ಇ ಸಮಾಚಾರ ಡಿಜಿಟಲ್‌ ನ್ಯೂಸ್‌ (esamachara digital news) ಶಿರಸಿ(Sirsi) : ತಾಲೂಕಿನ ಹುಲೇಕಲ್‌ ವ್ಯಾಪ್ತಿಯಲ್ಲಿ ಜಾನುವಾರುಗಳನ್ನು ಕಳ್ಳತನ ಮಾಡಿದ್ದ ಅಂತರಜಿಲ್ಲಾ ದನಗಳ್ಳರ ಜಾಲವನ್ನು ಭೇದಿಸುವಲ್ಲಿ ಶಿರಸಿ(Sirsi) ಗ್ರಾಮೀಣ ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ.

ಕಳೆದ ಆಗಸ್ಟ್ 12 ರಂದು ಶಿರಸಿ ತಾಲೂಕಿನ ಹುಲೇಕಲ್‌ನಲ್ಲಿ ಆಕಳು ಹಾಗೂ ಹೋರಿ ಕರುಗಳನ್ನು ಕಳ್ಳತನ ಮಾಡಿ ಕಾರಿನಲ್ಲಿ ಸಾಗಿಸಿದ ಬಗ್ಗೆ ಶಿರಸಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಈ ದೂರಿನ ಆಧಾರದ ಮೇಲೆ ಕ್ಷಿಪ್ರ ಕಾರ್ಯಾಚರಣೆ ನಡೆಸಿದ ಪೊಲೀಸರು, ಶಿವಮೊಗ್ಗ ಜಿಲ್ಲೆಯ ಮೊಹಮ್ಮದ್ ಅಯಾಜ್, ಮೊಹಮ್ಮದ್‌ ಲತೀಫ್ (23), ಮೊಹಮ್ಮದ್ ಇಸ್ಮಾಯಿಲ್ ಅಸ್ಲಂ (36) ಹಾಗೂ ಅಬ್ದುಲ್ ಅಜೀಜ್ ಅಬ್ದುಲ್ ಗಫಾರ್ (35) ಎಂಬ ಆರೋಪಿಗಳನ್ನು ಬಂಧಿಸಿದ್ದಾರೆ.

ಈ ಜಾಲದಲ್ಲಿ ಭಾಗಿಯಾಗಿರುವ ಇತರ ಆರೋಪಿಗಳ ಪತ್ತೆಗಾಗಿ ಪೊಲೀಸರು ಶೋಧ ಕಾರ್ಯವನ್ನು
ಮುಂದುವರಿಸಿದ್ದಾರೆ. ಬಂಧಿತ ಆರೋಪಿಗಳಿಂದ ಕಳ್ಳತನಕ್ಕೆ ಬಳಸಿದ್ದ ಸುಮಾರು 3 ಲಕ್ಷ ರೂ. ಮೌಲ್ಯದ ಮಹೀಂದ್ರ 2 (Mahindra XUV) ವಾಹನವನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಶಿರಸಿ ಡಿವೈಎಸ್‌ಪಿ(Sirsi DYSP) ಗೀತಾ ಪಾಟೀಲ್‌ ಅವರ ಮಾರ್ಗದರ್ಶನ ಹಾಗೂ ಸಿಪಿಐ ರಮೇಶ್ ಹೂಗಾ‌ರ್ ಅವರ ನೇತೃತ್ವದಲ್ಲಿ ನಡೆದ ಈ ಯಶಸ್ವಿ ಕಾರ್ಯಾಚರಣೆಯಲ್ಲಿ ಪಿಎಸ್‌ಐಗಳಾದ ಸಂತೋಷ್‌ಕುಮಾ‌ರ್, ಅಶೋಕ್‌ ರಾಠೋಡ್‌, ಎಎಸ್‌ಐ ಪ್ರದೀಪ್‌ ರೇವಣಕ‌ರ್ ಪಾಲ್ಗೊಂಡಿದ್ದರು. ಹಾಗೂ ಸಿಬ್ಬಂದಿಗಳಾದ ಮಹಾಂತೇಶ್ ಬಾರಕೇ‌ರ್, ಬಸವರಾಜ್‌ ಹಗರಿ, ಕೋಟೇಶ್ ನಾಗರವಳ್ಳಿ, ಸಂದೀಪ್ ನಿಂಬಾಯಿ, ಅರುಣ್‌ಕುಮಾ‌ರ್ ವಿ., ವೆಂಕಟ್ರಮಣ ನಾಯ್ಕ, ದಾವಲ್ ಸಾಬ್ ಕುಂದಿ, ಮಾರುತಿ ಗೌಡ, ಗಣಪತಿ ನಾಯ್ಕ ಮತ್ತು ಭರತ್‌ ಎನ್‌.ಜೆ. ಅವರು ಈ ಕಾರ್ಯಾಚರಣೆಯಲ್ಲಿ ಶ್ರಮಿಸಿದ್ದಾರೆ.