ಇ ಸಮಾಚಾರ ಡಿಜಿಟಲ್ ನ್ಯೂಸ್(esamachara digital news) ಕಾರವಾರ(Karwar): ​ ಅಂತೂ ಇಂತೂ ರಣಜಿ ತಂಡದಲ್ಲಿ ಮತ್ತೋರ್ವ ಯುವಕ ಸ್ಥಾನ ಪಡೆದಿದ್ದಾನೆ. ರಣಜಿ ಪಂದ್ಯಕ್ಕೆ ಉತ್ತರಕನ್ನಡ ಜಿಲ್ಲೆಯ ಉದಯೋನ್ಮುಖ ಆಟಗಾರ ರಿತೇಶ್ ಭಟ್ಕಳ್(Ritesh Bhatkal) ಆಯ್ಕೆಯಾಗಿದ್ದಾರೆ.

ರಿತೇಶ ಅವರ ನಿರಂತರ ಪರಿಶ್ರಮ, ಶಿಸ್ತು ಹಾಗೂ ಕ್ರೀಡಾ ಸಮರ್ಪಣೆಯ ಮೂಲಕ ಕರ್ನಾಟಕ ರಾಜ್ಯ ಕ್ರಿಕೆಟ್ ತಂಡಕ್ಕೆ(Karnataka State Cricket Team) ಆಯ್ಕೆಯಾಗಿದ್ದಾರೆ. ಈ ಮೂಲಕ ಜೆರ್ಸಿ(Jersy) ಧರಿಸುವ ಅತ್ಯಮೂಲ್ಯ ಅವಕಾಶವನ್ನು ಗಿಟ್ಟಿಸಿಕೊಂಡಿದ್ದಾರೆ.

​ಚಿಕ್ಕವನಿರುವಾಗಲೇ ಕ್ರಿಕೆಟ್‌ನತ್ತ ಅಪಾರ ಆಸಕ್ತಿ ಹೊಂದಿದ್ದ ರಿತೇಶ್, ಕಾರವಾರದ ಸೇಂಟ್ ಜೋಸೆಫ್ಸ್ ಶಾಲೆ (Karwar St. Joseph’s School) ಹಾಗೂ ಹಿಂದೂ ಹೈಸ್ಕೂಲ್‌ನಲ್ಲಿ (Hindu High School) ತಮ್ಮ ವಿದ್ಯಾಭ್ಯಾಸ ಮುಗಿಸಿದವರು. ಇವರ ಈ ಕ್ರೀಡಾ ಸಾಧನೆಯ ಹಿಂದೆ ಕುಟುಂಬದ ಪ್ರೋತ್ಸಾಹವೂ ಬಹಳ ಇದೆ. ಇವರ ತಂದೆ ಕಾರವಾರದ ಸರ್ಕಾರಿ ಡಿಪ್ಲೊಮಾ ಕಾಲೇಜಿನಲ್ಲಿ(Diploma College) ಅಧ್ಯಾಪಕರಾಗಿ ಸೇವೆ ಸಲ್ಲಿಸಿದವರು. ಅತ್ಯುತ್ತಮ ಶಿಕ್ಷಣ ಮತ್ತು ಮೌಲ್ಯಗಳ ವಾತಾವರಣದಲ್ಲಿ ಬೆಳೆದ ರಿತೇಶ್, ಇದೀಗ ರಾಜ್ಯ ಮಟ್ಟದಲ್ಲಿ ತಮ್ಮದೇ ಆದ ಹೆಜ್ಜೆ ಗುರುತು ಮೂಡಿಸುತ್ತಿದ್ದಾರೆ.

ರಣಜಿ ಟ್ರೋಫಿ(Ranaji Trophy) 2026–27ರ ಸಾಲಿನಲ್ಲಿ ಅವಕಾಶ ಗಿಟ್ಟಿಸಿಕೊಂಡ ರಿತೇಶ ತಮಗೆ ಸಿಕ್ಕಿರುವ ಅವಕಶವನ್ನ ಉತ್ತಮವಾಗಿ ಬಳಸಿಕೊಳ್ಳಲಿ, ಕರ್ನಾಟಕದ ಕ್ರಿಕೆಟ್‌ಗೆ ಹೆಮ್ಮೆ ತರುವಂತಹ ಪ್ರದರ್ಶನ ನೀಡಲಿ ಹಾಗೂ ಭವಿಷ್ಯದಲ್ಲಿ ಭಾರತೀಯ ರಾಷ್ಟ್ರೀಯ ಕ್ರಿಕೆಟ್(ICC) ತಂಡವನ್ನು ಪ್ರತಿನಿಧಿಸುವ ಅವರ ಕನಸು ನನಸಾಗಲಿ ಎಂದು ಅವರ ಸ್ನೇಹಿತರು, ಕಾರವಾರದ (Karwar) ಜನತೆ ಹಾಗೂ ಕ್ರೀಡಾಭಿಮಾನಿಗಳು ಶುಭ ಹಾರೈಸಿದ್ದಾರೆ.