ಇ ಸಮಾಚಾರ ಡಿಜಿಟಲ್‌ ನ್ಯೂಸ್‌ (esamachara digital news) ಹೊನ್ನಾವರ(Honnavar): ಮಂಕಿ ಮತ್ತು ಮುರ್ಡೇಶ್ವರ(Manki and Murdeshwar) ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅಕ್ರಮವಾಗಿ ಮರಳನ್ನು(Sand) ತುಂಬಿ ಸಾಗಾಟ ಮಾಡುತ್ತಿದ್ದ ವಾಹನಗಳನ್ನು ಭಟ್ಕಳ ಎಎಸ್ಪಿ ರಾನು ಗುಪ್ತ(Bhatkal Asp Ranu Gupta) ನೇತೃತ್ವದಲ್ಲಿ ವಶಪಡಿಸಿಕೊಂಡ ಘಟನೆ ನಡೆದಿದೆ.

ಅಧಿಕಾರ ಸ್ವೀಕರಿಸಿದ ಕೆಲ ಹೊತ್ತಿನಲ್ಲಿ ರಾನು ಗುಪ್ತ ನೇತೃತ್ವದ ಪೊಲೀಸ್ ತಂಡ ಕಾರ್ಯಾಚರಣೆ ನಡೆಸಿದೆ. ಅನಂತವಾಡಿ ಮಂಕಿಯ ಹರೀಶ ತಂದೆ ವಿಷ್ಣು ನಾಯ್ಕ (35), ಚಿತ್ತಾರ ಮಂಕಿಯ ಅಜೀತ ತಂದೆ ಸುರೇಶ ನಾಯ್ಕ (23)ಬಳ್ಕೂರ ಹೊಸಹಿತ್ಲನ ಆನಂದ ತಂದೆ ಅಣ್ಣಪ್ಪ ನಾಯ್ಕ (40) ಕಾಸರಕೋಡನ ಪ್ರಕಾಶ ಶ್ರೀನಿವಾಸ ಪುರಾಣಿಕ ,

ಬಳ್ಕೂರನ ಮಾರುತಿ ಶ್ರೀಧರ ನಾಯ್ಕ (31), ಗೇರುಸೊಪ್ಪದ ನಜೀರ್ ಮಹ್ಮದ್ ಮೈದಿನ್‌ಕುಟ್ಟಿ (39)ಅವರನ್ನ ಲಾರಿ ಸಮೇತ ವಶಕ್​ಕೆ ಪಡೆಯಲಾಗಿದೆ. 24 ಗಂಟೆಯ ಕಾರ್ಯಾಚರಣೆಯಲ್ಲಿ ಆರು ವಾಹನಗಳ ಮೇಲೆ ಪ್ರಕರಣ ದಾಖಲಿಸಲಾಗಿದೆ.

ಮಂಕಿ ಪೊಲೀಸ ಠಾಣೆ(Manki Police Station) ಪಿಎಸ್ಐ ಶ್ರೀಶೈಲ್ ಅವರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.