ಹೊನ್ನಾವರ(HONNAVAR) : ಬಾರೀ ಅಲೆಗೆ ಬಂದರಿಗೆ ವಾಪಾಸ್ ಬರುತ್ತಿದ್ದ ಯಾಂತ್ರಿಕ ದೋಣಿಯೊಂದು ಅಳಿವೆಗೆ ಸಿಲುಕಿದ ಘಟನೆ ನಡೆದಿದೆ.
ಗುರುವಾರ ರಾತ್ರಿ ಹೊನ್ನಾವರ ತಾಲೂಕಿನ ಕಾಸರಕೋಡು(KASARKODU) ಬಂದರು ಸಮೀಪ ಈ ಅವಘಡ ಸಂಭವಿಸಿದೆ. ಬೋಟಿನಲ್ಲಿ ಒಟ್ಟು 30 ಮೀನುಗಾರರಿದ್ದರು. ಅನ್ಸಾರ್ ಸಾಬ್ ಎಂಬುವವರಿಗೆ ಸೇರಿದ ಬೋಟ್ ಎಂದು ಗೊತ್ತಾಗಿದೆ. ರಾತ್ರಿ ಯಾಂತ್ರಿಕ ದೋಣಿ (FISHING BOAT) ಅಳಿವೆಯಲ್ಲಿ ಸಿಲುಕಿದಾಗ ಮೀನುಗಾರರು ರಕ್ಷಣೆಗಾಗಿ ಕೂಗಿಕೊಂಡರು.
ಸ್ಥಳಕ್ಕೆ ಸ್ಥಳೀಯ ಮೀನುಗಾರರು ಮತ್ತು ಕರಾವಳಿ ಕಾವಲು ಪಡೆ (COASTAL SECURITY POLICE) ಸಿಬ್ಬಂದಿಗಳು ಧಾವಿಸಿದರಾದರೂ ಅಲೆಯ(WAVES) ಕಾರಣದಿಂದ ಸ್ಥಳಕ್ಕೆ ಹೋಗಲು ಸಾಧ್ಯವಾಗಿಲ್ಲ. ಹೀಗಾಗಿ ಬೆಳಗಿನವರೆಗೂ ನಿಗಾ ವಹಿಸಬೇಕಾಯಿತು.
ಕಾಸರಕೋಡು ಬಂದರಿನಲ್ಲಿ ಪದೇ ಪದೇ ಅಳಿವೆಯಲ್ಲಿ ಬೋಟ್ ಅವಘಡ ಸಂಭವಿಸುತ್ತಿವೆ. ಮೀನುಗಾರರು ಅಳಿವೆ ಸಮಸ್ಯೆ ಬಗೆಹರಿಸುವಂತೆ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ. ಹೀಗಾಗಿ ಘಟನೆ ಪುನರಾ ವರ್ತನೆಯಾಗುತ್ತಿದೆ ಎಂದು ಮೀನುಗಾರರು ಆರೋಪಿಸಿದ್ದಾರೆ.
ಇದನ್ನು ಓದಿ : ಜೈಲಿನಲ್ಲಿ ಖೈದಿಗಳ ರಂಪಾಟ
ಶ್ರೀ ಬ್ರಹ್ಮಾನಂದ ಸ್ವಾಮಿಗಳ ಸೀಮೋಲ್ಲಂಘನ