆ ಬೇರೆ ಕಾರಣ ಇದೆ. ಅದನ್ನು ಸದನದಲ್ಲಿ ಹೇಳಲಾರೆ ಅಂತ ರಾಜಕೀಯ ವಿರೋಧಿಗಳಿಗೆ ಟಾಂಗ್ ನೀಡಿದ್ರು.
ಮೊನ್ನೆ ಕೂಡ ಸಚಿವರಾಗಿದ್ದೀಯಾ ಅಂತ ಕರೆ ಮಾಡಿದ್ರು. ಬಳಿಕ ಏನೋ ವ್ಯತ್ಯಾಸ ಆಯ್ತು ಅಂದ್ರು. ನನ್ನ ಪಕ್ಷದ ಹಿತದೃಷ್ಟಿಯಿಂದ ತೀರ್ಮಾನ ಕೈಗೊಂಡರು. ನಾನು ಏನೂ ಮಾತನಾಡಲಿಲ್ಲ ಎಂದು ವೈದ್ಯ ಹೇಳಿದರು.
ಏನೂ ಆಸೆ ಇಲ್ಲದ ನನಗೆ, ನನ್ನ ಕ್ಷೇತ್ರದ ಜನ ನನ್ನನ್ನ ಇಲ್ಲಿಗೆ ತಂದು ನಿಲ್ಲಿಸಿದ್ದಾರೆ. ಈಗ ಉಪಾಸಭಾಧ್ಯಕ್ಷ ಸ್ಥಾನದಲ್ಲಿ ಕೂರಿಸಿದ್ದಾರೆ. ಈ ಸ್ಥಾನದಲ್ಲಿ ಕುಳಿತು ರಾಜ್ಯದ ಜನರಿಗೆ ಸಹಾಯ ಆಗುವ ಕೆಲಸ ಮಾಡ್ತೇನೆ. ನನ್ನ ಬಗ್ಗೆ ಬಹಳ ಶಾಸಕರು ಹತ್ತಿರದಿಂದ ತಿಳಿದುಕೊಂಡು ಮಾತನಾಡಿದ್ದಕ್ಕೆ ಮಂಕಾಳ ವೈದ್ಯ ಧನ್ಯವಾದಗಳನ್ನು ತಿಳಿಸಿದ್ದಾರೆ.
ಪ್ರಜಾಪ್ರಭುತ್ವದ ಮೌಲ್ಯ ಕಾಪಾಡುವುದು ನನ್ನ ಕರ್ತವ್ಯ. ನಿಮ್ಮೆಲ್ಲರ ಸಹಕಾರದಿಂದ ಈ ಜವಾಬ್ದಾರಿ ನಿರ್ವಹಿಸುತ್ತೇನೆ ಅಂತ ಭಾವುಕರಾಗಿ ಸದನದಲ್ಲಿ ಮಂಕಾಳ ವೈದ್ಯ ಹೇಳಿದರು.
