ಇ ಸಮಾಚಾರ ಡಿಜಿಟಲ್‌ ನ್ಯೂಸ್‌ (esamachara digital news) ಉಡುಪಿ(Udupi) :  ಜಿಲ್ಲೆಯ ಮಲ್ಪೆ ಬಂದರಿನ(Malpe Bunder) ಪಡುಕೆರೆ ಪ್ರದೇಶದಲ್ಲಿ ಮೀನು ಕಾರ್ಮಿಕನೋರ್ವನನ್ನ ಕೊಲೆ ಮಾಡಿ ಪರಾರಿಯಾಗುತ್ತಿದ್ದ ಆರೋಪಿಯನ್ನು ಮಲ್ಪೆ ಪೊಲೀಸರು(Malpe Police) ಕ್ಷಿಪ್ರ ಕಾರ್ಯಾಚರಣೆ ನಡೆಸಿ ಬಂಧಿಸಿದ್ದಾರೆ.

ರಾಯಚೂರು(Rayachuru) ಮೂಲದ ಗೋವಿಂದ ರಾಜು ಪೊಲೀಸರ ವಶಕ್ಕೆ ಬಿದ್ದ  ಆರೋಪಿ. ಉಡುಪಿ ರೈಲು ನಿಲ್ದಾಣದಲ್ಲಿ (Udupi Railway Station)ವಶಕ್ಕೆ ಪಡೆಯಲಾಗಿದೆ. ಚಿಕ್ಕಮಗಳೂರು(Chikkamagaluru) ನಿವಾಸಿ ಅಭಿಷೇಕ್(25) ಕೊಲೆಯಾದ ದುರ್ದೈವಿ.

ಪಡುಕೆರೆ(Padukere) ಧಕ್ಕೆ ಪ್ರದೇಶದಲ್ಲಿ ಆಗಸ್ಟ್ 24ರ ರಾತ್ರಿ ಬೋಟ್‌ನಲ್ಲಿ ಗೋವಿಂದ ಹಾಗೂ ಅಭಿಷೇಕ್ ನಡುವೆ ಗಲಾಟೆ ನಡೆದಿತ್ತು ಎನ್ನಲಾಗಿದೆ. ಬಳಿಕ ಆಗಸ್ಟ್ 25ರ ಬೆಳಗಿನ ಜಾವ ಅಭಿಷೇಕ್‌ನನ್ನು ಕೊಲೆಗೈದು ಗೋವಿಂದ ಸ್ಥಳದಿಂದ ಪರಾರಿಯಾಗಿದ್ದ. ಶ್ರೀ ಮಹಾಕಾಳಿ ಬೋಟ್ ನಲ್ಲಿ ಈ ಘಟನೆ ನಡೆದಿದೆ.

ಘಟನೆ ಕುರಿತು ಮಾಹಿತಿ ಲಭ್ಯವಾಗುತ್ತಿದ್ದಂತೆ ಮಲ್ಪೆ (Malpe) ಪೊಲೀಸ್ ಠಾಣೆಯ ಪೊಲೀಸರು ಸ್ಥಳಕ್ಕೆ ಆಗಮಿಸಿದ್ದರು. ಆರೋಪಿಯ ಪತ್ತೆಗೆ ತಂಡ ರಚಿಸಿ ಕ್ಷಿಪ್ರ ಕಾರ್ಯಾಚರಣೆ ಆರಂಭಿಸಿದ್ರು. ರೈಲು ಹತ್ತಿ ಪರಾರಿಯಾಗಲು ಯತ್ನಿಸಿದ ಆರೋಪಿಯನ್ನ ಬಂಧಿಸಿ ತನಿಖೆ ಕೈಗೊಂಡಿದ್ದಾರೆ.