ಇ ಸಮಾಚಾರ ಡಿಜಿಟಲ್ ನ್ಯೂಸ್(esamachara digital news) ಅಂಕೋಲಾ(Ankola) : ನೀಲಿಕಲ್ಲು (ಕಪ್ಪೆಚಿಪ್ಪು) ತೆಗೆಯಲು ಸಮುದ್ರಕ್ಕೆ ಇಳಿದಿದ್ದ ಮೀನುಗಾರನೊಬ್ಬ ಮುಳುಗಿ ಮೃತಪಟ್ಟ ದುಃಖಕರ ಘಟನೆ ಉತ್ತರ ಕನ್ನಡ(Uttarkannada) ಜಿಲ್ಲೆಯ ಅಂಕೋಲಾ(Ankola) ತಾಲೂಕಿನ ಬೇಲೆಕೇರಿ ಬಂದರಿನ ಬಳಿ ಸಂಭವಿಸಿದೆ.
ಮೃತ ಮೀನುಗಾರನನ್ನು ಮಾರುತಿ ಸುಬ್ರಾಯ್ ಬಾನವಾಳೀಕರ್ (65) ಎಂದು ಗುರುತಿಸಲಾಗಿದೆ. ಅಂಕೋಲಾ ತಾಲೂಕಿನ ಬೇಲೆಕೇರಿ ಬಂದರು (Belekeri Port) ಸಮೀಪದ ಸಮುದ್ರದಲ್ಲಿ ನೀಲಿಕಲ್ಲು ತೆಗೆಯಲು ಮಾರುತಿ ಹೋಗಿದ್ದರು. ಈ ವೇಳೆ ನೀರಿನಲ್ಲಿ ಉಸಿರುಗಟ್ಟಿ ಅವರು ಸಮುದ್ರಪಾಲಾಗಿದ್ದಾರೆ.
ಘಟನೆಯ ವಿಷಯ ತಿಳಿಯುತ್ತಿದ್ದಂತೆ ಅಂಕೋಲಾ ಪೊಲೀಸ್ (Ankola Police) ಠಾಣೆಯ ಸಿಬ್ಬಂದಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಕುರಿತು ಅಂಕೋಲಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮುಂದಿನ ಕಾನೂನು ಕ್ರಮ ಕೈಗೊಳ್ಳಲಾಗಿದೆ.