ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news) ಪಣಜಿ(Panaji) : ಗಣೇಶೋತ್ಸವ(Ganeshotsava) ಸಂದರ್ಭದಲ್ಲಿ ಗೋವಾದಲ್ಲಿ(Goa) ಲಾಟರಿ ಡ್ರಾ ಬಾರೀ ಗಮನ ಸೆಳೆಯುತ್ತದೆ. ಈ ಬಾರೀ ಸಹ ಯಾರು ಊಹಿಸಲಾಗದ ಬಹುಮಾನವನ್ನ ಇಡಲಾಗಿದೆ. ಹೀಗಾಗಿ ಲಾಟರಿ ಟಿಕೇಟ್ ಖರೀದಿಸಲು ಜನಜಂಗುಳಿ ನೆರೆದಿತ್ತು.
ಗೋವಾದ ಸಾಂಗೆಯ ಸಂಗಮಪುರ(Goa sange sangamaoura) ಗಣೇಶೋತ್ಸವ ಮಂಡಲದ ಗಣೇಶ ಚತುರ್ಥಿಯ(Ganesh Chaturthi) ಲಾಟರಿ ಟಿಕೇಟ್ ಖರೀದಿಗೆ ಗೋವಾ, ಮಹಾರಾಷ್ಟ್ರ(Maharashtra) ಮತ್ತು ಕರ್ನಾಟಕದ(Karnataka) ಭಕ್ತರು ಮುಗಿಬಿದ್ದರು. ಗಣೇಶೋತ್ಸವ ಲಾಟರಿ ಕೂಪನ್ ವಿತರಿಸಲು ಸಂಘಟಕರು ಭಾನುವಾರ ಬೆಳಿಗ್ಗೆ 10 ಗಂಟೆಗೆ ವೇಳೆ ನಿಗದಿಪಡಿಸಿದ್ದರು. ಮೊದಲ ದಿನ ರಾತ್ರಿಯಿಂದ ಭಕ್ತರು ಸರತಿ ಸಾಲಿನಲ್ಲಿ ನಿಲ್ಲಲು ಪ್ರಾರಂಭಿಸಿದ್ದರಿಂದ, ಬೆಳಿಗ್ಗೆ 8 ಗಂಟೆಯಿಂದ ವಿತರಣೆಯನ್ನು ಪ್ರಾರಂಭಿಸಲಾಯಿತು. ಸಂಜೆಯ ವೇಳೆಗೆ ಕೂಪನ್ಗಳು ಸಂಪೂರ್ಣವಾಗಿ ಮಾರಾಟವಾದವು, ನಂತರ ಮಾರಾಟ ಕೌಂಟರ್ ಮುಚ್ಚಲಾಯಿತು.
ಆರಂಭದಲ್ಲಿ, ಪ್ರತಿಯೊಬ್ಬ ಭಕ್ತನಿಗೆ ಎರಡು ಕೂಪನ್ ನೀಡಲಾಗುತ್ತಿತ್ತು, ಮಧ್ಯಾಹ್ನದ ನಂತರ ಖರೀದಿಸಲು ಜನ ಹೆಚ್ಚಾಗುತ್ತಿದಂತೆ, ಮಂಡಲವು ಒಬ್ಬ ವ್ಯಕ್ತಿಗೆ ಒಂದು ಲಾಟರಿ ಟಿಕೇಟ್ ಮಾತ್ರ ನೀಡಲು ನಿರ್ಧರಿಸಿತು. ಆದರೆ ಟಕೇಟ್ ಖರೀದಿಸಲು ಜನಸಂಖ್ಯೆ ಹೆಚ್ಚಾಗುತ್ತಲೆ ಇತ್ತು.
ಸಾಂಗೆ ಪೊಲೀಸರು ವ್ಯಾಪಕ ಭದ್ರತೆಯನ್ನ ಕಲ್ಪಿಸಿದ್ದರು.
ಆದರೆ ಈ ವರ್ಷ ಅದೃಷ್ಟಶಾಲಿ ಕೂಪನ್ ಹೊಂದಿರುವವರಿಗೆ ಮಂಡಲವು ಆಕರ್ಷಕ ಬಹುಮಾನಗಳನ್ನು ಘೋಷಿಸಿದೆ, ಮೂರು ಪ್ಲ್ಯಾಟ್ಗಳು(Plats) ಮತ್ತು 18 ಕಾರುಗಳ ಬಹುಮಾನಗಳಿವೆ(Car Prizes). ಹೀಗಾಗಿ ಭಕ್ತರಿಂದ ಅದ್ಭುತ ಪ್ರತಿಕ್ರಿಯೆ ವ್ಯಕ್ತವಾಗಿದೆ.
