ಹಳಿಯಾಳ(Haliyal) : ಟ್ರಕ್ ಮತ್ತು ಬೈಕ್(Truck and Bike Accident) ನಡುವೆ ಸಂಭವಿಸಿದ ಅಪಘಾತದಲ್ಲಿ ಇಬ್ಬರು ಬೈಕ್ ಸವಾರರ ಮೃತಪಟ್ಟ ಧಾರುಣ ಘಟನೆ ಭಾನುವಾರ ನಡೆದಿದೆ.
ಸಿದ್ದು ಬೈರು ಜೋರೆ(19), ಜಾನಾಬೈ ಪಾಂಡುರಮಸೆ (35) ಮೃತ ಬೈಕ್ ಸವಾರರೆಂದು ಗುರುತಿಸಲಾಗಿದೆ. ಹಳಿಯಾಳದ ಡೊಂಕನಾಳ ಕ್ರಾಸ್(Donkanala Cross) ಬಳಿ ಈ ಘಟನೆ ಸಂಭವಿಸಿದೆ. ಬೈಕ್ ಸವಾರರು ಭಾಗವತಿಯಿಂದ ಹಳಿಯಾಳಕ್ಕೆ (Bhagawati to Haliyal) ತೆರಳುತ್ತಿದ್ದರು. ಟ್ರಕ್ ಕೆಸರೋಳ್ಳಿಯಿಂದ ಯಲ್ಲಾಪುರಕ್ಕೆ(Kesarolli to yallapur) ತೆರಳುತ್ತಿದ್ದಾಗ ಡೊಂಕನಾಳ ಕ್ರಾಸ್ ಬಳಿ ಈ ಅಪಘಾತ ಸಂಭವಿಸಿದೆ.
ಹಳಿಯಾಳ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಹಳಿಯಾಳ ಪೊಲೀಸ್ ಠಾಣಾ (Haliyal Police Station) ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಇದನ್ನು ಓದಿ : ಕಾರ್ಮಿಕ ಸುರಕ್ಷತೆ ಕಾಪಾಡುವಲ್ಲಿ ಬಿಲ್ಟ್ ಕಂಪನಿ ವಿಫಲ : ದಿಲೀಪ್ ಅರ್ಗೇಕರ್ ಆಕ್ರೋಶ
ಬಿಗ್ ಬಾಸ್ ವೀಕ್ಷಕರಿಗೆ ಶಾಕ್. ಫೈರ್‌ಬ್ರಾಂಡ್ ಚೈತ್ರಾ ಕುಂದಾಪುರ ಔಟ್.
ಗ್ರಾಮಸ್ಥರ ಪ್ರತಿಭಟನೆಗೆ ಬೆಂಡಾದ ಗ್ರಾಸಿಮ್ ಕಂಪನಿ ಅಧಿಕಾರಿಗಳು. ಕಾರ್ಖಾನೆ ತಾತ್ಕಾಲಿಕ ಬಂದ್.