ಬೆಳಗಾವಿ(Belagavi) : ಗಣಪತಿಗಲ್ಲಿಯಲ್ಲಿ ಬಟ್ಟೆ ಅಂಗಡಿಯಲ್ಲಿ ಕಳ್ಳತನ ಮಾಡಲು ಯತ್ನಿಸಿದ ಐವರು ಮಹಿಳೆಯರನ್ನು ಸಾರ್ವಜನಿಕರು ಥಳಿಸಿ ಮಾರ್ಕೆಟ್ ಪೊಲೀಸರಿಗೆ(Market police) ಒಪ್ಪಿಸಿದ್ದಾರೆ.

ಇಲ್ಲಿನ ಬಟ್ಟೆ ಅಂಗಡಿಗಳಲ್ಲಿ ದೀಪಾವಳಿಯ(Deepavali) ಬಟ್ಟೆ ವ್ಯಾಪಾರ ಜೋರಾಗಿ ನಡೆದಿತ್ತು.  ಗ್ರಾಹಕರ ಸೋಗಿನಲ್ಲಿ ಬಂದ ಐವರು ಖತರ್ನಾಕ್ ಮಹಿಳೆಯರು ಬಟ್ಟೆಗಳನ್ನು ಕಳ್ಳತನ ಮಾಡುವಾಗಲೇ ಸಿಕ್ಕಿಬಿದ್ದಿದ್ದಾರೆ. ಮಾರ್ಕೇಟ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

ದಾಂಡೇಲಿಯಲ್ಲೂ(Dandeli) ಸಹ ಗ್ರಾಹಕರ ಸೋಗಿನಲ್ಲಿ ಬಂದ ಇಬ್ಬರು ಕಳ್ಳಿಯರು ಅಂಗಡಿಯಲ್ಲಿದ್ದ ವಸ್ತುಗಳನ್ನು ಎಗರಿಸಿದ ಘಟನೆ ನಡೆದಿತ್ತು. ನಗರದ ಲಿಂಕ್ ರಸ್ತೆಯಲ್ಲಿರುವ(Link road) ಫ್ಯಾನ್ಸಿ ಅಂಗಡಿ ಮತ್ತು ಸಂಡೆ ಮಾರ್ಕೆಟ್ ನಲ್ಲಿರುವ ಬಟ್ಟೆ ಅಂಗಡಿಯಲ್ಲಿ ನಡೆದಿದ್ದು, ಘಟನೆ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿತ್ತು.

ಈ ಮಹಿಳೆಯರು ಅಂಗಡಿಯ ಮಾಲಕನ ಗಮನವನ್ನು ಬೇರೆಡೆಗೆ ಸೆಳೆದು ತಮ್ಮ ಕೈಚಳಕ ಪ್ರದರ್ಶಿಸಿದ್ದಾರೆ. ಸಂಡೆ ಮಾರ್ಕೆಟಿನ ಬಟ್ಟೆ ಅಂಗಡಿಯಲ್ಲಿಯೂ ಮಾಲಕನನ್ನು ಯಾಮಾರಿಸಿ ಕಳ್ಳತನ ನಡೆಸಿದ್ದಾರೆ. ಮರುದಿನವೂ ಮತ್ತೇ ಅದೇ ಬಟ್ಟೆ ಅಂಗಡಿಗೆ ಈ ಕಳ್ಳಿಯರು ಆಗಮಿಸಿ ಕಳ್ಳತನ ನಡೆಸಿದ್ದಾರೆ. ಆಗ ಎಚ್ಚೆತ್ತ ಅಂಗಡಿಯ ಮಾಲಕ ಬೆದರಿಸಿದ್ದಾನೆ. ಅಂಗಡಿಯ ಮಾಲಕನ ಬೆದರಿಕೆಗೆ ಖತರ್ನಾಕಿ ಕಳ್ಳಿಯರು ಅಲ್ಲಿಂದ ಎಸ್ಕೇಪ್ ಆಗಿದ್ದರು.

ಕಳ್ಳಿಯರ ಕೈಚಳಕಕ್ಕೆ ಬಟ್ಟೆ, ಪ್ಯಾನ್ಸಿ ಅಂಗಡಿ ಮಾಲೀಕರು ಸುಸ್ತಾಗಿದ್ದು ಸಿಸಿಟಿವಿಯ ಮೂಲಕ ಪತ್ತೆಯಾಗಿರುವುದಕ್ಕೆ ಸಮಾಧಾನ ಪಟ್ಟುಕೊಳ್ಳುವಂತಾಗಿದೆ.

ಇದನ್ನು ಓದಿ : ಬಾರೀ ಮಳೆಯಿಂದ ತತ್ತರಿಸಿದ ಶಿರಸಿ ಜನತೆ

ಭಟ್ಕಳದಲ್ಲಿ ಅಪರೂಪದ ಆರ್ ಎಸ್ ಎಸ್ ಪಥಸಂಚಲನ ಸಂಗಮ

ಹಿರಿಯ ನಾಗರಿಕರಿಗೆ ಹೂ ಸಿಹಿ ನೀಡಿದ ಎಸ್ಪಿ