ಶಿರಸಿ (SIRSI) : ನಾಡಿನಲ್ಲೆಡೆ ನಾಗರ ಪಂಚಮಿ(NAGAR PANCHAMI)ಯನ್ನ ಸಂಭ್ರಮದಿಂದ ಆಚರಿಸಲಾಗುತ್ತಿದೆ. ಶಿರಸಿಯಲ್ಲಿ ಕುಟುಂಬವೊಂದು ನಿಜ ನಾಗರ ಹಾವಿಗೆ(SNAKE) ಪೂಜಿಸುತ್ತಿದೆ.

ಹುಲೇಕಲ್ ಗ್ರಾಮದ ಉರಗಪ್ರೇಮಿ ಪ್ರಶಾಂತ (PRASHANT) ಅವರು ಪ್ರತಿ ವರ್ಷವೂ ಪಂಚಮಿ ದಿನದಂದು ನಾಗರ ಹಾವಿಗೆ ಪೂಜೆ ಮಾಡುತ್ತಾರೆ. ಇಂದು ಸಹ ಮನೆಯಲ್ಲಿ ಪೂಜೆಗೆ ವ್ಯವಸ್ಥೆ ಮಾಡಿಕೊಂಡು  ನಾಗರ ಹಾವಿಗೆ  ಹೂ (SNAKE FLOWER) ಇಟ್ಟು ಆರತಿ ಬೆಳಗಿ ಪೂಜೆ ಮಾಡಿದ್ದಾರೆ. 

ಸನಾತನ ಧರ್ಮ(SANATANA DHARMA )ದಲ್ಲಿ ನಾಗನಿಗೆ  ವಿಶೇಷ ಸ್ಥಾನವಿದೆ. ಹೀಗಾಗಿ ನಾಗರ ಪಂಚಮಿ ಸಹ ಹಿಂದುಗಳಿಗೆ ಮಹತ್ವದ ದಿನವಾಗಿದೆ. ಹೀಗಾಗ ಶ್ರದ್ಧೆ, ಭಕ್ತಿಯಿಂದ ಪೂಜೆ ಮಾಡಿದ್ದೇವೆ. ತಮ್ಮ ತಂದೆಯವರು ನಡೆಸಿಕೊಂಡು ಬಂದ ಆಚರಣೆ ನಾವು ಮುಂದುವರಿಸಿಕೊಂಡು ಬಂದಿದ್ದೇವೆ ಎಂದು ಪ್ರಶಾಂತ ಹುಲೇಕಲ್ ಹೇಳಿದ್ದಾರೆ.