ಇ ಸಮಾಚಾರ ಡಿಜಿಟಲ್ ನ್ಯೂಸ್(esamachara digital news) ಅಂಕೋಲಾ(Ankola) : ನೀಲಿಕಲ್ಲು (ಕಪ್ಪೆಚಿಪ್ಪು) ತೆಗೆಯಲು ಸಮುದ್ರಕ್ಕೆ ಇಳಿದಿದ್ದ ಮೀನುಗಾರನೊಬ್ಬ ಮುಳುಗಿ ಮೃತಪಟ್ಟ ದುಃಖಕರ ಘಟನೆ ಉತ್ತರ ಕನ್ನಡ(Uttarkannada) ಜಿಲ್ಲೆಯ ಅಂಕೋಲಾ(Ankola) ತಾಲೂಕಿನ ಬೇಲೆಕೇರಿ ಬಂದರಿನ ಬಳಿ ಸಂಭವಿಸಿದೆ.

​ಮೃತ ಮೀನುಗಾರನನ್ನು ಮಾರುತಿ ಸುಬ್ರಾಯ್ ಬಾನವಾಳೀಕರ್ (65) ಎಂದು ಗುರುತಿಸಲಾಗಿದೆ. ಅಂಕೋಲಾ ತಾಲೂಕಿನ ಬೇಲೆಕೇರಿ ಬಂದರು (Belekeri Port) ಸಮೀಪದ ಸಮುದ್ರದಲ್ಲಿ ನೀಲಿಕಲ್ಲು ತೆಗೆಯಲು ಮಾರುತಿ ಹೋಗಿದ್ದರು. ಈ ವೇಳೆ ನೀರಿನಲ್ಲಿ ಉಸಿರುಗಟ್ಟಿ ಅವರು ಸಮುದ್ರಪಾಲಾಗಿದ್ದಾರೆ.

​ಘಟನೆಯ ವಿಷಯ ತಿಳಿಯುತ್ತಿದ್ದಂತೆ ಅಂಕೋಲಾ ಪೊಲೀಸ್ (Ankola Police) ಠಾಣೆಯ ಸಿಬ್ಬಂದಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಕುರಿತು ಅಂಕೋಲಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮುಂದಿನ ಕಾನೂನು ಕ್ರಮ ಕೈಗೊಳ್ಳಲಾಗಿದೆ.