ಇ ಸಮಾಚಾರ ಡಿಜಿಟಲ್ ನ್ಯೂಸ್(esamachara digital news) ಕಾರವಾರ(Karwar) :  ಅಪಾಯದ ಕಾರಣಕ್ಕಾಗಿ  ಮಳೆಗಾಲದ ಸಂದರ್ಭದಲ್ಲಿ  ನಿರ್ಬಂಧಿಸಲಾಗಿದ್ದ ಕಾರವಾರ(Karwar) ತಾಲೂಕಿನ ಬಿಣಗಾ(Binaga) ಕರಿದೇವಸ್ಥಾನದಿಂದ ಅರಗಾ(Araga) ಶ್ರೀ ಮಹಾದೇವಸ್ಥಾನದ ಕ್ರಾಸ್‌ವರೆಗಿನ ರಾಷ್ಟ್ರೀಯ ಹೆದ್ದಾರಿ-66ರಲ್ಲಿ(NH 66) ಇದೀಗ ಮತ್ತೆ ದ್ವಿಮುಖ ವಾಹನ ಸಂಚಾರಕ್ಕೆ ಮುಕ್ತಗೊಳಿಸಲಾಗಿದೆ.

ಮಳೆಗಾಲದಲ್ಲಿ ಗುಡ್ಡದಿಂದ ಕಲ್ಲು ಮತ್ತು ಮಣ್ಣು ಕುಸಿಯುವ ಅಪಾಯದ ಹಿನ್ನೆಲೆಯಲ್ಲಿ ಜುಲೈ ನಾಲ್ಕರಿಂದ ಈ ಮಾರ್ಗದಲ್ಲಿ ಕಾರವಾರದಿಂದ ಅಂಕೋಲಾ(Karwar to Ankola) ಕಡೆಗೆ ತೆರಳುವ ರಸ್ತೆಯನ್ನು ನಿರ್ಬಂಧಿಸಿ, ಅಂಕೋಲಾದಿಂದ ಕಾರವಾರಕ್ಕೆ ಬರುವ ರಸ್ತೆಯಲ್ಲಿ ಮಾತ್ರ ಏಕಮುಖ ಸಂಚಾರಕ್ಕೆ ಅವಕಾಶ ಕಲ್ಪಿಸಲಾಗಿತ್ತು.

ಪ್ರಸ್ತುತ ಮಳೆಯ ಪ್ರಮಾಣ ಕಡಿಮೆಯಾಗಿರುವ ಹಿನ್ನೆಲೆಯಲ್ಲಿ ಜಿಲ್ಲಾ ಪೊಲೀಸ್ ಅಧೀಕ್ಷಕರ ವರದಿಯನ್ನು ಆಧರಿಸಿ ಜಿಲ್ಲಾಧಿಕಾರಿ ಕೆ. ಲಕ್ಷ್ಮೀಪ್ರಿಯಾ(DC K Lakshmipriya) ಅವರು ಈ ಹಿಂದಿನ ನಿರ್ಬಂಧದ ಆದೇಶವನ್ನು ಹಿಂದಕ್ಕೆ ಪಡೆದಿದ್ದಾರೆ.

ಹೀಗಾಗಿ ಬಿಣಗಾ ಕರಿದೇವಸ್ಥಾನದಿಂದ ಅರಗಾ ಮಹಾದೇವಸ್ಥಾನದ ಕ್ರಾಸ್‌ವರೆಗಿನ ರಾಷ್ಟ್ರೀಯ ಹೆದ್ದಾರಿ-66ರಲ್ಲಿ ಮೊದಲಿನಂತೆ ದ್ವಿಮುಖ ವಾಹನ ಸಂಚಾರ ಪುನರಾರಂಭಗೊಂಡಿದೆ ಎಂದು ತಿಳಿಸಲಾಗಿದ್ದು ವಾಹನ ಸವಾರರು ಮಾರ್ಗವನ್ನು ಅನುಸರಿಸಬಹುದಾಗಿದೆ.