ಇ ಸಮಾಚಾರ ಡಿಜಿಟಲ್ ನ್ಯೂಸ್(esamachara digital news)  ಕಾರವಾರ(Karwar) : ಜಿಲ್ಲೆಯ ಅತ್ಯಂತ ಹಳೆಯ ಸಹಕಾರಿ ಸಂಘಗಳಲ್ಲಿ ಒಂದಾದ ನಗರದ ರಾಧಾಕೃಷ್ಣ ದೇವಸ್ಥಾನ ರಸ್ತೆಯಲ್ಲಿರುವ ‘ಹರಿಕಂತ್ರ-ಖಾರ್ವಿ ಮೀನುಗಾರರ ಸಹಕಾರಿ ಸಂಘ ನಿಯಮಿತ’ದ ನೂತನ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಆಯ್ಕೆ ಪ್ರಕ್ರಿಯೆ ಮಂಗಳವಾರ ನಡೆಯಿತು.

ಸಂಘದ ನೂತನ ಅಧ್ಯಕ್ಷರಾಗಿ ರೋಹಿದಾಸ ಗಿರಿಯಾ ಬಾನಾವಳಿ ಹಾಗೂ ಉಪಾಧ್ಯಕ್ಷರಾಗಿ ಅಶೋಕ ಚಿಮಣು ಹರಿಕಂತ್ರ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

​ಇದೇ ಸಂದರ್ಭದಲ್ಲಿ ಸಂಘದ ಆಡಳಿತ ಮಂಡಳಿ ನಿರ್ದೇಶಕರಾಗಿ ವಿಕಾಸ ಕೃಷ್ಣ ತಾಂಡೇಲ್, ವಿಶ್ವನಾಥ ಪಾಂಡುರಂಗ ತಾಂಡೇಲ್, ಚೇತನ್ ಯಶವಂತ ಹರಿಕಂತ್ರ, ಸೂರಜ್ ಮಧುಕರ್ ಕುರುಮಕರ್, ಚಂದ್ರಕಾಂತ ವೆಂಕಟೇಶ್ ಹರಿಕಂತ್ರ, ನಳಿನಿ ಗೋಪಾಲ ಹರಿಕಂತ್ರ ಹಾಗೂ ಕುಸುಮಾ ಡಿ. ಕುಡ್ತಲಕರ್ ಅವರು ಆಯ್ಕೆಯಾದರು.

​ಚುನಾವಣಾಧಿಕಾರಿಯಾಗಿ ಪಾಲ್ಗೊಂಡಿದ್ದ ರೂಪಾ ನಾಯ್ಕ ಅವರು ಚುನಾವಣಾ ಪ್ರಕ್ರಿಯೆಯನ್ನು ಯಶಸ್ವಿಯಾಗಿ ನಡೆಸಿಕೊಟ್ಟರು. ಸಂಘದ ಕಾರ್ಯದರ್ಶಿ ಅಶೋಕ್ ಗೋವೇಕರ್ ಅವರು ಈ ಸಂದರ್ಭದಲ್ಲಿ ಸಹಕರಿಸಿದರು.