ಇ ಸಮಾಚಾರ ಡಿಜಿಟಲ್ ನ್ಯೂಸ್(esamachara digital news) ಭಟ್ಕಳ(Bhatkal): ತಾಲೂಕಿನ ಮುಂಡಳ್ಳಿ(Mundalli) ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಕಳೆದ ಕೆಲವು ದಿನಗಳಿಂದ ಸಾರ್ವಜನಿಕರಿಗೆ ತೀವ್ರ ತೊಂದರೆ ನೀಡುತ್ತಿದ್ದ ಮಾನಸಿಕ ಅಸ್ವಸ್ಥ ಮಂಗವನ್ನು(Monkey) ಕೊನೆಗೂ ಸುರಕ್ಷಿತವಾಗಿ ಸೆರೆಹಿಡಿಯಲಾಗಿದ್ದು, ಸ್ಥಳೀಯ ಗ್ರಾಮಸ್ಥರು ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ.
ಈ ಮಂಗವು ಮುಂಡಳ್ಳಿ ಪ್ರದೇಶದಲ್ಲಿ ಸಾರ್ವಜನಿಕರು ಹಾಗೂ ಮಕ್ಕಳ ಮೇಲೆ ದಾಳಿಗೆ ಯತ್ನಿಸುತ್ತಿತ್ತು. ಅಲ್ಲದೆ, ರಸ್ತೆಯಲ್ಲಿ ಚಲಿಸುವ ಬೈಕ್ ಸವಾರರ ಮೇಲೆ ದಿಢೀರನೆ ಜಿಗಿಯುವುದು ಹಾಗೂ ಆಟೋ ಚಾಲಕರಿಗೂ ಕಿರಿಕಿರಿ ಉಂಟುಮಾಡುತ್ತಿದ್ದರಿಂದ ಇಡೀ ಗ್ರಾಮಸ್ಥರು ಆತಂಕದಲ್ಲಿದ್ದರು.
ಗ್ರಾಮದ ನೂರಾರು ಮನೆಗಳ ಕಿಟಕಿಯ ಗಾಜು, ಮನೆಯ ಒಳಗೆ ಮತ್ತು ಹೊರಗೆ ಇರುವ ಉಪಕರಣಗಳನ್ನ ಈ ಮಂಗ ಹಾಳು ಮಾಡಿದ್ದವು. ಹೀಗಾಗಿ ಮನೆಯಲ್ಲಿರು ಸಹ ಜನರು ಹೆದರುತ್ತಿದ್ದರು. ಸಾಕಷ್ಟು ಹಾನಿ ಮಾಡಿರುವ ಮಂಗ ನಾಗರಿಕರಿಗೆ ನಷ್ಟು ಉಂಟುಮಾಡಿದ್ದವು.
ಸ್ಥಳೀಯರ ದೂರಿನನ್ವಯ, ಮುಂಡಳ್ಳಿ ಗ್ರಾಮ ಪಂಚಾಯಿತಿ(Mundalli Village Panchayat) ಅಭಿವೃದ್ಧಿ ಅಧಿಕಾರಿಗಳು (PDO), ಕಾರ್ಯದರ್ಶಿಗಳು ಹಾಗೂ ಸಿಬ್ಬಂದಿ ವರ್ಗದವರು ಧಾರವಾಡದ ವನ್ಯಜೀವಿ ಸಂರಕ್ಷಣಾ ತಂಡದ ಸಹಕಾರದೊಂದಿಗೆ ವಿಶೇಷ ಕಾರ್ಯಾಚರಣೆ ನಡೆಸಿ ಮಂಗವನ್ನು ಕಾರ್ಯಾಚರಣೆ ಮೂಲಕ ಯಶಸ್ವಿಯಾಗಿ ಸೆರೆಹಿಡಿದಿದ್ದಾರೆ.
ಮಂಗವನ್ನು ಸುರಕ್ಷಿತವಾಗಿ ಹಿಡಿದು ಸಾರ್ವಜನಿಕರಿಗೆ ಎದುರಾಗಿದ್ದ ಭೀತಿಯನ್ನು ದೂರಮಾಡಿದ ಗ್ರಾಮ ಪಂಚಾಯಿತಿ ಸಿಬ್ಬಂದಿ ಹಾಗೂ ಧಾರವಾಡ ವನ್ಯಜೀವಿ ಸಂರಕ್ಷಣಾ ತಂಡದ(Dharwad Wildlife Rescue Team ಸಮಯೋಚಿತ ಕಾರ್ಯಕ್ಕೆ ಮುಂಡಳ್ಳಿ ಗ್ರಾಮಸ್ಥರು ಹಾಗೂ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ