ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news) ಭಟ್ಕಳ(Bhatkal) : ಉತ್ತರಕನ್ನಡ ಜಿಲ್ಲೆಯ ಭಟ್ಕಳ ಉಪವಿಭಾಗದ(Bhatkal Subdivision) ನೂತನ ಎಎಸ್‌ಪಿಯಾಗಿ 2024ರ ಬ್ಯಾಚ್‌ನ ಕರ್ನಾಟಕ ಕೇಡರ್ ಐಪಿಎಸ್(IPS) ಅಧಿಕಾರಿ ರಾಣು ಗುಪ್ತ ಅವರನ್ನು ಸರ್ಕಾರ ನೇಮಿಸಿದೆ.
ಕಳೆದ ಕೆಲ ತಿಂಗಳಿಂದ ಭಟ್ಕಳ ಡಿವೈಎಸ್‌ಪಿಯಾಗಿ(Bhatkal DYSP) ಸೇವೆ ಸಲ್ಲಿಸುತ್ತಿದ್ದ ಗಿರೀಶ್ ಅವರನ್ನ ಬೆಂಗಳೂರು ಡಿಜಿ ಕಚೇರಿಗೆ ನೇಮಿಸಲಾಗಿದೆ ಎಂದು ತಿಳಿದುಬಂದಿದೆ.
ಬಿಹಾರ ಮೂಲದ(Bihar Native) ರಾಣು ಗುಪ್ತ ಅವರು 2024ರ ಬ್ಯಾಚ್‌ನ ಐಪಿಎಸ್ ಅಧಿಕಾರಿಯಾಗಿದ್ದು, ಕಳೆದ ಡಿಸೆಂಬರ್ 29ರಿಂದ ತುಮಕೂರು ಜಿಲ್ಲೆಯಲ್ಲಿ ಪ್ರೊಬೆಷನರಿ ತರಬೇತಿ (ಡಿಪಿಟಿ) ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದರು. ಈಗ ಅವರನ್ನು ಭಟ್ಕಳ ಉಪವಿಭಾಗದ ಎಎಸ್‌ಪಿಯಾಗಿ(ASP) ನಿಯೋಜಿಸಲಾಗಿದೆ.
ಈ ಹಿಂದೆ ಉತ್ತರಕನ್ನಡ(Uttarkannada) ಜಿಲ್ಲೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯಾಗಿ ರಮಣ ಗುಪ್ತ(Raman Gupta) ಅವರು ಸೇವೆ ಸಲ್ಲಿಸಿದ್ದರು. ಇದೀಗ ಭಟ್ಕಳ ಎಸ್ಪಿಯಾಗಿ ರಾಣು ಗುಪ್ತ(Bhatkal ASP Ranu Gupta) ನೇಮಕವಾಗಿದ್ದರಿಂದ ರಮಣ ಗುಪ್ತ ಅವನ್ನ ಮತ್ತೆ ನೆನಪಿಸುವಂತಾಗಿದೆ.
