ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news) ಕಾರವಾರ(Karwar) : ತಾಲೂಕಿನ ಶಿರವಾಡ ಗ್ರಾಮದಲ್ಲಿ(Shirwad Village) ಹಠಾತ್ ವಿದ್ಯುತ್ ವೋಲ್ಟೇಜ್(Power Voltage) ಏರಿಳಿತದಿಂದ ಹಲವು ಮನೆಗಳಲ್ಲಿನ ವಿದ್ಯುತ್ ಉಪಕರಣಗಳು ಹಾನಿಗೊಳಗಾದ ಘಟನೆ ನಡೆದಿದೆ.
ವೋಲ್ಟೇಜ್‌ನಲ್ಲಿ ಏಕಾಏಕಿ ಉಂಟಾದ ಏರಿಳಿತದ ಪರಿಣಾಮ ಮನೆಗಳಲ್ಲಿದ್ದ ಟಿವಿ(TV), ಫ್ರಿಜ್(Fridge), ಫ್ಯಾನ್(Fan), ಮೊಬೈಲ್ ಚಾರ್ಜರ್(Mobile Charger), ಮಿಕ್ಸರ್(Mixer) ಸೇರಿದಂತೆ ಹಲವು ವಿದ್ಯುತ್ ಉಪಕರಣಗಳು ಸುಟ್ಟು ಹಾನಿಗೊಳಗಾಗಿವೆ.
ಈ ಅವಘಡದಿಂದ ಸ್ಥಳೀಯರಿಗೆ ಲಕ್ಷಾಂತರ ರೂಪಾಯಿ ಮೌಲ್ಯದ ಆಸ್ತಿ ನಷ್ಟವಾಗಿದ್ದು, ಘಟನೆಗೆ ಸಂಬಂಧಿಸಿದಂತೆ ಸೂಕ್ತ ತನಿಖೆ ನಡೆಸಿ ಪರಿಹಾರ ನೀಡುವಂತೆ ಗ್ರಾಮಸ್ಥರು ಸಂಬಂಧಪಟ್ಟ ಅಧಿಕಾರಿಗಳನ್ನು ಆಗ್ರಹಿಸಿದ್ದಾರೆ.
