ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news) ಪಣಜಿ(Panaji): ಗೋವಾದ ಪೊರ್ವೊರಿಮ್ನಲ್ಲಿ (Goa Porvorim) ಮೆಜೆಸ್ಟಿಕ್ ಪ್ರೈಡ್ ಗ್ರೂಪ್ನ()Majestic pride Groups) ನಿರ್ದೇಶಕ ಉತ್ತರಕನ್ನಡ ಜಿಲ್ಲೆಯ ಯಲ್ಲಾಪುರ ಮೂಲದ(Yallapur Native) ಶ್ರೀನಿವಾಸ್ ನಾಯಕ್ ಅವರ ಮೇಲೆ ನಡೆದ ಗುಂಡಿನ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಇಬ್ಬರು ಶಂಕಿತರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಶುಕ್ರವಾರ ರಾತ್ರಿ ಪೊರ್ವೊರಿಮ್ ಪೊಲೀಸ್ ಠಾಣೆಯಿಂದ(Porvarium Police Station) ಕೆಲವೇ ಮೀಟರ್ಗಳ ದೂರದಲ್ಲಿ ಈ ದಾಳಿ ನಡೆದಿತ್ತು. ಘಟನೆಯ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಕ್ಯಾಪ್ ಧರಿಸಿದ್ದ ಇಬ್ಬರು ವ್ಯಕ್ತಿಗಳು ಹೋಟೆಲ್ ಹೊರಗೆ ಕಾದು ನಿಂತು, ಶ್ರೀನಿವಾಸ್ ನಾಯಕ್ ಅವರನ್ನ ಗುರಿಯಾಗಿಸಿ ಅವರು ಹೊರಬಂದು ಕಾರಿನತ್ತ ತೆರಳುತ್ತಿದ್ದ ವೇಳೆ ಈ ದಾಳಿ ನಡೆಸಿದ್ದರು. ಗುಂಡಿನ ದಾಳಿ ನಡೆಯುತ್ತಿದ್ದಂತೆ ಶ್ರೀನಿವಾಸ್ ನಾಯಕ್ ತಕ್ಷಣ ಹೋಟೆಲ್ ಒಳಗೆ ಓಡಿದ್ದರಿಂದ ಅವರಿಗೆ ಯಾವುದೇ ತೊಂದರೆಯಾಗಲಿಲ್ಲ. ನಾಯಕ್ ಅವರ ಭದ್ರತಾ ಸಿಬ್ಬಂದಿಗಳು ಪ್ರತಿಯಾಗಿ ಗುಂಡು ಹಾರಿಸಿದ ಹಿನ್ನೆಲೆಯಲ್ಲಿ ದುಷ್ಕರ್ಮಿಗಳು ಓಡಿ ಹೋಗಿದ್ದರು.
ಘಟನೆಯಲ್ಲಿ ದಾಳಿಕೋರರು 9 ಎಂಎಂ ಕ್ಯಾಲಿಬರ್ನ ಪಿಸ್ತೂಲ್ ಬಳಸಿ ಮೂರು ಸುತ್ತು ಗುಂಡು ಹಾರಿಸಿದ್ದಾರೆ. ಘಟನಾ ಸ್ಥಳದಿಂದ ಎರಡು ಜೀವಂತ ಗುಂಡುಗಳನ್ನು ವಶಪಡಿಸಿಕೊಳ್ಳಲಾಗಿದೆ.
ಪ್ರಕರಣದಲ್ಲಿ ಸದ್ಯಕ್ಕೆ ಸುಲಿಗೆ (Extortion) ಉದ್ದೇಶ ಕಂಡುಬಂದಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. ಆದರೆ ದಾಳಿಯ ಹಿಂದಿನ ಎಲ್ಲ ಸಾಧ್ಯ ಕಾರಣಗಳ ಬಗ್ಗೆಯೂ ತನಿಖೆ ನಡೆಸಲಾಗುತ್ತಿದೆ. ಗೋವಾ ಡಿಜಿಪಿ ಅಲೋಕ್ ಕುಮಾರ್ ಮಾತನಾಡಿ, ಪೊಲೀಸರಿಗೆ ಮಹತ್ವದ ಸುಳಿವು ದೊರಕಿದ್ದು, ಆರೋಪಿಗಳ ಬಂಧನಕ್ಕಾಗಿ ಹಲವು ತಂಡಗಳನ್ನು ರಚಿಸಲಾಗಿದೆ ಎಂದು ತಿಳಿಸಿದ್ದಾರೆ.
ಶ್ರೀನಿವಾಸ್ ನಾಯಕ್ ತಮ್ಮದೂರಿನಲ್ಲಿ ದಾಳಿ ಏಕಾಏಕಿ ಹಾಗೂ ಉದ್ದೇಶಪೂರ್ವಕವಾಗಿ ತಮ್ಮನ್ನೇ ಗುರಿಯಾಗಿಸಿಕೊಂಡು ನಡೆಸಲಾಗಿದೆ. ಗುಂಡಿನ ದಾಳಿಯಿಂದ ತಾವು ತಪ್ಪಿಸಿಕೊಂಡಿದ್ದೇ ಅದೃಷ್ಟ ಎಂದು ಅವರು ತಿಳಿಸಿದ್ದಾರೆ.
ಪ್ರಕರಣದ ತನಿಖೆಗೆ ಹಲವು ತಂಡಗಳನ್ನು ರಚಿಸಲಾಗಿದೆ. ಈ ಶೂಟೌಟ್ ಸಂಬಂಧ ಪೊರ್ವೊರಿಮ್ ಪೊಲೀಸರು ಕೊಲೆ ಯತ್ನ ಪ್ರಕರಣ ದಾಖಲಿಸಿಕೊಂಡಿದ್ದು, ಇಬ್ಬರು ಶಂಕಿತರನ್ನ ವಶಕ್ಕೆ ಪಡೆದು ತೀವ್ರ ವಿಚಾರಣೆ ನಡೆಸಿದ್ದಾರೆ.
