ಕುಂದಾಪುರ(Kundapur) : ಬೈಕೊಂದಕ್ಕೆ ಗ್ಯಾಸ್ ಸಾಗಿಸುವ ವಾಹನ ಡಿಕ್ಕಿ ಹೊಡೆದ ಪರಿಣಾಮ ಸವಾರ ಸ್ಥಳದಲ್ಲೇ ಮೃತಪಟ್ಟ ಘಟನೆ   ರಾಷ್ಟ್ರೀಯ ಹೆದ್ದಾರಿ 66ರ(NH66) ಮುಳ್ಳಿಕಟ್ಟೆ(Mullikatte) ಸಮೀಪದ ಆರಾಟೆ ಸೇತುವೆ(Arate Bridge) ಬಳಿ ಸೋಮವಾರ ಸಂಜೆ ನಡೆದಿದೆ.

ಮಂಗಳೂರು ಮೂಲದ(Manglore Native) ಪ್ರಸ್ತುತ ಬೆಂಗಳೂರಿನಲ್ಲಿ(Bangalore) ನೆಲೆಸಿರುವ ಕೆಬಿ ಯುವರಾಜ್ ಬಲ್ಲಾಳ ಎಂಬುವರ ಪುತ್ರ ರಂಜಿತ್ ಬಲ್ಲಾಳ್‌(59) ಮೃತಪಟ್ಟ ಬೈಕ್ ಸವಾರ ಎಂದು ಗುರುತಿಸಲಾಗಿದೆ.

ಸವಾರ ತನ್ನ ಬಿಎಂಡಬ್ಲ್ಯೂ ಬೈಕ್ ನಲ್ಲಿ(BMW Bike) ಗೋವಾ(Goa) ಕಡೆಯಿಂದ ಮಂಗಳೂರು(Mangalore) ಕಡೆಗೆ ಪ್ರಯಾಣಿಸುತ್ತಿದ್ದರು. ಆರಾಟೆ ಸೇತುವೆ ಬಳಿ ಗ್ಯಾಸ್ ಸಾಗಾಟದ ವಾಹನ ಬೈಕ್ ಗೆ ಡಿಕ್ಕಿ ಹೊಡೆದ ಪರಿಣಾಮ ಸವಾರ ಸ್ಥಳದಲ್ಲೇ ಮೃತಪಟ್ಟಿದ್ದಾನೆ.

ಗಂಗೊಳ್ಳಿ ಠಾಣಾ(Gangolli Station) ಪೊಲೀಸರು ಸ್ಥಳಕ್ಕಾಗಮಿಸಿ ಪರಿಶೀಲಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಇದನ್ನು ಓದಿ : ಶಿರೂರು ಗುಡ್ಡ ಕುಸಿತ ಪ್ರಕರಣದಲ್ಲಿ ಹೊಂದಾಣಿಕೆ : ಪ್ರಣಾವಾನಂದ ಸ್ವಾಮಿ ಗಂಭೀರ ಆರೋಪ

ಜೋಕಾಲಿ ಆಡುತ್ತಿದ್ದಾಗ ಹಗ್ಗ ಸುತ್ತಿ ಬಾಲಕಿ ಸಾವು.

ಬಸ್ ಸ್ಟೇರಿಂಗ್ ಗೆ ಚಾಲಕರನ್ನ ಕಟ್ಟಿ ರೈತರ ಆಕ್ರೋಶ

ಮೀನುಗಾರಿಕೆ ಇಲಾಖೆ ಸಹಾಯಕ ನಿರ್ದೇಶಕರ ಕಚೇರಿ ಸ್ಥಳಾಂತರಕ್ಕೆ ವಿರೋಧ.