ಕಾರವಾರ : ಅಮದಳ್ಳಿಯ ಎಜುಕೇರ್ ಆಂಗ್ಲ ಮಾಧ್ಯಮ ಶಾಲೆ ವತಿಯಿಂದ ವಿಶ್ವ ವೈದ್ಯ ದಿನಾಚರಣೆ ಕಾರ್ಯಕ್ರಮ ನಡೆಯಿತು.
ಸ್ಥಳೀಯ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ದೀಪ ಏನ್ ಅವರನ್ನ ದಿನಾಚರಣೆ ನಿಮಿತ್ತ ವಿದ್ಯಾರ್ಥಿಗಳು ಹಾಗೂ ಆಡಳಿತ ಮಂಡಳಿ ಮತ್ತು ಶಿಕ್ಷಕರು ಸೇರಿ ಗೌರವಿಸಿದರು.
ಗೌರವ ವಂದನೆಯನ್ನು ಸ್ವೀಕರಿಸಿ ಮಾತನಾಡಿದ ಡಾ ದೀಪಾ, ವಿದ್ಯಾರ್ಥಿಗಳಿಗೆ ಆರೋಗ್ಯ ವೈಯಕ್ತಿಕ ಸ್ವಚ್ಛತೆ ಸಾಮಾಜಿಕ ಆರೋಗ್ಯ ಕಳಕಳಿ ಮುಖ್ಯ. ವೈದ್ಯಕೀಯ ವೃತ್ತಿಯು ಅತ್ಯಂತ ಪವಿತ್ರವಾದದ್ದು ಮತ್ತು ಎಲ್ಲಾ ವೈದ್ಯರು ಸಹ ಕಾಯಿಲೆಯನ್ನು ಗುಣಪಡಿಸಲು ತಮ್ಮ ಕರ್ತವ್ಯ ಮಾಡುತ್ತಾರೆ. ಪ್ರತಿಯೊಬ್ಬರೂ ಕಾಯಿಲೆ ಮುಕ್ತ ಆರೋಗ್ಯ ಹೊಂದಲಿ ಎಂದು ಬೇಡುತ್ತೇವೆ ಎಂದರಲ್ಲದೆ ಸಾಮಾಜಿಕ ಸ್ವಾಸ್ಥ್ಯ ನಿರ್ಮಾಣ ಮಾಡಲು ಎಲ್ಲ ವಿದ್ಯಾರ್ಥಿಗಳು ತಮ್ಮ ಬಾಲ್ಯ ಜೀವನದಿಂದಲೇ ರೂಡಿಸಿಕೊಳ್ಳಬೇಕೆಂದು ಕರೆ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲೆಯ ಪ್ರಾಂಶುಪಾಲರಾದ ಶ್ರೀಮತಿ ನಾಗರತ್ನ ವಹಿಸಿದ್ದರು. ಕಾರ್ಯಕ್ರಮದಲ್ಲಿ ವಿನೋದ ಅಲ್ಮೆಡಾ, ಸಹ ಶಿಕ್ಷಕಿಯರಾದ ಟೀನಾ ಆಸ್ನೋಟಿಕರ್. ಶೀತಲ ಶ್ವೇತ ಗೌಡ. ಚಂದ್ರಕಲಾ ಗೌಡ, ನಿಕಿತಾ ಬೈನು ಮತ್ತು ಎಲ್ಲಾ ಶಿಕ್ಷಕರು ಭಾಗವಹಿಸಿದ್ದರು. ಕುಮಾರ ಸಂಕೇತ್ ಭಟ್ ಪ್ರಾರ್ಥಿಸಿದರು. ಕುಮಾರಿ ದೀಪಾ ನಾಯ್ಕ ಸ್ವಾಗತಿಸಿದರೇ, ನಿತ ನಾಯಕ ವಂದಿಸಿದರು.