ಗೋಕರ್ಣ(GOKARN) : ಕಡಲ ಅಲೆಗೆ ಸಿಲುಕಿ ಪ್ರವಾಸಿ ವಿದ್ಯಾರ್ಥಿಯೋರ್ವ ನೀರುಪಾಲಾದ ಘಟನೆ ಗೋಕರ್ಣದ ಬಾವಿಕೋಡ್ಲು ಬಳಿ ಸಂಭವಿಸಿದೆ.
ಘಟನೆಯಲ್ಲಿ ಅಪಾಯಕ್ಕೆ ಸಿಲುಕಿದ ಐವರು ಪ್ರವಾಸಿಗರ ರಕ್ಷಿಸಲಾಗಿದೆ. ಕೋಲಾರ ಶ್ರೀನಿವಾಸಪುರ ಮೂಲದ ವಿನಯ ಎಸ್.ವಿ. (22) ನಾಪತ್ತೆಯಾದ ವಿದ್ಯಾರ್ಥಿ ಎಂದು ಹೇಳಲಾಗಿದೆ.
ಬೆಂಗಳೂರಿನ ಹಿಲ್ ಸೈಡ್ ಫಾರ್ಮಸಿ ಕಾಲೇಜಿನ(BANGLORE HILL SIDE PHARMACY COLLEGE) ಒಟ್ಟು 48 ವಿದ್ಯಾರ್ಥಿಗಳು ಗೋಕರ್ಣ ಪ್ರವಾಸಕ್ಕೆ ಬಂದಿದ್ದರು. ಮುಖ್ಯ ಕಡಲತೀರದಲ್ಲಿ ಅಲೆಯ ಅಬ್ಬರ ಜಾಸ್ತಿ ಇರುವ ಕಾರಣಕ್ಕೆ ಈಜಲು ಅವಕಾಶ ನೀಡದಿದ್ದಾಗ ಪ್ರವಾಸಿಗರೆಲ್ಲ ಮುಂದೆ ಸಾಗಿದ್ದಾರೆ.
ದುಬ್ಬನಸಸಿ ಬಳಿ ಸಮುದ್ರಲ್ಲಿ ಮೋಜುಮಸ್ತಿ ಮಾಡುವ ವೇಳೆ ಓರ್ವ ಘಟನೆ ನಡೆದಿದೆ. ಸ್ಥಳೀಯರಾದ ಸರ್ವೇಶ ಮೊರ್ಜೆ, ಪಂಢರಿನಾಥ ಮೂರ್ಜೆ ಎಂಬುವವರು ತಕ್ಷಣ ರಕ್ಷಣೆಗೆ ಧಾವಿಸಿದ್ದರು. ಕರಾವಳಿ ಕಾವಲು ಪೊಲೀಸ ಪಡೆಯ ಸಹಕಾರದಿಂದ ಐವರನ್ನು ರಕ್ಷಣೆ ಮಾಡಲಾಗಿದೆ. ಅಸ್ವಸ್ಥಗೊಂಡ ಐವರನ್ನು ಗೋಕರ್ಣ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ನೀಡಲಾಗಿದೆ. ಗೋಕರ್ಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಇದನ್ನು ಓದಿ : ಗಣೇಶೋತ್ಸವ ಸ್ಥಳಗಳಲ್ಲಿ ಬಾಂಬ್ ಸ್ಕಾಡ್
ನೌಕಪಡೆಯಲ್ಲಿ ರಾರಾಜಲಿಸಲಿದೆ ಕರಾವಳಿಯ ಹೆಸರು
ಕುಮಾರಸ್ವಾಮಿ ಅವರಿಂದ ಜಗನ್ನಾಥ್ ನಾಯ್ಕ ಮಗಳಿಗೆ ಉದ್ಯೋಗ