ಕಾರವಾರ(KARWAR) : ಪೊಲೀಸ್ ಇಲಾಖೆ(POLICE DEPARTMENT)ಯಲ್ಲಿ ಸುದೀರ್ಘ 28 ವರ್ಷಗಳ ಕಾಲ ಸೇವೆ ಸಲ್ಲಿಸಿದ್ದ ತಿಮ್ಮಪ್ಪ ಎಸ್ ಬೇಡುಮನೆ ಪದೋನ್ನತಿ ಹೊಂದಿ ಪಿಎಸ್ಐ ಆಗಿ ಅಧಿಕಾರ ಸ್ವೀಕರಿಸಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ(SULYA) ತಾಲೂಕಿನ ಬೆಳ್ಳಾರೆ ಪೊಲೀಸ್ ಠಾಣೆ(BELLARE POLICE STATION)ಯ ಅವರು ಕರ್ತವ್ಯಕ್ಕೆ ಹಾಜರಾಗಿದ್ದಾರೆ. ಉತ್ತರಕನ್ನಡ ಜಿಲ್ಲೆಯ ಭಟ್ಕಳ(BHATKAL) ತಾಲೂಕಿನ ಶಿರಾಲಿಯ ಅಳ್ವೆಕೋಡಿಯವರಾದ ತಿಮ್ಮಪ್ಪ ಅವರು 1996 ರಲ್ಲಿ ಪೊಲೀಸ್ ಇಲಾಖೆಗೆ ಸೇರಿದ್ದರು. ಜಿಲ್ಲೆಯ ದಾಂಡೇಲಿ(DANDELI) ಗ್ರಾಮೀಣ ಠಾಣೆ, ಶಿರಸಿ(SIRSI) ಮಾರುಕಟ್ಟೆ ಠಾಣೆ, ದಾಂಡೇಲಿ ಅರಣ್ಯ ಘಟಕ, ಗೋಕರ್ಣ(GOKARN) ಪೊಲೀಸ್ ಠಾಣೆಯಲ್ಲಿ ಪೊಲೀಸ್ ಕಾನಸ್ಟೇಬಲ್ ಆಗಿ, ಹವಾಲ್ದಾರ್ ಆಗಿ ನಂತರ ಆಗಿ ನಂತರ ಎಎಸ್ಐ ಆಗಿ ಕಳೆದ 9 ವರ್ಷಗಳಿಂದ ಅಂಕೋಲಾ(ANKOLA)ದಲ್ಲಿ ಸೇವೆ ಸಲ್ಲಿಸಿದ್ದರು.
ತಮ್ಮ ಸೇವಾವಧಿಯಲ್ಲಿ ದಕ್ಷತೆಯಿಂದ ಜನಪರ ಕಾಳಜಿಯೊಂದಿಗೆ ಇಲಾಖಾ ಕರ್ತವ್ಯವನ್ನು ಅಚ್ಚು ಕಟ್ಟಾಗಿ ನಿರ್ವಹಿಸಿದ್ದರು. ಸೇವೆ ಸಲ್ಲಿಸಿದ ಕಡೆಗಳಲ್ಲಿ ಪ್ರಾಮಾಣಿಕತೆಯಿಂದ ಹಲವರ ಪ್ರೀತಿ ವಿಶ್ವಾಸ ಗಳಿಸಿಕೊಂಡಿದ್ದರು.
ಸದ್ಯ ಅಂಕೋಲಾದಲ್ಲಿ ಸೇವೆ ಸಲ್ಲಿಸುತ್ತಿರುವಾಗಲೇ ಪದೋನ್ನತಿ ಹೊಂದಿ ಬೆಳ್ಳಾರೆ ಠಾಣೆಯ ಪೊಲೀಸ್ ಸಬ್ ಇನ್ಸಪೆಕ್ಟರ್ ಆಗಿ ಕರ್ತವ್ಯಕ್ಕೆಹಾಜರಾಗಿದ್ದಾರೆ.
ತಿಮ್ಮಪ್ಪ ಎಸ್ ಪದೋನ್ನತಿಗೆ ಭಟ್ಕಳ ತಾಲೂಕಿನ ಜನತೆ, ಆಪ್ತರು , ಹಿತೈಷಿಗಳು, ಅಂಕೋಲಾ, ದಾಂಡೇಲಿ, ಶಿರಸಿ, ಗೋಕರ್ಣದ ಜನತೆ, ಇಲಾಖೆಯ ಸಹೋದ್ಯೋಗಿಗಳು ಸೇರಿದಂತೆ ಇತರರು ಸಂತಸ ವ್ಯಕ್ತಪಡಿಸಿ ಅಭಿನಂದಿಸಿ ಶುಭಾಶಯಗಳು ಕೊರಿದ್ದಾರೆ.
ಇದನ್ನು ಓದಿ : ಅಪ್ಪನನ್ನ ಹುಡುಕಿಕೊಡಿ