ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news) ಕಾರವಾರ(Karwar) : ಉತ್ತರಕನ್ನಡ ಜಿಲ್ಲೆಯ(Uttarkannada District) ವಿವಿಧ ತಾಲೂಕುಗಳಲ್ಲಿ ಸೆಪ್ಟೆಂಬರ್ 2ರಂದು ವಿದ್ಯುತ್ ವ್ಯತ್ಯಯ(Power outages) ಉಂಟಾಗಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಕುಮಟಾದಲ್ಲಿ(Kumta) ವಿದ್ಯುತ್ ವ್ಯತ್ಯಯ: ತಾಲೂಕಿನ ಹೆಸ್ಕಾಂ, ಉಪವಿಭಾಗ(Hescom Subdivision) ವ್ಯಾಪ್ತಿಯಲ್ಲಿ 33ಕೆ.ವಿ ಗೋಕರ್ಣ ಮಾರ್ಗದಲ್ಲಿ(Gokarn Route) ಜಂಗಲ್ ಕಟ್ಟಿಂಗ್ ಕಾರ್ಯ ಇರುವುದರಿಂದ ಸೆ.2 ರಂದು ಬೆಳಗ್ಗೆ 10 ಗಂಟೆಯಿಂದ ಸಂಜೆ 4 ಗಂಟೆಯವರೆಗೆ ಮಾದನಗೇರಿ, ಗೋಕರ್ಣ, ತದಡಿ, ಬಂಕಿಕೊಡ್ಲ,
ಬಿಜ್ಜೂರ, ಗಂಗಾವಳಿ, ಓಂ ಬಿಚ್ ಹಾಗೂ ಮಿರ್ಜಾನ್ ಕೋಡ್ಕಣಿ, ನಾಗೂರ ಖಂಡಗಾರ, ಬರ್ಗಿ, ಉಪ್ಪಿನ ಪಟ್ಟಣ, ದಿವಗಿ ಮಾರ್ಗದ ಎಲ್ಲಾ ಉಪವಿಭಾಗಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದ್ದು, ಗ್ರಾಹಕರು ಸಹಕರಿಸುವಂತೆ ಹೆಸ್ಕಾಂ, ಕುಮಟಾ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರು(ವಿ)
ರವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಹೊನ್ನಾವರ(Honnavar) ವಿದ್ಯುತ್ ವ್ಯತ್ಯಯ: ಹೊನ್ನಾವರ ತಾಲೂಕಿನ ಪಟ್ಟಣ ಶಾಖೆ ವ್ಯಾಪ್ತಿಯ ಎಲ್.ಐ.ಸಿ ಫೀಡರ್ 11 ಕೆ.ವಿ ಮಾರ್ಗದ ನಿರ್ವಹಣೆಯ ನಿಮ್ಮಿತ್ತ ಹಾಗೂ ಗೇರುಸೊಪ್ಪ(Gerusoppa) ಶಾಖೆಯ ಮಾಗೋಡ ಫೀಡರ್ 11 ಕೆ.ವಿ ಮಾರ್ಗದ ನಿರ್ವಹಣೆಯ ನಿಮ್ಮಿತ್ತ ಸೆ.2 ರಂದು ಬೆಳಗ್ಗೆ 10ಗಂಟೆಯಿಂದ ಮಧ್ಯಾಹ್ನ 3 ಗಂಟೆಯವರೆಗೆ ವಿದ್ಯುತ್ ವ್ಯತ್ಯಯವಾಗಲ್ಲಿದ್ದು, ಗ್ರಾಹಕರು ಸಹಕರಿಸುವಂತೆ ಹೆಸ್ಕಾಂ, ಹೊನ್ನಾವರ ಸಹಾಯಕ
ಕಾರ್ಯನಿರ್ವಾಹಕ ಇಂಜಿನಿಯರು(ವಿ)ರವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ದಾಂಡೇಲಿಯಲ್ಲಿ(Dandeli) ಸೆ.2 ಮತ್ತು 3ರಂದು ವಿದ್ಯುತ್ ವ್ಯತ್ಯಯ : 11 ಕೆವಿ ಮಾರ್ಗದ ತುರ್ತು ನಿರ್ವಹಣಾ ಕಾರ್ಯದ ನಿಮಿತ್ತ ಸೆಪ್ಟೆಂಬರ್ 2ರಂದು ದಾಂಡೇಲಿ ತಾಲೂಕಿನ ನವಗ್ರಾಮ,
ಗಾಂಧಿನಗರ, ಪಟೇಲನಗರ, ಹಳೇ ದಾಂಡೇಲಿ, ಬೈಲಪಾರ್. ಕೋಗಿಲಬನ, ಜನತಾ ಕಾಲೋನಿ, ಕುಳಗಿ ರೋಡ, ಜೆ.ಎನ್ ರೋಡ (ಪಟೇಲ್ ಸರ್ಕಲ್‌ನಿಂದ ಬಸ್ ನಿಲ್ದಾಣ). ಹಾಗೂ ಸೆ.3 ರಂದು ಅಂಬೇವಾಡಿ, ಕೈಗಾರಿಕಾ ಪ್ರದೇಶ, ಗಣೇಶ ನಗರ, ಸಾಯಿನಗರ, ಮಾರುತಿ ನಗರ, ಗಾಂಧಿನಗರ, 14ನೇ ಬ್ಲಾಕ್, ಗಾಂವಟನ್, ಟೌನ್‌ಶಿಪ್, ವನಶ್ರೀ ನಗರ, ವಿಜಯನಗರ, ಇವಿಎಸ್, ಕೆಎಚ್‌ಬಿ ಕಾಲೋನಿ ಮತ್ತು ಬಸವೇಶ್ವರ ನಗರ ಸೇರಿದಂತೆ
ಸುತ್ತಲಿನ ಪ್ರದೇಶಗಳಲ್ಲಿ ಬೆಳಗ್ಗೆ 9 ರಿಂದ ಸಂಜೆ 6 ಗಂಟೆಯವರೆಗೆ ನಗರದ ವಿವಿಧೆಡೆ ವಿದ್ಯುತ್ ವ್ಯತ್ಯಯವಾಗಲಿದ್ದು, ಗ್ರಾಹಕರು ಸಹಕರಿಸುವಂತೆ ದಾಂಡೇಲಿ ಹೆಸ್ಕಾಂನ ಸಹಾಯಕ ಕಾರ್ಯನಿರ್ವಾಹಕ ಇಂಜಿನೀಯರ್ (ವಿ) ರವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕಾರವಾರದಲ್ಲೂ(Karwar) ವಿದ್ಯುತ್ ವ್ಯತ್ಯಯ: 220ಕೆವಿ ವಿದ್ಯುತ್ ಸ್ವೀಕರಣಾ ಕೇಂದ್ರ, ಕಾರವಾರದಲ್ಲಿ ತ್ರೈಮಾಸಿಕ ನಿರ್ವಹಣಾ ಕೆಲಸ ಇರುವುದರಿಂದ ಕಾರವಾರ ತಾಲೂಕಿನಾದ್ಯಂತ(Karwar) ವಿದ್ಯುತ್ ಸರಬರಾಜು ಆಗುವ ಪ್ರದೇಶಗಳಲ್ಲಿ ಸೆ.2 ರಂದು ಬೆಳಗ್ಗೆ 10 ಗಂಟೆಯಿಂದ ಸಂಜೆ 5
ಗಂಟೆಯವರೆಗೆ ವಿದ್ಯುತ್ ವ್ಯತ್ಯಯವಾಗಲಿದ್ದು, ಗ್ರಾಹಕರು ಸಹಕರಿಸುವಂತೆ ಕಾರವಾರ ಹೆಸ್ಕಾಂ ಸಹಾಯಕ ಕಾರ್ಯನಿರ್ವಾಹಕ ಇಂಜಿನೀಯರು (ವಿ) ರವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
