ಇ ಸಮಾಚಾರ ಡಿಜಿಟಲ್‌ ನ್ಯೂಸ್‌ (esamachara digital news) ಅಂಕೋಲಾ(Ankola) : ಅರಬ್ಬೀ ಸಮುದ್ರದಲ್ಲಿ(Ocean Sea) ಮೀನುಗಾರಿಕಾ ಬೋಟೊಂದು ಮುಳುಗಿದ ಘಟನೆ ನಡೆದಿದೆ.

ಬೋಟ್ ನಲ್ಲಿದ್ದ 24 ಮಂದಿ ಮೀನುಗಾರರು(Fishermans) ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಕಾರವಾರ ಸಮೀಪದ ಅಂಜದೀವ್ ದ್ವೀಪದ(Karwar near Anjudeev Island) ಸಮೀಪವೇ ಈ ಘಟನೆ ಸಂಭವಿಸಿದೆ.

ಅಂಕೋಲಾ ತಾಲೂಕಿನ ಬೆಳಂಬಾರ ಮೂಲದ(Ankola Taluku Belambar Native) ನೀಲಕಂಠ ಖಾರ್ವಿ ಅವರಿಗೆ ಸೇರಿದ ‘ಶ್ರೀ ಮಾತಾ’ ಹೆಸರಿನ ಮೀನುಗಾರಿಕಾ ಬೋಟ್‌ ಎಂದು ತಿಳಿದುಬಂದಿದೆ. ಬೋಟ್‌ ಅಪಾಯಕ್ಕೆ ಸಿಲುಕುತ್ತಿದ್ದಂತೆ, ಸಮೀಪದಲ್ಲಿದ್ದ ಐದಾರು ಮೀನುಗಾರಿಕಾ ಬೋಟ್‌ಗಳ ಕಲಾಶಿಗಳು ತಕ್ಷಣ ಸ್ಥಳಕ್ಕೆ ಧಾವಿಸಿ, ಬೋಟ್‌ನಲ್ಲಿದ್ದ 24 ಮಂದಿ ಮೀನುಗಾರರನ್ನು ರಕ್ಷಿಸಿದ್ದಾರೆ(Fishermans Rescue).

ಮುಳುಗಡೆಯಾಗುತ್ತಿದ್ದ ಬೋಟ್‌ ಮತ್ತು ಪರಿಕರಗಳನ್ನ ಉಳಿಸಿಕೊಳ್ಳುವ ಪ್ರಯತ್ನ ನಡೆಸಲಾಗಿತ್ತು. ಘಟನೆಯಿಂದ ಸುಮಾರು ₹80 ಲಕ್ಷ ರೂಪಾಯಿಗೂ ಅಧಿಕ ನಷ್ಟವಾಗಿದೆಯೆಂದು ಅಂದಾಜಿಸಲಾಗಿದೆ. ಸ್ಥಳೀಯರ ಮಾಹಿತಿ ಪ್ರಕಾರ, ನೀಲಕಂಠ ಖಾರ್ವಿ ಅವರಿಗೆ ಸೇರಿದ ಬೋಟ್‌ಗಳು ಪದೇಪದೇ ಅವಘಡಕ್ಕೆ ಸಿಲುಕುತ್ತಿರುವುದು ಕುಟುಂಬಕ್ಕೆ ದೊಡ್ಡ ಆರ್ಥಿಕ ಹೊಡೆತ ನೀಡಿದೆ. ಮೊದಲ ಬೋಟ್‌ ಕೂಡ ಇದೇ ರೀತಿಯ ಅವಘಡದಲ್ಲಿ ಸಿಲುಕಿ ಹಾನಿಗೀಡಾಗಿತ್ತು. ಬಳಿಕ ಖರೀದಿಸಿದ್ದ ಎರಡನೇ ಬೋಟ್‌ ಕೂಡ ಹಾನಿಗೊಳಗಾಗಿತ್ತು. ಇದೀಗ ಮೂರನೇ ಬೋಟ್‌ ಕೂಡ ಅವಘಡಕ್ಕೀಡಾಗಿರುವುದು ‘ಗಾಯದ ಮೇಲೆ ಬರೆ ಎಳೆದಂತಾಗಿದೆ’ ಎಂದು ಮೀನುಗಾರರು ಬೇಸರ ವ್ಯಕ್ತಪಡಿಸಿದ್ದಾರೆ.

ಬೋಟ್‌ ಮುಳುಗಡೆಯಿಂದ(Boat Drowned) ಭಾರಿ ಆರ್ಥಿಕ ನಷ್ಟ ಸಂಭವಿಸಿರುವ ಹಿನ್ನೆಲೆಯಲ್ಲಿ, ಸರ್ಕಾರ ಮೀನುಗಾರ ಕುಟುಂಬಕ್ಕೆ ಸೂಕ್ತ ಪರಿಹಾರ ಒದಗಿಸಬೇಕು ಎಂದು ಸ್ಥಳೀಯ ಮೀನುಗಾರರು ಆಗ್ರಹಿಸಿದ್ದಾರೆ.