ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news) ಕಾರವಾರ(Karwar ) : ನಗರದ ಉದ್ಯಮಿಯೋರ್ವನ ಮನೆ ಮೇಲೆ ಇಡಿ ಅಧಿಕಾರಿಗಳು ದಾಳಿ(ED Raid) ನಡೆಸಿದ್ದಾರೆ.
ನಕಲಿ ದಾಖಲೆ ಸೃಷ್ಟಿಸಿ ಭೂಮಿ (Land) ಖರೀದಿ, ಹಣ ವರ್ಗಾವಣೆ (Money Transfer ) ಮುಂತಾದ ಆರೋಪಗಳನ್ನು ಎದುರಿಸುತ್ತಿರುವ ಗೋವಾದ (Goa) ಉದ್ಯಮಿ ಸುಲೇಮಾನ್ ಖಾನ್ ಯಾನೆ ಸಿದ್ದಿಕ್ ಖಾನ್ ಎಂಬಾತನ ಕಾರವಾರದ ಕೊಡಿಭಾಗದಲ್ಲಿರುವ (Karwar Kodibhag) ಮನೆಯ ಮೇಲೆ ಇಡಿ ದಾಳಿ ನಡೆಸಿದೆ.
ಕೋಡಿಬಾಗದ ಅಬಕಾರಿ ಕಚೇರಿಯ(Exice Office) ಎದುರಿನ ಖಾಸಗಿ ಅಪಾರ್ಟ್ಮೆಂಟ್ನಲ್ಲಿರುವ ನಾಲ್ಕು ಫ್ಲಾಟ್ಗಳ ಮೇಲೆ ಗೋವಾದ ಇಡಿ ಅಧಿಕಾರಿಗಳು ಮಂಗಳವಾರ ಬೆಳಗ್ಗೆ ದಾಳಿ ನಡೆಸಿದ್ದು, ದಾಖಲೆಗಳ ಪರಿಶೀಲಿಸಿದ್ದಾರೆ.
ಸಿದ್ದಿಕ್ ಖಾನ್ ಕಾರವಾರದಲ್ಲಿ(Karwar) ಐದು ವರ್ಷ ನೆಲೆಸಿದ್ದ ನಂತರ ಗೋವಾಕ್ಕೆ ಸ್ಥಳಾಂತರಗೊಂಡಿದ್ದ. ಒಂದು ಕುಟುಂಬ ಇಲ್ಲಿ ನೆಲೆಸಿತ್ತು ಎನ್ನಲಾಗಿದೆ. ಗೋವಾದಲ್ಲಿ ಮೃತರ ಹೆಸರಿನ ಜಮೀನುಗಳನ್ನು ನಕಲಿ ದಾಖಲೆ ಸೃಷ್ಟಿಸಿ ಕಬಳಿಸಿದ ಗಂಭೀರ ಆರೋಪವಿತ್ತು. ಹೀಗಾಗಿ 2024 ರಲ್ಲಿ ಗೋವಾ ಎಸ್ಐಟಿ ಆತನನ್ನು ಬಂಧಿಸಿತ್ತು. ಆತ ಜೈಲಿನಿಂದ ಪರಾರಿಯಾಗಿದ್ದ ನಂತರ ಕೇರಳದಲ್ಲಿ(Keral) ಗೋವಾ ಎಸ್ಐಟಿ(Goa SIT) ಅಧಿಕಾರಿಗಳು ಆತನನ್ನು ಮತ್ತೆ ಬಂಧಿಸಿದ್ದರು. ಆಗ ಗೋವಾ ಎಸ್ಐಟಿ ಅಧಿಕಾರಿಗಳು ಕಾರವಾರಕ್ಕೆ ಆಗಮಿಸಿ ಸಿದ್ದಿಕ್ ಖಾನ್ಗೆ ಸೇರಿದ ಫ್ಲಾಟ್ಗಳನ್ನು ಜಪ್ತಿ ಮಾಡಿದ್ದರು.
ಅದೇ ಪ್ರಕರಣವನ್ನು ಈ ವರ್ಷ ಜುಲೈನಲ್ಲಿ ಕೈಗೆತ್ತಿಕೊಂಡ ಇಡಿ ಸಿದ್ದಿಕ್ ಖಾನ್ನನ್ನು ಮತ್ತೆ ಬಂಧಿಸಿತ್ತು. ಆತ ಗೋವಾದಲ್ಲಿ ಅಕ್ರಮ ಹಣ ವರ್ಗಾವಣೆ ದಂಧೆ ನಡೆಸಿ ಸುಮಾರು 300 ಕೋಟಿ ರೂ. ಮೌಲ್ಯದ 25 ಹೆಕ್ಟೇರ್ ಭೂಮಿಯನ್ನು ಖರೀದಿಸಿದ್ದ ಎಂದು ಇಡಿ ತನ್ನ ಎಫ್ಐಆರ್ ದಾಖಲಿಸಿಕೊಂಡು ತನಿಖೆ ಪ್ರಾರಂಭಿಸಿತ್ತು. ಮುಂದುವರಿದ ಭಾಗವಾಗಿ ಮೇಲೆ ಇಡಿ ಅಧಿಕಾರಿಗಳು ಶೋಧ ಮುಂದುವರಿಸಿದ್ದಾರೆ.
