ಇ ಸಮಾಚಾರ ಡಿಜಿಟಲ್ ನ್ಯೂಸ್(esamachara digital news) ಬೈಂದೂರು(Bynduru) : ಉತ್ತರಕನ್ನಡ(Uttarkannada) ಜಿಲ್ಲೆಯ ಯಲ್ಲಾಪುರ(Yallapur) ತಾಲೂಕಿನ ಮಂಚಿಕೇರಿಯಲ್ಲಿ ಮೀನು ಮಾರಾಟ ಮಹಿಳೆ ಮತ್ತು ತರಕಾರಿ ಮಾರಾಟ ಮಾಡುವ ಮಹಿಳೆ ಮೇಲೆ ಹಲ್ಲೆ ನಡೆಸಿದ ಬೈಂದೂರು ಪಟ್ಟಣ ಪಂಚಾಯತ ಮುಖ್ಯಾಧಿಕಾರಿ(CMC Chief Officer) ಅಜಯ ಗಣೇಶ ಭಂಡಾರ್ಕರ್ ಅವರನ್ನು ಹುದ್ದೆಯಿಂದ ಈ ಹಿಂದಿನ ಇಲಾಖೆಗೆ ವಾಪಸ್ ಕರೆಯಲಾಗಿದೆ.
ಅಂಕೋಲಾ(Ankola) ತಾಲೂಕಿನ ಬೇಲೇಕೇರಿ ಮೂಲದ(Belekeri Native) ಮಹಿಳೆಯೊಂದಿಗೆಅಸಭ್ಯವಾಗಿ ವರ್ತಿಸಿ ಹಲ್ಲೆ ನಡೆಸಿದ್ದ ಅಜಯ್ ಭಂಡಾರ್ಕರ್ ಮೀನುಗಳಿದ್ದ ಬುಟ್ಟಿಯನ್ನು ಚೆಲ್ಲಾಡಿದ್ದ ಆರೋಪ ವ್ಯಕ್ತವಾಗಿತ್ತು. ಇದೇ ವೇಳೆ ತರಕಾರಿ ಮಾರುವ ಮತ್ತೊಬ್ಬ ಮಹಿಳೆಯ ಮೇಲೂ ಹಲ್ಲೆ ನಡೆಸಿರುವುದು ಗೊತ್ತಾಗಿತ್ತು.
ಘಟನೆಗೆ ಸಂಬಂಧಿಸಿದಂತೆ ಯಲ್ಲಾಪುರ ಪೊಲೀಸ್ ಠಾಣೆಯಲ್ಲಿ(Yallapur Police Station) ದೂರು ದಾಖಲಾಗಿತ್ತು.
ಮುಖ್ಯಾಧಿಕಾರಿಯ ವರ್ತನೆಯ ವಿಡಿಯೋ ಸಾಕಷ್ಟು ವೈರಲ್ ಆಗಿ ಮೀನುಗಾರ ಮುಖಂಡರು ವ್ಯಾಪಕ ಆಕ್ರೋಶ ವ್ಯಕ್ತಪಡಿಸಿದ್ದರು. ಪ್ರಕರಣದ ತನಿಖೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಆಗ್ರಹ ವ್ಯಕ್ತವಾಗಿತ್ತು.
ಘಟನೆಗೆ ಸಂಬಂಧಿಸಿದಂತೆ ಉಡುಪಿ ಜಿಲ್ಲಾಧಿಕಾರಿ ಕಚೇರಿಯಿಂದ(UDUPI DC Office) ಆದೇಶ ಹೊರಡಿಸಲಾಗಿದ್ದು ಅಜಯ ಭಂಡಾರ್ಕರ್ ಅವರನ್ನು ಮುಖ್ಯಾಧಿಕಾರಿ ಹುದ್ದೆಯಿಂದ ಬಿಡುಗಡೆ ಮಾಡುವಂತೆ ತಿಳಿಸಲಾಗಿದೆ.
- ಈ ಹಿಂದೆ ಕಾರ್ಯನಿರ್ವಹಿಸುತ್ತಿದ್ದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಗೆ(Health and Family Welfare Department) ವರದಿ ಮಾಡಿಕೊಳ್ಳುವಂತೆ ಆದೇಶದಲ್ಲಿ ಸೂಚಿಸಲಾಗಿದೆ. ಅಜಯ ಭಂಡಾರ್ಕರ್ ಅವರು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಲ್ಲಿ ಆರೋಗ್ಯ ನಿರೀಕ್ಷಣಾಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದರು.