ಇ ಸಮಾಚಾರ ಡಿಜಿಟಲ್‌ ನ್ಯೂಸ್‌ (esamachara digital news) ಕಾರವಾರ(Karwar) : ಗೋವಾ ರಾಜ್ಯದ ಲಾಟರಿ(Goa State Lottery) ಟಿಕೆಟ್‌ಗಳನ್ನು ಹೆಚ್ಚಿನ ದರಕ್ಕೆ ಕಾರವಾರದಲ್ಲಿ ಮಾರಾಟ ಮಾಡುತ್ತಿದ್ದ ಆರೋಪದ ಮೇಲೆ ಗೋವಾ ಮೂಲದ ವ್ಯಕ್ತಿಯೋರ್ವನನ್ನ ಕಾರವಾರ ನಗರ ಠಾಣೆ(Karwar Town Station) ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಗೋವಾ ಮೂಲದ(Goa Native) ವಿನೋದ ಸುರೇಶ ವಾಂಗೆಲೆ (40) ಪೊಲೀಸರ ಕೈಗೆ ಸಿಕ್ಕ ವ್ಯಕ್ತಿಯಾಗಿದ್ದಾನೆ.ಗೋವಾ ರಾಜ್ಯದ ಪೊಂಡಾದ(Goa State Ponda) ಗಣೇಶೋತ್ಸವ ಸಮಿತಿಯೊಂದಕ್ಕೆ ಸಂಬಂಧಿಸಿದ ಲಾಟರಿ ಟಿಕೆಟ್‌ಗಳನ್ನು ಕಾರವಾರದಲ್ಲಿ ಮಾರಾಟ ಮಾಡಲಾಗುತ್ತಿದ್ದ ಎನ್ನಲಾಗಿದೆ. ಐನೂರು ರೂಪಾಯಿಯ ಟಿಕೆಟ್‌ಗಳನ್ನು ಹೆಚ್ಚಿನ ದರಕ್ಕೆ ಮಾರಾಟ ಮಾಡುತ್ತಿದ್ದ ಎನ್ನಲಾಗಿದೆ. ಬಾರೀ ದೊಡ್ಡ ಪ್ರಮಾಣದ ಬಹುಮಾನವಿದೆ ಎಂಬ ಕಾರಣಕ್ಕೆ ಸಾರ್ವಜನಿಕರು ತಾ ಮುಂದು, ನಾ ಮುಝಂದು ಎಂದು ಟಿಕೆಟ್ ಖರೀದಿಸಲು ಮುಗಿಬಿದ್ದಿದ್ದರು.

ಕಾರವಾರದ ಮೀನು ಮಾರುಕಟ್ಟೆ(Karwar Fish Market) ಬಳಿ ಕಾರ್ಯಾಚರಣೆ ನಡೆಸಿದ ಪೊಲೀಸರು ಲಾಟರಿ ಟಿಕೆಟ್ ಮಾರಾಟ ಮಾಡುತ್ತಿದ್ದ ವಿನೋದ ವಾಂಗಲೆನನ್ನ ಠಾಣೆಗೆ ಕರೆತಂದು ವಿಚಾರಣೆ ನಡೆಸಿದ್ದಾರೆ. ಗೋವಾ ಲಾಟರಿ ಟಿಕೆಟ್‌ಗಳನ್ನು ಕಾರವಾರದಲ್ಲಿ ಮಾರಾಟ ಮಾಡಿದ ಆರೋಪಕ್ಕೆ ಸಂಬಂಧಿಸಿದಂತೆ ಪ್ರಕರಣ ದಾಖಲಿಸಿಕೊಂಡು ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.