ಸಿದ್ದಾಪುರ(Siddapur) : ಮನೆ ಕಳ್ಳತನ (House Theft) ಮಾಡಿದ ವ್ಯಕ್ತಿಯೋರ್ವನನ್ನ ಬಂಧಿಸುವಲ್ಲಿ ಸಿದ್ದಾಪುರ ಪೊಲೀಸರು (Siddapur police) ಯಶಸ್ವಿಯಾಗಿದ್ದಾರೆ. ಮನೆಯಲ್ಲಿ ಯಾರು ಇಲ್ಲದ ವೇಳೆ ಬೀಗ ಮುರಿದು ಒಳನುಗ್ಗಿ ಲಕ್ಷಾಂತರ ರೂಪಾಯಿ ಬೆಲೆ ಬಾಳುವ ಬಂಗಾರ ಕಳ್ಳತನ(Gold Theft) ಮಾಡಿದ ಠಾಣೆಗೇರಿ, ಬೇಡ್ಕಣಿಯ ವ್ಯಕ್ತಿ ಬಲೆಗೆ ಬಿದ್ದಿದ್ದಾನೆ.

ಗಣಪತಿ ಅಲಿಯಾಸ್ ಗಣೇಶ ಕೃಷ್ಣ ನಾಯ್ಕ ಎಂಬಾತನೆ ಬಂಧಿತ ಆರೋಪಿ. ಈತ ಬೇಡ್ಕಣಿ ಠಾಣೆಗೇರಿಯ ಜಯಂತ ರಾಮಾ ನಾಯ್ಕ ಎಂಬುವವರು ಮನೆಗೆ ಬೀಗ ಹಾಕಿ ಗದ್ದೆಗೆ ಹೋದ ಸಮಯದಲ್ಲಿ ಬೀಗ ಮುರಿದು ಒಳಗೆ ನುಗ್ಗಿದ್ದ. ಗೊದ್ರೆಜ್ ಪಕ್ಕದ ಚೀಲದಲ್ಲಿಟ್ಟಿದ್ದ  ಚಾವಿಯಿಂದ ಗೊದ್ರೆಜ ಬಾಗಿಲನ್ನ ತೆಗೆದು ಅದರಲ್ಲಿದ್ದ 10 ಗ್ರಾಂ ತೂಕದ ಬಂಗಾರದ ಬುಗಡಿ, ಸರಪಳಿ 5.5 ಗ್ರಾಂ ಬಂಗಾರದ ಕುಡುಕು, 2.5 ಗ್ರಾಂ ತೂಕದ ಬಂಗಾರದ ಮಾಟಿಲ, 3 ಗ್ರಾಂ ತೂಕದ ಬಂಗಾದ ಉಂಗುರ ಸೇರಿ ಒಟ್ಟು 1.26,000/- ರೂ ಬೆಲೆಯ ಬಂಗಾರದ ಆಭರಣವನ್ನ ಕಳತನ ಮಾಡಿ ಪರಾರಿಯಾಗಿದ್ದ.

ಈ ಬಗ್ಗೆ ಜಯಂತ ನಾಯ್ಕ ಅವರು ಸಿದ್ದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಎಂ ನಾರಾಯಣ, ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಜಗದೀಶ ನಾಯ್ಕ,  ಸಿಪಿಐ ಗಣೇಶ ಕೆ.ಎಲ್. ಮಾರ್ಗದರ್ಶನದಲ್ಲಿ. ಜೆ.ಬಿ. ಸೀತಾರಾಮ ಪೊಲೀಸ್ ನಿರೀಕ್ಷಕರು ಸಿದ್ದಾಪುರ ಪೊಲೀಸ್‌ಠಾಣಿ, ಅನೀಲ ಬಿ.ಎಂ. ಪಿ.ಎಸ್‌.ಐ ಸಿದ್ದಾಪುರ ಪೊಲೀಸ್‌ಠಾಣೆ, ಗೀತಾ ಶಿರ್ಶಿಕರ ಪಿ.ಎಸ್.ಐ ಸಿದ್ದಾಪುರ ಪೊಲೀಸ್‌ ಠಾಣೆ ಮತ್ತು ಸಿಬ್ಬಂದಿಗಳಾದ ರಮೇಶ ಕೂಡಲ್‌, ದೇವರಾಜ ಟಿ ನಾಯ್ಕ, ಮಂಜಪ್ಪ ಟಿ ತಂಡ ಕಳ್ಳತನದ ಆರೋಪಿಯನ್ನ ಬಂಧಿಸುವಲ್ಲಿ ಯಶಸ್ವಿಯಾಗಿದೆ.

ಇದನ್ನು ಓದಿ :
ಜೀವನ ಸಂಗಾತಿಯನ್ನ 50 ಪೀಸ್ ಮಾಡಿದ ಭೂಪ

ಗೋಕರ್ಣದಲ್ಲಿ ಜೀವ ಕಳೆದುಕೊಂಡ ಪ್ರವಾಸಿಗರು

ಶಿಕ್ಷಕರ ಬೇಜವಾಬ್ದಾರಿ. ವಿದ್ಯಾರ್ಥಿನಿ ಸಾವು